ಕೊಕ್ಕರೆ ಬೆಳ್ಳೂರು ಪಕ್ಷಿಧಾಮದ ಕಿರೀಟಕ್ಕೆ ಮತ್ತೊಂದು ‘ಗರಿ’
ಮಂಡ್ಯ: ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ಪಕ್ಷಿಧಾಮವೂ ಒಂದು. ಗ್ರಾಮದಲ್ಲಿ ನೆಲೆಸಿರುವ ಜನ ಸಮುದಾಯದ ನಟ್ಟನಡುವೆ ಹಲವಾರು ದೇಶಿಯ ಮತ್ತು ವಿದೇಶಿ ಪ್ರಜಾತಿಯ ಹಕ್ಕಿಗಳು ತಮ್ಮ ಗೂಡುಗಳನ್ನು ಕಟ್ಟಿ ಸ್ವಚ್ಛಂದವಾಗಿ ಹಾರುವ ಏಕೈಕ ಸ್ಥಳ ಎಂಬ ಖ್ಯಾತಿಯನ್ನು ಪಡೆದಿತ್ತು. ಇದೀಗ ಈ ಮುಕ್ತ ಪಕ್ಷಿಧಾಮದ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ. ಪ್ರತಿಷ್ಠಿತ ಅರ್ಥ್ ಡೇ ನೆಟ್ವರ್ಕ್ನಿಂದ ಸಿಕ್ತು ‘ಸ್ಟಾರ್ ವಿಲೇಜ್’ ಗೌರವ ಹೌದು. ಜನ ಸಮುದಾಯದ ನಡುವೆ ದೇಶ ವಿದೇಶಗಳಿಂದ ಬರುವ […]

ಮಂಡ್ಯ: ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ಪಕ್ಷಿಧಾಮವೂ ಒಂದು. ಗ್ರಾಮದಲ್ಲಿ ನೆಲೆಸಿರುವ ಜನ ಸಮುದಾಯದ ನಟ್ಟನಡುವೆ ಹಲವಾರು ದೇಶಿಯ ಮತ್ತು ವಿದೇಶಿ ಪ್ರಜಾತಿಯ ಹಕ್ಕಿಗಳು ತಮ್ಮ ಗೂಡುಗಳನ್ನು ಕಟ್ಟಿ ಸ್ವಚ್ಛಂದವಾಗಿ ಹಾರುವ ಏಕೈಕ ಸ್ಥಳ ಎಂಬ ಖ್ಯಾತಿಯನ್ನು ಪಡೆದಿತ್ತು. ಇದೀಗ ಈ ಮುಕ್ತ ಪಕ್ಷಿಧಾಮದ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ.
ಪ್ರತಿಷ್ಠಿತ ಅರ್ಥ್ ಡೇ ನೆಟ್ವರ್ಕ್ನಿಂದ ಸಿಕ್ತು ‘ಸ್ಟಾರ್ ವಿಲೇಜ್’ ಗೌರವ ಹೌದು. ಜನ ಸಮುದಾಯದ ನಡುವೆ ದೇಶ ವಿದೇಶಗಳಿಂದ ಬರುವ ಪೆಲಿಕಾನ್, ಹೆಜ್ಜಾರ್ಲೆ ಹಾಗೂ ಇನ್ನಿತರ ಜಾತಿಯ ಕೊಕ್ಕರೆಗಳು ವಾಸವಾಗಿರೋ ಕಾರಣದಿಂದ ಈ ಗ್ರಾಮಕ್ಕೆ ‘ಸ್ಟಾರ್ ವಿಲೇಜ್’ ಎಂಬ ಬಿರುದು ದೊರೆತಿದೆ. ಈ ಗೌರವವನ್ನು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪರಿಸರ ಸಂಸ್ಥೆ ಅರ್ಥ್ ಡೇ ನೆಟ್ವರ್ಕ್ ನೀಡಿದೆ.
ಇತ್ತೀಚೇಗಷ್ಟೆ ಈ ಸಂಸ್ಥೆಯು ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಗ್ರಾಮವನ್ನು ಪರಿಚಯಿಸಿತ್ತು. ಇಲ್ಲಿನ ಜನರಿಗೆ ಹಕ್ಕಿಗಳ ಮೇಲಿರೋ ಪ್ರೀತಿ, ತಮ್ಮ ಜಮೀನಿನಲ್ಲಿ ಹಕ್ಕಿಗಳ ಅನುಕೂಲಕ್ಕಾಗಿ ಮರಗಳನ್ನು ಬೆಳೆಸಿರುವ ರೈತರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿರುವ ಬಗ್ಗೆಯೂ ಕೂಡ ಈ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿತ್ತು. ಇದರಿಂದ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಶಂಸೆ ಪಡೆದಿರುವ ಗ್ರಾಮಕ್ಕೆ ಇದೀಗ ಈ ಗೌರವ ಸಂದಿದೆ. ಈ ಮಾಹಿತಿಯನ್ನು ಅರ್ಥ್ ಡೇ ನೆಟ್ವರ್ಕ್ ತನ್ನ ವೆಬ್ಸೈಟ್ನಲ್ಲೂ ಪ್ರಕಟಿಸಿದೆ. -ರವಿ ಲಾಲಿಪಾಳ್ಯ

Published On - 1:51 am, Tue, 16 June 20




