ಉಕ್ರೇನ್‍ನಲ್ಲಿ ಅಪಹರಣವಾಗಿದ್ದ ಬೀದರ್ ವಿದ್ಯಾರ್ಥಿ ಶೀಘ್ರವೇ ಭಾರತಕ್ಕೆ ವಾಪಸ್

preethi shettigar

|

Updated on:Jan 20, 2021 | 5:54 PM

ಉಕ್ರೇನ್ ದೇಶದಿಂದ ಅಜಯ್​ಕುಮಾರ್ ಕರೆತರುವಲ್ಲಿ ಪಶು ಸಂಗೋಪನೆ  ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಯಶಸ್ವಿಯಾಗಿದ್ದಾರೆ.

ಉಕ್ರೇನ್‍ನಲ್ಲಿ ಅಪಹರಣವಾಗಿದ್ದ ಬೀದರ್ ವಿದ್ಯಾರ್ಥಿ ಶೀಘ್ರವೇ ಭಾರತಕ್ಕೆ ವಾಪಸ್
ಅಜಯ್ ಕುಮಾರ್

Follow us on

ಬೀದರ್​:  ಜಿಲ್ಲೆಯ ವಿದ್ಯಾರ್ಥಿಯೊಬ್ಬ ವೈದ್ಯಕೀಯ ಪದವಿ ಶಿಕ್ಷಣಕ್ಕಾಗಿ 2020ರ ಡಿಸೆಂಬರ್ 13 ರಂದು ಉಕ್ರೇನ್ ದೇಶಕ್ಕೆ ತೆರಳಿದ್ದು, 2021 ಜನವರಿ 16 ರಂದು ಅಪರಿಚಿತ ವ್ಯಕ್ತಿಗಳು ವಿದ್ಯಾರ್ಥಿಯನ್ನು ಅಪಹರಣ ಮಾಡಿದ್ದಾರೆ  ಎನ್ನಲಾಗಿತ್ತು. ಸದ್ಯ ಉಕ್ರೇನ್ ದೇಶದಲ್ಲಿ ಅಪಹರಣವಾಗಿದ್ದ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಹುಲ್ಯಾಳ ಗ್ರಾಮದ ವಿದ್ಯಾರ್ಥಿ ತಾಯ್ನಾಡಿಗೆ ವಾಪಸಾಗುತ್ತಿದ್ದಾರೆ.

ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿ ಅಜಯ್​ಕುಮಾರ್ ಜನವರಿ 26ರಂದು ಅಪಹರಣವಾದ ವಿಷಯ ತಿಳಿದ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಆತಂಕಕ್ಕೆ ಒಳಗಾಗಿದ್ದ ವಿದ್ಯಾರ್ಥಿಯ ಕುಟುಂಬಸ್ಥರನ್ನು ಸಂಪರ್ಕಿಸಿ, ತಮ್ಮ ಮಗುವನ್ನು ಮರಳಿ ತರುತ್ತೇವೆ ಎಂದು ಸಮಾಧಾನ ಮಾಡಿದ್ದರು. ಆ ಮೂಲಕ ಉಕ್ರೇನ್ ದೇಶದಿಂದ ಅಜಯ್ ​ಕುಮಾರ್ ಕರೆತರುವಲ್ಲಿ ಪಶು ಸಂಗೋಪನೆ  ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್  ಯಶಸ್ವಿಯಾಗಿದ್ದಾರೆ.

ಸಚಿವ ಪ್ರಭು ಚವ್ಹಾಣ್ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ತಂದು, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾದ ಎಸ್. ಜೈಶಂಕರ್ ಅವರ ಮೂಲಕ ಉಕ್ರೇನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು. ನಂತರ ವಿದ್ಯಾರ್ಥಿಯು ಕಿರ್ಗಿಸ್ತಾನ್‍ದಲ್ಲಿರುವ ಮಾಹಿತಿ ಲಭ್ಯವಾಯಿತು. ತದನಂತರ ಕಿರ್ಗಿಸ್ತಾನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ವಿದ್ಯಾರ್ಥಿಯನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಲಾಯಿತು. ಸದ್ಯ ವಿದ್ಯಾರ್ಥಿ ಅಜಯ್ ಕುಮಾರ್​ ಕಿರ್ಗಿಸ್ತಾನ್‍ದಿಂದ ಭಾರತಕ್ಕೆ ಆಗಮಿಸಲಿದ್ದಾರೆ.

ಸಾರ್ವಜನಿಕರಲ್ಲಿ ಮನವಿ: ದೇಶದಲ್ಲಿರುವ ಕಾಲೇಜುಗಳು ಯಾರಿಗೂ ಕಮ್ಮಿಯಿಲ್ಲದಂತೆ ಶಿಕ್ಷಣ ನೀಡುತ್ತಿವೆ. ಹಲವು ಖಾಸಗಿ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಬೇರೆ ದೇಶಗಳ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಹಾಗಾಗಿ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್  ಕಿವಿಮಾತು ಹೇಳಿದ್ದಾರೆ.

ಒಂದು ವೇಳೆ ವಿದೇಶಕ್ಕೆ ಹೋಗುವ ಅನಿವಾರ್ಯತೆಯಿದ್ದಲ್ಲಿ ಮೊದಲಿಗೆ ಆ ದೇಶದ ವಿದೇಶಾಂಗ ನೀತಿಗಳು, ಸುರಕ್ಷತೆ ಮತ್ತು ಪ್ರವೇಶ ಬಯಸುವ ಕಾಲೇಜಿನ ಹಿನ್ನೆಲೆ ಹಾಗೂ ಅಲ್ಲಿನ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ವಿಶೇಷವಾಗಿ ಸುರಕ್ಷತೆಯ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಅಪರಿಚಿತ ವ್ಯಕ್ತಿಗಳು ಅಥವಾ ಏಜೆನ್ಸಿಗಳ ಆಕರ್ಷಕ ಸೌಲಭ್ಯಗಳಿಗೆ ಮಾರುಹೋಗಿ ವಿದೇಶಗಳಿಗೆ ಹೋಗದಿರಿ ಎಂದು ಸಚಿವ ಪ್ರಭು ಚವ್ಹಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಐರನ್ ಮಾಡುವಾಗ ಮೆಡಿಕಲ್ ವಿದ್ಯಾರ್ಥಿ ನಿಗೂಢ ಸಾವು

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada