ರಮೇಶ್ ಜಾರಕಿಹೊಳಿ ಬಗ್ಗೆ ಮೀಮ್ಸ್ ಮಾಡಿದ ಸತೀಶ್ ಜಾರಕಿಹೊಳಿ‌

|

Updated on: Nov 19, 2019 | 12:58 PM

ಬೆಳಗಾವಿ: ಗೋಕಾಕ್ ಅಸೆಂಬ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಅಣ್ತಮ್ಮಾಸ್​ ನಡುವಿನ ಕಾಳಗ ಜೋರಾಗಿಯೇ ಶುರುವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ‌ ಸ್ಪರ್ಧಿಸುತ್ತಿದ್ದಾರೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರ ತಮ್ಮ ಲಖನ್ ಜಾರಕಿಹೊಳಿ‌ ಕಣದಲ್ಲಿದ್ದಾರೆ. ಅಣ್ತಮ್ಮಂದಿರ ನಡುವೆ ಮಾತಿನ ಏಟುಎದಿರೇಟು ಜೋರಾಗಿಯೇ ಸಾಗಿದೆ. ರಮೇಶ್ ಜಾರಕಿಹೊಳಿ‌ ವಿರುದ್ಧ ವಾಗ್ದಾಳಿ ನಡೆಸಿ ವಿಭಿನ್ನವಾಗಿ ಅಣುಕಿಸುವ ಕೆಲಸಕ್ಕೆ ಸತೀಶ್ ಜಾರಕಿಹೊಳಿ‌ ಮುಂದಾಗಿದ್ದಾರೆ. ಈ ಬಗ್ಗೆ ಒಂದು ಮಿಮ್ ಮಾಡಿ ರಮೇಶ್ ಜಾರಕಿಹೊಳಿ‌‌ಯನ್ನು ಅಣುಕಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ […]

ರಮೇಶ್ ಜಾರಕಿಹೊಳಿ ಬಗ್ಗೆ ಮೀಮ್ಸ್ ಮಾಡಿದ ಸತೀಶ್ ಜಾರಕಿಹೊಳಿ‌
Follow us on

ಬೆಳಗಾವಿ: ಗೋಕಾಕ್ ಅಸೆಂಬ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಅಣ್ತಮ್ಮಾಸ್​ ನಡುವಿನ ಕಾಳಗ ಜೋರಾಗಿಯೇ ಶುರುವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ‌ ಸ್ಪರ್ಧಿಸುತ್ತಿದ್ದಾರೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರ ತಮ್ಮ ಲಖನ್ ಜಾರಕಿಹೊಳಿ‌ ಕಣದಲ್ಲಿದ್ದಾರೆ. ಅಣ್ತಮ್ಮಂದಿರ ನಡುವೆ ಮಾತಿನ ಏಟುಎದಿರೇಟು ಜೋರಾಗಿಯೇ ಸಾಗಿದೆ.

ರಮೇಶ್ ಜಾರಕಿಹೊಳಿ‌ ವಿರುದ್ಧ ವಾಗ್ದಾಳಿ ನಡೆಸಿ ವಿಭಿನ್ನವಾಗಿ ಅಣುಕಿಸುವ ಕೆಲಸಕ್ಕೆ ಸತೀಶ್ ಜಾರಕಿಹೊಳಿ‌ ಮುಂದಾಗಿದ್ದಾರೆ. ಈ ಬಗ್ಗೆ ಒಂದು ಮಿಮ್ ಮಾಡಿ ರಮೇಶ್ ಜಾರಕಿಹೊಳಿ‌‌ಯನ್ನು ಅಣುಕಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿಂದಿಯ ಬಾಲಾ ಸಾಂಗ್ ಗೆ ಹೋಲಿಕೆ ಮಾಡಿ ರಮೇಶ್ ಜಾರಕಿಹೊಳಿ‌ ಕಾರ್ಯವೈಖರಿಯನ್ನು ಅಣುಕಿಸಿದ್ದಾರೆ.

ಲಖನ್ ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಗೆ ಬಂದಿದ್ದರೆ ಮೋಸ ಅನ್ನಬಹದು. ಲಖನ್ ಜಾರಕಿಹೊಳಿ‌ ಬೆನ್ನಿಗೆ ಚೂರಿ ಹಾಕಿಲ್ಲ. ರಮೇಶ್ ಜಾರಕಿಹೊಳಿ‌ ಹೇಳಿದಂತೆ ಕುಣಿಯಬೇಕು‌ ಅಂದಾಗ ಮಾತ್ರ ಆತ ಒಳ್ಳೆಯವ ಎಂದು ಲಖನ್ ನನಗೆ ಮೋಸ ಮಾಡಿ, ಬೆನ್ನಿಗೆ ಚೂರಿ ಹಾಕಿದ ಎಂಬ ರಮೇಶ್ ಮಾತಿಗೆ ತಿರುಗೇಟು ನೀಡಿದ್ದಾರೆ.

ರಮೇಶ್ ತಾಳಕ್ಕೆ ಜನ ಕುಣಿಯಬೇಕೆಂದು ಬಯಸುತ್ತಾರೆ, ಯಾವ ರೀತಿ ಕುಣಿಯಬೇಕು ಅಂತಾ ಅಂದ್ರೆ ಈ ಚಿತ್ರದ ರೀತಿ ಎಂದು ರಮೇಶ್ ವಿರುದ್ಧ ವಾಗ್ದಾಳಿ ನಡೆಸಿ ವೈರಲ್ ಆಗಿರೋ ಡ್ಯಾನ್ಸ್​ಗೆ ರಮೇಶ್ ಜಾರಕಿಹೊಳಿಯನ್ನ ಹೋಲಿಕೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ವೈರಲ್ ಆಗುತ್ತಿದೆ.

Published On - 10:12 am, Tue, 19 November 19