ದಾವಣಗೆರೆ: ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಿದ ಶಾಲಾ ಮಕ್ಕಳು; ವಿಡಿಯೋ ನೋಡಿ

| Updated By: ವಿವೇಕ ಬಿರಾದಾರ

Updated on: Apr 14, 2024 | 1:12 PM

ದಾವಣಗೆರೆ ಜಿಲ್ಲೆಯ ಶಾಲಾ ಮಕ್ಕಳು ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಿದರು. ದಾವಣಗೆರೆ ಜಿಲ್ಲಾ ಚುನಾವಣಾ ಅಧಿಕಾರಿ ಡಾ. ವೆಂಕಟೇಶ್ ಎಂವಿ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ‌ಮಕ್ಕಳು ಮತದಾನ ಜಾಗೃತಿ ಅಭಿಯಾನ ಮಾಡಿದರು.

ದಾವಣಗೆರೆ, ಏಪ್ರಿಲ್​ 14: ಲೋಕಸಭೆ ಚುನಾವಣೆಗೆ (Lok Sabha Election) ದಿನಾಂಕ ಘೋಷಣೆಯಾಗಿದೆ. ಕರ್ನಾಟಕದ ಮೊದಲ ಹಂತದ ಮತದಾನ ಏಪ್ರಿಲ್​ 26 ರಂದು ನಡೆದರೆ, ಎರಡನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ. ಜೂನ್​ 4 ರಂದು ಎಣಿಕೆ ನಡೆದು, ಫಲಿತಾಂಶ ಹೊರಬೀಳಲಿದೆ. ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಅಂತ ಚುನಾವಣಾ ಆಯೋಗ ಸಾಕಷ್ಟು ಅರಿವು ಮೂಡಿಸುತ್ತಿದೆ. ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ ಚುನಾವಣೆಯಲ್ಲಿ ಮತದಾರರು ಭಾಗಿಯಾಗಲೆಂದು ಆಯೋಗ ಮತದಾನ ಜಾಗೃತಿ (Voting Awareness) ಕಾರ್ಯಕ್ರಮಗಳನ್ನು ಮಾಡುತ್ತಿದೆ. ಚುನಾವಣಾ ಆಯೋಗ ಹೊರತುಪಡಿಸಿ, ವಿವಿಧ ಸಂಘ-ಸಂಸ್ಥೆಗಳು ಕೂಡ ಮತದಾನ ಜಾಗೃತಿ ಮಾಡುತ್ತಿವೆ. ಜೊತೆಗೆ ಶಾಲೆ-ಕಾಲೇಜುಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿವೆ. ದಾವಣಗೆರೆ ಜಿಲ್ಲೆಯ ಶಾಲಾ ಮಕ್ಕಳು ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಿದರು.

ಜಿಲ್ಲಾ ಚುನಾವಣಾ ಅಧಿಕಾರಿ ಡಾ. ವೆಂಕಟೇಶ್ ಎಂವಿ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ‌ಮಕ್ಕಳು ಮತದಾನ ಜಾಗೃತಿ ಅಭಿಯಾನ ಮಾಡಿದರು. ಭಾರತದ ಭೂಪಟದ ಒಳಗೆ ನಿಂತು, ಕೈಯಲ್ಲಿ ಮೇ 7 ರಂದು ಮತದಾನ ಮಾಡಿ ಅಂತ ಬ್ಯಾನರ್ ಹಿಡಿದು ಮತದಾನ‌ಜಾಗೃತಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Sun, 14 April 24

Follow us on