Savarkar Textbook Row: ರಾಜ್ಯ ಶಿಕ್ಷಣ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಕರ್ನಾಟಕದ ಶಾಲಾ ಪಠ್ಯಪುಸ್ತಕಗಳಲ್ಲಿ ಸಾವರ್ಕರ್ ಅವರ ಬಗ್ಗೆ ಮತ್ತು 1984ರ ದೆಹಲಿ ಸಿಖ್ ಹತ್ಯಾಕಾಂಡದ ಬಗ್ಗೆ ಅಲ್ಪ ಮಾಹಿತಿಯ ಕುರಿತು ಖಾಸಗಿ ಅನುದಾನರಹಿತ ಶಾಲೆಗಳ ಸಂಘ, ಕರ್ನಾಟಕ ಅನುದಾನರಹಿತ ಶಾಲೆಗಳ ನಿರ್ವಹಣೆಗಳ ಸಂಘ (ಕುಸ್ಮಾ) ಸಲ್ಲಿಸಿದ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಗುರುವಾರ ತನ್ನ ಆದೇಶವನ್ನು ಕಾಯ್ದಿರಿಸಿದೆ.

Savarkar Textbook Row: ರಾಜ್ಯ ಶಿಕ್ಷಣ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Savarkar
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 25, 2022 | 12:38 PM

ಬೆಂಗಳೂರು; ಕರ್ನಾಟಕದ ಶಾಲಾ ಪಠ್ಯಪುಸ್ತಕಗಳಲ್ಲಿ ವಿನಾಯಕ ದಾಮೋದರ ಸಾವರ್ಕರ್  ಕುರಿತು ಪಠ್ಯಪುಸ್ತಕದಲ್ಲಿ ತಿಳಿಸುವ ಬಗ್ಗೆ ಮತ್ತು 1984ರ ದೆಹಲಿ ಸಿಖ್ ಹತ್ಯಾಕಾಂಡದ ಬಗ್ಗೆ ಅಲ್ಪ ಮಾಹಿತಿಯ ಕುರಿತು ಖಾಸಗಿ ಅನುದಾನರಹಿತ ಶಾಲೆಗಳ ಸಂಘ, ಕರ್ನಾಟಕ ಅನುದಾನರಹಿತ ಶಾಲೆಗಳ ನಿರ್ವಹಣೆಗಳ ಸಂಘ (ಕುಸ್ಮಾ) ಸಲ್ಲಿಸಿದ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಗುರುವಾರ ತನ್ನ ತೀರ್ಪುನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಮತ್ತು ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠವು ವಾದ – ವಿವಾದವನ್ನು ಆಲಿಸಿದ ನಂತರ ತನ್ನ ಆದೇಶವನ್ನು ಕಾಯ್ದಿರಿಸಿದೆ. ಖಾಸಗಿ ಅನುದಾನರಹಿತ ಶಾಲೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಶಿಕ್ಷಣ ಕಾಯ್ದೆ, 1983ರ ವಿವಿಧ ನಿಬಂಧನೆಗಳ ಅನುಸಾರವಾಗಿ ಮತ್ತು ಅದು ಅಸಾಂವಿಧಾನಿಕ ಎಂದು ಕುಸ್ಮಾ ತನ್ನ ಮನವಿಯಲ್ಲಿ ಹೇಳಿದೆ.

ರಾಜ್ಯ ಸರ್ಕಾರವು ನಿಗದಿಪಡಿಸಿದ ಪಠ್ಯಕ್ರಮಕ್ಕಿಂತ ಹೆಚ್ಚೇನೂ ಮಕ್ಕಳಿಗೆ ಕಲಿಸಬಾರದು ಎಂದು ನಿರ್ದೇಶಿಸುವ ನಿಬಂಧನೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿನ ಹತ್ತಾರು ಇತರ ನಿಬಂಧನೆಗಳ ಜೊತೆಗೆ ಪ್ರಶ್ನಿಸಲಾಗಿದೆ. ಅರ್ಜಿದಾರರಾದ ಕುಸ್ಮಾ ಪರ ವಾದ ಮಂಡಿಸಿದ ವಕೀಲ ಕೆ.ವಿ.ಧನಂಜಯ್, ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಪಠ್ಯಪುಸ್ತಕ ವಿವಾದವನ್ನು ನೆನಪಿಸಿಕೊಳ್ಳುವಂತೆ ಪೀಠಕ್ಕೆ ತಿಳಿಸಿದರು, ಸಾವರ್ಕರ್ ವಿಚಾರಗಳನ್ನು ಉಲ್ಲೇಖಿಸಿ, ಶಾಲಾ ಮಕ್ಕಳ ಕರಡು ಪಠ್ಯಪುಸ್ತಕದಲ್ಲಿ ಸಾವರ್ಕರ್ ಅವರು ಜೈಲಿನಿಂದ ತಪ್ಪಿಸಿಕೊಂಡು ಹೊರಬರುತ್ತಾರೆ ಎಂದು ಹೇಳಿದೆ. ಸರ್ಕಾರವು ಪಠ್ಯಕ್ರಮವನ್ನು ಸಾರ್ವಜನಿಕ ವಿಚಾರಗಳನ್ನು ಒಳಗೊಂಡಂತೆ ಮಕ್ಕಳಿಗೆ ತಿಳಿಸಬೇಕು. ಪಠ್ಯಪುಸ್ತಕದಲ್ಲಿ ಈ ವಿಚಾರಗಳು ಸೂಕ್ತವೆಂದು ತಿಳಿದರೆ ಅದನ್ನು ಮಕ್ಕಳಿಗೆ ಭೋದಿಸಬಹುದು ಮತ್ತು ಮುಕ್ತವಾಗಿ ಕಲಿಸಬಹುದು. ಲಭ್ಯವಿರುವ ಪಠ್ಯಪುಸ್ತಕಗಳನ್ನು ತಾವೇ ಸಿದ್ಧಪಡಿಸಬಹುದು ಅಥವಾ ಮುಕ್ತ ಮಾರುಕಟ್ಟೆಯಿಂದ ಅಳವಡಿಸಿಕೊಳ್ಳಬಹುದು ಎಂದು ವಾದಿಸಲಾಯಿತು. ಸರ್ಕಾರ ತಯಾರಿಸುವ ಪುಸ್ತಕಗಿಂತ, ಮುಕ್ತ ಮಾರುಕಟ್ಟೆ ಸಿಗುವ ಪುಸ್ತಕ ಹೆಚ್ಚು ಮಕ್ಕಳಗಳಿಗೆ ಸ್ನೇಹಿಯಾಗಿದೆ ಎಂದು ಹೇಳಿದರು.

ಇದನ್ನು ಓದಿ: ಹಿಂಡಲಗಾ ಜೈಲಿನಲ್ಲೂ 100 ದಿನ ಇದ್ದ ಸಾವರ್ಕರ್: ವೀರ್ ಸಾವರ್ಕರ್ ಟಿಶರ್ಟ್, ಪೋಟೊ, ಬ್ಯಾನರ್ ಸ್ಮರಣಿಕೆ ವಿತರಣೆ

ನಿಗದಿತ ಪಠ್ಯಕ್ರಮಕ್ಕಿಂತ ಹೆಚ್ಚಿನದನ್ನು ಶಾಲಾ ಮಕ್ಕಳಿಗೆ ಕಲಿಸಬಾರದು ಎಂದು ಹೇಳಲು ಸಂವಿಧಾನದ ಅಡಿಯಲ್ಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಧನಂಜಯ್ ಅವರು 2002 ರ ಟಿಎಂಎ ಪೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ 11 ನ್ಯಾಯಾಧೀಶರ ತೀರ್ಪನ್ನು ಉಲ್ಲೇಖಿಸಿ ವಾದಿಸಿದರು. ಶಾಲೆಯು ಸರ್ಕಾರದಿಂದ ನೆರವು ಪಡೆಯದಿದ್ದಾಗ ಶಾಲಾ ಶಿಕ್ಷಣದಲ್ಲಿ ನಿಯಂತ್ರಣವು ಕನಿಷ್ಠವಾಗಿರಬೇಕು ಎಂದು ಹೇಳಿದರು.

8ನೇ ತರಗತಿಗೆ ಕನ್ನಡ ಭಾಷೆಯ ಪಠ್ಯಪುಸ್ತಕದಲ್ಲಿ ಪರಿಚಯಿಸಲಾದ ಅಧ್ಯಾಯವೊಂದರಲ್ಲಿ ಲೇಖಕ ಕೆ.ಟಿ.ಗಟ್ಟಿ ಅವರ ಪ್ರವಾಸ ಕಥನದ ಆಯ್ದ ಭಾಗಗಳನ್ನು ಒಳಗೊಂಡು, ವಿಡಿ ಸಾವರ್ಕರ್ ಅವರನ್ನು ಅಂಡಮಾನ್‌ನಲ್ಲಿರುವ ಸೆಲ್‌ಗೆ ಭೇಟಿ ನೀಡಿದಾಗ, ಹಿಂದುತ್ವದ ಐಕಾನ್ ಸಾವರ್ಕರ್ ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ಪಠ್ಯಕ್ರಮದಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ. ಇದೀಗ ಈ ಬಗ್ಗೆ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Fri, 25 November 22