ನಿವೃತ್ತ ಪೊಲೀಸ್ ಅಧಿಕಾರಿ ಪುತ್ರನಿಂದ ಕಾರು ಡ್ರೈವ್ ಮಾಡುವಾಗ.. ಸೀಟ್ ಬದಲಿಸಿ ಹುಚ್ಚಾಟ; ಕ್ರಮಕ್ಕೆ ಸ್ಥಳೀಯರಿಂದ ಆಗ್ರಹ

| Updated By: ಸಾಧು ಶ್ರೀನಾಥ್​

Updated on: Feb 08, 2021 | 12:36 PM

ಕಾರು ವೇಗವಾಗಿ ಡ್ರೈವ್ ಮಾಡುವಾಗ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ ವಿನಯ್ ಹಾಗೂ ಸ್ನೇಹಿತ ಸೀಟ್ ಬದಲಾವಣೆ ಮಾಡಿ ಕಾರಿನಲ್ಲಿ ಹುಚ್ಚಾಟ ಮೆರೆದಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ ಪುತ್ರನಿಂದ ಕಾರು ಡ್ರೈವ್ ಮಾಡುವಾಗ.. ಸೀಟ್ ಬದಲಿಸಿ ಹುಚ್ಚಾಟ; ಕ್ರಮಕ್ಕೆ ಸ್ಥಳೀಯರಿಂದ ಆಗ್ರಹ
ವಿನಯ್ ಹುಲಸಗುಂದ, ಅಮನ್ ರಾಠೋಡ್ ಮತ್ತು ಮನೋಜ್ ಬಿರಾದಾರ್
Follow us on

ವಿಜಯಪುರ: ಕಾರು ವೇಗವಾಗಿ ಡ್ರೈವ್ ಮಾಡುವಾಗ ಸೀಟ್ ಬದಲಾವಣೆ ಮಾಡಿ ಕಾರಿನಲ್ಲಿ ಹುಚ್ಚಾಟ ಮೆರೆದಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ ವಿನಯ್ ಹುಲಸಗುಂದ ಹಾಗೂ ಆತನ ಸ್ನೇಹಿತ ಮನೋಜ್ ಬಿರಾದಾರ್​ ಕಾರು ಚಲಿಸುತ್ತಿರುವಾಗ ಸೀಟು ಬದಲಿಸಿದ್ದಾರೆ. ಯುವಕರ ಹುಚ್ಚಾಟಕ್ಕೆ ಕ್ರಮ‌ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿನಯ್ ಹುಲಸಗುಂದ ಹಾಗೂ ಆತನ ಸ್ನೇಹಿತರು ಪ್ರವಾಸಕ್ಕೆ ಹೊರಟಿದ್ದರು. ಈ ವೇಳೆ ಜೋರಾಗಿ ಕಾರನ್ನು ಓಡಿಸುತ್ತಾ ಡ್ರೈವಿಂಗ್​ ಸೀಟ್​ ಬದಲಾಯಿಸುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಸ್ನೇಹಿತರ ಗುಂಪಿನಲ್ಲಿ ಒಬ್ಬರಾದ ಅಮನ್ ರಾಠೋಡ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಇಂತಹ ಕೃತ್ಯಕ್ಕೆ ಕ್ರಮ ಕೈಗೊಳ್ಳಲೇ ಬೇಕು ಎಂದು ಆಗ್ರಹಿಸಿದ್ದಾರೆ.

ಮದ್ಯ ಸೇವಿಸಿ ಕಾರು ಚಾಲನೆ ಪ್ರಶ್ನಿಸಿದ್ದಕ್ಕೆ MLC ಪುತ್ರ, ಸ್ನೇಹಿತರಿಂದ ಪೊಲೀಸರ ಮೇಲೆ ಹಲ್ಲೆ..