ಅಪ್ರಾಪ್ತ ಹೆಣ್ಣುಮಕ್ಕಳಿಗೆ ಕಿರುಕುಳ: SDPI ಸಮಿತಿಯ ಅಧ್ಯಕ್ಷ ಸಿದ್ದಿಕ್ ಉಳ್ಳಾಲ ಬಂಧನ

| Updated By: ರಾಜೇಶ್ ದುಗ್ಗುಮನೆ

Updated on: Jan 23, 2021 | 4:13 PM

ಅಪ್ರಾಪ್ತ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ SDPI ಸಮಿತಿಯ ಅಧ್ಯಕ್ಷ ಸಿದ್ದಿಕ್ ಉಳ್ಳಾಲರನ್ನು ಬಂಧಿಸಲಾಗಿದೆ.

ಅಪ್ರಾಪ್ತ ಹೆಣ್ಣುಮಕ್ಕಳಿಗೆ ಕಿರುಕುಳ: SDPI ಸಮಿತಿಯ ಅಧ್ಯಕ್ಷ ಸಿದ್ದಿಕ್ ಉಳ್ಳಾಲ ಬಂಧನ
ಬಂಧಿತ ಆರೋಪಿ
Follow us on

ಮಂಗಳೂರು: ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ SDPI ಸಮಿತಿಯ ಅಧ್ಯಕ್ಷ ಸಿದ್ದಿಕ್ ಉಳ್ಳಾಲರನ್ನು, ಪೋಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯೋರ್ವಳು 15 ವರ್ಷಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡು ಉಳ್ಳಾಲ ನಿವಾಸಿಯೊಬ್ಬನನ್ನು ಮದುವೆಯಾಗಿದ್ದರು. ಬಳಿಕ ಅವರ ಪತಿ ಇಬ್ಬರು ಹೆಣ್ಣು ಮ್ಮಕಳ್ಳನ್ನು ನೀಡಿ ಪರಾರಿಯಾಗಿದ್ದ. ಈ ವಿಷಯ ತಿಳಿದ ಅಧ್ಯಕ್ಷ ಸಿದ್ದಿಕ್ ನೆರವಿನ ನೆಪದಲ್ಲಿ ಮಹಿಳೆಯ ಮನೆಗೆ ಬರುತ್ತಿದ್ದರು. ಈ ವೇಳೆ ಮಹಿಳೆಯನ್ನ ಬಳಸಿಕೊಳ್ಳಲು ಯತ್ನಿಸಿ ವಿಫಲವಾಗಿದ್ದ. ನಂತರ, ಇಬ್ಬರು ಹೆಣ್ಣು ಮಕ್ಕಳ ‌ಮೇಲೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪ ಈತನ ಮೇಲಿದೆ. ಮಹಿಳೆ ನೀಡಿದ ದೂರಿನ ಮೇಲೆ ಪೊಲೀಸರು SDPI ವಲಯ ಸಮಿತಿ ಅಧ್ಯಕ್ಷ ಸಿದ್ದಿಕ್​ರನ್ನು ಬಂಧಿಸಿದ್ದಾರೆ.

SDPI ಸಮಿತಿಯ ಅಧ್ಯಕ್ಷ ಸಿದ್ದಿಕ್ ಉಳ್ಳಾಲ

ಸಹಾಯದ ನೆಪದಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ.. SDPI ಮುಖಂಡನ ವಿರುದ್ಧ ಪೋಕ್ಸೊ ಕೇಸ್ ದಾಖಲು