ಬೆಂಗಳೂರು: ವಿ.ಕೆ.ಶಶಿಕಲಾ ನಟರಾಜನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ 2.30ರ ಸುಮಾರಿಗೆ ಬೌರಿಂಗ್ ಆಸ್ಪತ್ರೆಯಿಂದ ಶಶಿಕಲಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ, ವಿ.ಕೆ.ಶಶಿಕಲಾ ನಟರಾಜನ್‌ಗೆ ವಿವಿಧ ಆರೋಗ್ಯ ತಪಾಸಣೆ ನಡೆಸಲಾಯಿತು ಎಂದು ಡಾ.ರಮೇಶ್ ಕೃಷ್ಣ ಹೇಳಿದರು.
ಜೊತೆಗೆ, ಅವರಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯಿಡ್ ಇದೆ. ಹಾಗಾಗಿ, ಶಶಿಕಲಾ ನಟರಾಜನ್‌ಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ರಮೇಶ್ ಕೃಷ್ಣ ಮಾಹಿತಿ ಕೊಟ್ಟಿದ್ದಾರೆ.
ಅಪರಾಧಿ ವಿ.ಕೆ.ಶಶಿಕಲಾ ನಟರಾಜನ್‌ಗೆ ಕೊರೊನಾ ಲಕ್ಷಣ
ಇದೀಗ, ವಿ.ಕೆ.ಶಶಿಕಲಾ ನಟರಾಜನ್‌ಗೆ ಕೊರೊನಾ ಲಕ್ಷಣ ಪತ್ತೆಯಾಗಿದೆ ಎಂಬ ಮಾಹಿತಿ ದೊರೆತಿದೆ. ಅಚ್ಚರಿಯ ಸಂಗತಿಯೆಂದರೆ, RTPCR ಟೆಸ್ಟ್ನಲ್ಲಿ ಶಶಿಕಲಾ ಕೊವಿಡ್ ವರದಿ ನೆಗೆಟಿವ್ ಬಂದಿದೆ.
ಬೌರಿಂಗ್ನಲ್ಲಿ RTPCR ಟೆಸ್ಟ್ ಗೆ ಸ್ವ್ಯಾಬ್ ಪಡೆಯಲಾಗಿತ್ತು. ಆದರೆ, ವರದಿ ನೆಗೆಟಿವ್ ಬಂದಿತ್ತು. ಇದೀಗ, ವಿಕ್ಟೋರಿಯಾದಲ್ಲಿ ಸಿ.ಟಿ ಸ್ಕ್ಯಾನ್ನಲ್ಲಿ ಪಾಸಿಟಿವ್ ಬಂದಿದೆ ಎಂದು ವಿಕ್ಟೋರಿಯಾ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಹಾಗಾಗಿ, ಅವರಿಗೆ ಮತ್ತೊಂದು ಬಾರಿ RTPCR ಟೆಸ್ಟ್ ಮಾಡಲು ನಿರ್ಧಾರ ಮಾಡಲಾಗಿದೆ.
ಬೌರಿಂಗ್ ಆಸ್ಪತ್ರೆಯಲ್ಲಿ ಶಶಿಕಲಾರನ್ನು ಭೇಟಿ ಮಾಡಲು ಬಂದ ವಕೀಲರಿಗೆ ಅವಕಾಶ ನಿರಾಕರಿಸಿದ ಪೊಲೀಸರು
Published On - 9:19 pm, Thu, 21 January 21