SCSP-TSP ಹಣ ಗ್ಯಾರಂಟಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಹೆಚ್​ಎಂ ರೇವಣ್ಣನ ಸಮರ್ಥನೆ ಹೀಗಿದೆ

|

Updated on: Jul 11, 2024 | 2:24 PM

ಸಿಎಂ ಸಿದ್ದರಾಮಯ್ಯ ಸರ್ಕಾರ ಪಂಚ ಗ್ಯಾರಂಟಿಗಳಿಗೆ ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆಯ ಹಣ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ ಎಂ‌ ರೇವಣ್ಣ ಸುದ್ದಿಗೋಷ್ಠಿ ಹಲವು ಸಂಗತಿ ತಿಳಿಸಿದರು.

SCSP-TSP ಹಣ ಗ್ಯಾರಂಟಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಹೆಚ್​ಎಂ ರೇವಣ್ಣನ ಸಮರ್ಥನೆ ಹೀಗಿದೆ
ಹೆಚ್​ ಎಮ್​ ರೇವಣ್ಣ
Follow us on

ಬೆಂಗಳೂರು, ಜುಲೈ 11: ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆಗೆ (SCSP-TSP) ಮೀಸಲಿಟ್ಟ ಹಣ ಗ್ಯಾರಂಟಿಗೆ ಬಳಸಲಾಗುತ್ತಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ ಎಂ‌ ರೇವಣ್ಣ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್​ಇಪಿ-ಟಿಎಸ್​​ಪಿ ಹಣವನ್ನು ಸಿದ್ದರಾಮಯ್ಯ (Siddaramaiah) ಸರ್ಕಾರ ಸರಿಯಾಗಿ ಬಳಸಿಕೊಂಡಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲೂ ದಲಿತ ಫಲಾನುಭವಿಗಳು ಇದ್ದಾರೆ. ಹೀಗಾಗಿ ಎಸ್​ಇಪಿ-ಟಿಎಸ್​​ಪಿ ಹಣ ಹಣವನ್ನು ಗ್ಯಾರಂಟಿಗೆ ಬಳಸಲಾಗುತ್ತಿದೆ. ಹಣ ದುರುಪಯೋಗ ಆದಾಗ ನಾವು ಪರಿಶೀಲನೆ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು.

ಪರಿಶಿಷ್ಟ ಪಂಗಡ ರಾಷ್ಟ್ರೀಯ ಆಯೋಗ ರಾಜ್ಯ ಸರ್ಕಾರಕ್ಕೆ ನೋಟಿಸ್​ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಅವರು ನೋಟಿಸ್ ಕೊಟ್ಟಿರುವುದು ಬೇರೆ ಕಾರಣಕ್ಕೆ. ಅವರು ಕೊಟ್ಟ ನೋಟಿಸ್​ಗೆ ಸರಿಯಾದ ಉತ್ತರ ನೀಡುತ್ತೇವೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಅನೇಕ ಆಯೋಗಗಳು ಇವೆ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಇವೆ. ಅದೇ ರೀತಿ ವಿವಿಧ ಆಯೋಗಗಳಿವೆ. ಹೀಗಾಗಿ ರಾಜ್ಯದಲ್ಲೂ ಪರಿಶಿಷ್ಟ ಪಂಗಡದಲ್ಲಿ‌ ಏನೋ ನಡೆದಿದೆ ಅಂತ ಪತ್ರ ಬರೆದ್ದಾರೆ. ಇದಕ್ಕೆ ಉತ್ತರ ಕೊಡುತ್ತೇವೆ. ನಾವು ಯಾವುತ್ತೂ ಕೂಡ ಸುಪ್ರೀಂಕೋರ್ಟ್ ‌ಆದೇಶ‌ ಪಡೆದು ಉತ್ತರ ನೀಡಲ್ಲ. ಕೇಂದ್ರದಿಂದ ಬರುವ ಅನುದಾನಕ್ಕಾಗಿ ಬೇಡಿಕೊಳ್ಳುವ ಹಾಗಾಗಿದೆ. ಅಂತದರಲ್ಲಿ ಇದಕ್ಕೆ ಉತ್ತರ ಕೊಡಲು ಸಿದ್ದರಾಗಿದ್ದೇವೆ ಎಂದರು.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗೆ SCSP-TSP ಹಣ ಬಳಕೆ: ವರದಿ ಕೇಳಿದ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ

ದಲಿತರ ಹಣ ಗ್ಯಾರಂಟಿ‌ಗೆ ಬಳಸಿಕೊಂಡಿದ್ದನ್ನು ಬಿಜೆಪಿ ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಿದ್ದವಾಗಿರುವ ವಿಚಾರವಾಗಿ ಮಾತನಾಡಿದ ಅವರು, ಇದು ಅವರ ಕೆಲಸ. ನಾನು ಕೂಡ ಇದನ್ನೇ ಮಾಡಿದ್ದು. ಅಲ್ಲಿ ‌ನಾವು ಉತ್ತರ ನೀಡುತ್ತೇವೆ. ಬಿಜೆಪಿಯವರು ಕೇಳುತ್ತಾರೆ ಅಂತ ಹೆದರಿಕೊಳ್ಳಲು ಆಗುತ್ತಾ? ಎಂದು ಹೇಳಿದರು.

ಏನಿದು ಹಣ ಬಳಕೆ

ಸಿಎಂ ಸಿದ್ದರಾಮಯ್ಯ ಸರ್ಕಾರ ಪಂಚ ಯೋಜನೆಗಳಿಗೆ ಹಣ ಹೊಂದಿಸಲು ಕಸರತ್ತು ನಡೆಸಿದೆ. ಹೀಗಾಗಿ 2024-25ನೇ ಹಣಕಾಸು ವರ್ಷಕ್ಕಾಗಿ ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆಗೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ) ಮೀಸಲಿಟ್ಟಿದ್ದ 39,171 ಕೋಟಿ ರೂ. ಅನುದಾನದಲ್ಲಿ 14,282 ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:09 pm, Thu, 11 July 24