ಲೇಡಿ ಕಾನ್ಸ್ಟೇಬಲ್ ಮೇಲೆ ಶಾಸಕಿ ಸೌಮ್ಯಾ ರೆಡ್ಡಿ ಹಲ್ಲೆ: ವಿಡಿಯೋ ವೈರಲ್
ಲೇಡಿ ಕಾನ್ಸ್ಟೇಬಲ್ ಹಾಗೂ ಸೌಮ್ಯಾ ರೆಡ್ಡಿ ನಡುವೆ ವಾಗ್ವಾದ ಕೂಡ ಏರ್ಪಟ್ಟಿದೆ. ಈ ವೇಳೆ ಸೌಮ್ಯಾ ರೆಡ್ಡಿ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಫ್ರೀಡಂ ಪಾರ್ಕ್ನಿಂದ ರಾಜಭವನದವರೆಗೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ಹೊರಟಿದ್ದರು. ಈ ವೇಳೆ ಅವರನ್ನು ಮಹಾರಾಣಿ ಕಾಲೇಜು ಬಳಿ ಪೊಲೀಸರು ವಶಕ್ಕೆ ಪಡೆದರು.
ಈ ಮಧ್ಯೆ ವಶಕ್ಕೆ ಪಡೆಯಲು ಬಂದ ಪೊಲೀಸರಿಗೆ ಶಾಸಕಿ ಸೌಮ್ಯಾ ರೆಡ್ಡಿ ಅವಾಜ್ ಹಾಕಿದ್ದಾರೆ. ಲೇಡಿ ಕಾನ್ಸ್ಟೇಬಲ್ ಹಾಗೂ ಸೌಮ್ಯಾ ರೆಡ್ಡಿ ನಡುವೆ ವಾಗ್ವಾದ ಕೂಡ ಏರ್ಪಟ್ಟಿದೆ. ಈ ವೇಳೆ ಸೌಮ್ಯಾ ರೆಡ್ಡಿ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ನಂತರ ಅವರನ್ನು ಮನವೊಲಿಸಿ ವಾಹನದ ಮೇಲೆ ಹತ್ತಿಸಲಾಗಿದೆ. ಇದರ ವಿಡಿಯೋ ಸಧ್ಯ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಧರಣಿ ನಿರತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಆಕ್ರೋಶ ಹೊರ ಹಾಕಿದರು. ಸಿದ್ದರಾಮಯ್ಯ ಕೂಡ ಈ ಸಂಬಂಧ ಅಸಮಾಧಾನ ಹೊರ ಹಾಕಿದ್ದಾರೆ. ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯ ಸರ್ಕಾರ ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
Published On - 4:18 pm, Wed, 20 January 21