ಬೆಂಗಳೂರು: ಸೋಮವಾರದಿಂದ (ಆಗಸ್ಟ್ 23) ಕರ್ನಾಟಕ ರಾಜ್ಯದಲ್ಲಿ ಶಾಲೆ ಶುರು ಆಗಲಿದೆ. ಕಳೆದ ಒಂದುವರೆ ವರ್ಷದಿಂದ ಬಂದ್ ಆಗಿದ್ದ ಶಾಲೆಗಳು ಪುನಾರಂಭ ಪಡೆಯಲಿವೆ. ಕೊರೊನಾ ಪ್ರಕರಣಗಳು ಇನ್ನೂ ಸಂಪೂರ್ಣ ಇಳಿಕೆಯಾಗಿಲ್ಲ. ಕೊವಿಡ್19 ಮೂರನೇ ಅಲೆ ಎಂಬ ಆತಂಕವೂ ಮುಂದಿದೆ. ಈ ಮಧ್ಯೆ, ಶಾಲೆ ಓಪನ್ ಆಗಲಿದೆ. ಹಂತ ಹಂತವಾಗಿ ಶಾಲೆ ಆರಂಭ ಆಗಲಿರುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. ನಾಳೆಯಿಂದ 9 ರಿಂದ 12 ನೇ ತರಗತಿಗಳಿಗೆ ಶಾಲೆ ಶುರು ಆಗಲಿದೆ. ಶೇಕಡಾ 2 ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ನಾಳೆ (ಆಗಸ್ಟ್ 23) ಶಾಲೆ ಆರಂಭ ಆಗುವುದಿಲ್ಲ ಎಂದೂ ಮಾಹಿತಿ ನೀಡಲಾಗಿದೆ.
ಈಗಾಗಲೇ 16,850 ಪ್ರೌಢ ಶಾಲೆಗಳು ಹಾಗೂ 5,492 ಪದವಿ ಪೂರ್ವ ಕಾಲೇಜುಗಳಲ್ಲಿ ಶಾಲೆ ಪುನಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳ್ಳಗ್ಗೆ 10 ರಿಂದ 1:30 ರವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಶಾಲಾರಂಭಕ್ಕೆ ಈಗಾಗಲೇ ಶಿಕ್ಷಣ ಇಲಾಖೆ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.
ಶಾಲೆ ಆರಂಭವಾದ್ರೆ ಏನಿರುತ್ತೆ ಗೈಡ್ಲೈನ್ಸ್; ಶಾಲೆಗಳ ಆರಂಭಕ್ಕೆ ಹೇಗಿದೆ ತಯಾರಿ?
ಐದು ಜಿಲ್ಲೆಗಳಿಗೆ ಶಾಲೆ ಓಪನ್ ಭಾಗ್ಯ ಸಧ್ಯಕ್ಕಿಲ್ಲ
ಶೇಕಡಾ 2 ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಾ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಸೋಮವಾರದಿಂದ ಶಾಲೆ ಆರಂಭ ಇರುವುದಿಲ್ಲ. ಕೇರಳ ಭಾಗದಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಆಗಿರುವುದರಿಂದ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕೊವಿಡ್ ಕೇಸ್ಗಳ ಸಂಖ್ಯೆ ಇಳಿಕೆಯಾಗಿಲ್ಲ. ಹೀಗಾಗಿ ಪಾಸಿಟಿವಿಟಿ ದರ ನಿಗದಿತ ಪ್ರಮಾಣಕ್ಕೆ ಇಳಿಕೆಯಾಗಿಲ್ಲ. ಹೀಗಾಗಿ ಈ ಐದು ಜಿಲ್ಲೆಗಳಲ್ಲಿ ಸ್ಥಿತಿಗತಿ ಹೊಂದಿಕೊಂಡು ಶಾಲೆ ಪುನಾರಂಭ ಆಗಲಿದೆ.
ಇದನ್ನೂ ಓದಿ: ಕರ್ನಾಟಕದ ಕೊರೊನಾ ಹಾಟ್ಸ್ಪಾಟ್ ಆಗುತ್ತಿದೆ ದಕ್ಷಿಣ ಕನ್ನಡ; ಕರಾವಳಿಯಲ್ಲಿ ಕೊವಿಡ್ ಹೆಚ್ಚಾಗಲು ಕಾರಣವೇನು?
ಶೇಕಡಾ 2ಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಕಂಡುಬಂದರೆ ಅಂತಹ ಶಾಲೆ ಮುಚ್ಚಲಾಗುವುದು: ಕೆ ಸುಧಾಕರ್