ಪರಿಷತ್ ಟಿಕೆಟ್ಗಾಗಿ ಫೈಟ್, ಸಿದ್ದರಾಮಯ್ಯ-ಡಿಕೆಶಿ ಸೀಕ್ರೆಟ್ ಮೀಟಿಂಗ್!
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಪರಿಷತ್ ಟಿಕೆಟ್ ಫೈಟ್ ಜೋರಾಗ್ತಿದೆ. ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ & ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಾಸಗಿ ಸ್ಥಳದಲ್ಲಿ ಸಭೆ ನಡೆಸಿದ್ರು. ಮತ್ತೊಂದೆಡೆ ಸಿಎಂ ಬಿಎಸ್ವೈ ಕೂಡ ಅನರ್ಹರ ಪರ ಹೋರಾಟಕ್ಕಿಳಿದಿದ್ದಾರೆ. ಕೊರೊನಾ ಹಾವಳಿ ನಡುವೆಯೂ ರಾಜ್ಯ ರಾಜಕೀಯ ಚುರುಕು ಪಡೆದುಕೊಂಡಿದೆ. ವಿಧಾನ ಪರಿಷತ್ ಟಿಕೆಟ್ಗಾಗಿ ಪೈಪೋಟಿ ಶುರುವಾಗಿದೆ. ಎಲ್ಲಾ ಪಕ್ಷದ ನಾಯಕರು ಲಾಬಿ ನಡೆಸೋಕೆ ಮುಂದಾಗಿದ್ದಾರೆ. ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸೋಕೆ ಸರ್ಕಸ್ ಮಾಡ್ತಿದ್ದಾರೆ. ಕಾಂಗ್ರೆಸ್ನಲ್ಲಿ […]
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಪರಿಷತ್ ಟಿಕೆಟ್ ಫೈಟ್ ಜೋರಾಗ್ತಿದೆ. ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ & ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಾಸಗಿ ಸ್ಥಳದಲ್ಲಿ ಸಭೆ ನಡೆಸಿದ್ರು. ಮತ್ತೊಂದೆಡೆ ಸಿಎಂ ಬಿಎಸ್ವೈ ಕೂಡ ಅನರ್ಹರ ಪರ ಹೋರಾಟಕ್ಕಿಳಿದಿದ್ದಾರೆ.
ಕೊರೊನಾ ಹಾವಳಿ ನಡುವೆಯೂ ರಾಜ್ಯ ರಾಜಕೀಯ ಚುರುಕು ಪಡೆದುಕೊಂಡಿದೆ. ವಿಧಾನ ಪರಿಷತ್ ಟಿಕೆಟ್ಗಾಗಿ ಪೈಪೋಟಿ ಶುರುವಾಗಿದೆ. ಎಲ್ಲಾ ಪಕ್ಷದ ನಾಯಕರು ಲಾಬಿ ನಡೆಸೋಕೆ ಮುಂದಾಗಿದ್ದಾರೆ. ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸೋಕೆ ಸರ್ಕಸ್ ಮಾಡ್ತಿದ್ದಾರೆ.
ಕಾಂಗ್ರೆಸ್ನಲ್ಲಿ ಪರಿಷತ್ ಟಿಕೆಟ್ಗಾಗಿ ಫೈಟ್! ಹೌದು, ಪರಿಷತ್ ಟಿಕೆಟ್ಗಾಗಿ ರಾಜ್ಯ ಕಾಂಗ್ರೆಸ್ನಲ್ಲಂತೂ ಸಿಕ್ಕಾಪಟ್ಟೆ ಲಾಬಿ ನಡೀತಿದೆ. ಹೀಗಾಗಿ ಸಿದ್ದರಾಮಯ್ಯ & ಡಿ.ಕೆ ಶಿವಕುಮಾರ್ ಖಾಸಗಿ ಸ್ಥಳದಲ್ಲಿ ಸೀಕ್ರೆಟ್ ಮೀಟಿಂಗ್ ಮಾಡಿದ್ರು. ಇದಕ್ಕೂ ಮೊದಲು ಸಿದ್ದು ನಿವಾಸದಲ್ಲಿ ಕೆ.ಜೆ ಜಾರ್ಜ್, ರಮೇಶ್ ಕುಮಾರ್, ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವ್ರು ಸಭೆ ನಡೆಸಿ ನಜೀರ್ ಅಹ್ಮದ್ರನ್ನ ಬೆಂಬಲಿಸುವಂತೆ ಒತ್ತಡ ಹೇರಿದ್ರು.
‘ಕೈ’ಯಿಂದ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಫಾರ್ಮುಲಾ! ಅಂದ್ಹಾಗೇ, ಕಾಂಗ್ರೆಸ್ನಲ್ಲಿ ಇರೋದು ಜಸ್ಟ್ ಎರಡೇ ಎರಡು ಸ್ಥಾನ. ಆದ್ರೆ ಆಕಾಂಕ್ಷಿಗಳು ಮಾತ್ರ ಬರೋಬ್ಬರಿ 12 ಮಂದಿ ಇದ್ದಾರೆ. ಕೈಪಡೆ ಈ ಬಾರಿ ಅಲ್ಪಸಂಖ್ಯಾತ & ಹಿಂದುಳಿದ ವರ್ಗಗಳಿಗೆ ಮಣೆ ಹಾಕಿದೆ. ಅಲ್ಪಸಂಖ್ಯಾತ ಕೋಟಾದಿಂದ ನಜೀರ್ ಅಹ್ಮದ್, ಐವಾನ್ ಡಿಸೋಜಾ ಹಾಗೂ ನಿವೇದಿತ್ ಆಳ್ವಾ ಹೆಸರು ಕೇಳಿ ಬರ್ತಾ ಇದ್ರೆ, ಹಿಂದುಳಿದ ವರ್ಗದಿಂದ ಎಂ.ಸಿ ವೇಣುಗೋಪಾಲ್, ಹೆಚ್. ಎಂ ರೇವಣ್ಣ, ಎಂ.ಆರ್ ಸೀತಾರಾಂ ಹೆಸರು ಮುಂಚೂಣಿಯಲ್ಲಿದೆ. ಇನ್ನು ಸಿದ್ದು ನಜೀರ್ ಅಹ್ಮದ್ ಪರ ಬ್ಯಾಟ್ ಬೀಸಿದ್ರೆ, ಡಿಕೆಶಿ ಮಾತ್ರ ಹೆಚ್.ಎಂ ರೇವಣ್ಣ ಅಥ್ವಾ ಎಂ.ಸಿ ವೇಣುಗೋಪಾಲ್ ಅಂತಿದ್ದಾರೆ. ಇದ್ರ ಜೊತೆಗೆ ಎಂ.ಆರ್ ಸೀತಾರಾಂ ಪರ ಸಿದ್ದು ಬಣ ಬ್ಯಾಟ್ ಬೀಸ್ತಿರೋದು ಕೂಡ ಕುತೂಹಲ ಮೂಡಿಸಿದೆ.
ಅನರ್ಹರಿಗೆ ಟಿಕೆಟ್ ಕೊಡುವಂತೆ ಬಿಎಸ್ವೈ ಹೋರಾಟ! ಕಾಂಗ್ರೆಸ್ದು ಒಂದು ಕಥೆಯಾದ್ರೆ, ಇತ್ತ ಬಿಜೆಪಿಯಲ್ಲಿ ಸಿಎಂದು ಮತ್ತೊಂದು ಸಂಕಟ. ಚುನಾವಣೆಯಲ್ಲಿ ಸೋತಿದ್ದ ಅನರ್ಹರಿಗೆ ಪರಿಷತ್ ಟಿಕೆಟ್ ಕೊಡೋದಾಗಿ ಮೊದ್ಲೇ ಬಿಎಸ್ವೈ ಭರವಸೆ ಕೊಟ್ಟಿದ್ರು. ಹೀಗಾಗಿ ಅನರ್ಹರಿಗೆ ಟಿಕೆಟ್ ಕೊಡಲೇಬೇಕು ಅಂತಾ ಸಿಎಂ ಹೋರಾಟ ಮಾಡ್ತಿದ್ದಾರೆ.
ಒಟ್ನಲ್ಲಿ ಪರಿಷತ್ ಟಿಕೆಟ್ ಫೈಟ್ ಜೋರಾಗೇ ನಡೀತಿದೆ. ಕಾಂಗ್ರೆಸ್ನಲ್ಲಿ ಡಿಕೆಶಿಗೆ ಮೊದಲ ಸವಾಲಾದ್ರೆ, ಸಿದ್ದುಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇವ್ರ ನಡುವೆ ಸಿಎಂ ಬಿಎಸ್ವೈದು ಕೊಟ್ಟ ಮಾತು ಉಳಿಸಿಕೊಳ್ಳೋ ಆತುರ. ಈ ಎಲ್ಲಾದ್ರ ನಡುವೆ ಬಿಜೆಪಿ, ಕಾಂಗ್ರೆಸ್ & ಜೆಡಿಎಸ್ನಲ್ಲಿ ಯಾಱರಿಗೆ ಟಿಕೆಟ್ ಸಿಗುತ್ತೆ ಅನ್ನೋದನ್ನ ಮಾತ್ರ ಕಾದು ನೋಡ್ಬೇಕಿದೆ.
Published On - 6:13 am, Tue, 16 June 20