ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ, ಡಿ.ಕೆ. ಶಿವಕುಮಾರ್​ಗೆ ಭದ್ರತೆ: ಬಸವರಾಜ ಬೊಮ್ಮಾಯಿ ಹೇಳಿಕೆ

| Updated By: ganapathi bhat

Updated on: Apr 05, 2022 | 1:08 PM

ಘಟನೆಯ ಬಗ್ಗೆ ಬೆಳಗಾವಿ ನಗರ ಪೊಲೀಸ್​ ಕಮಿಷನರ್ ಜತೆ ಚರ್ಚಿಸಿದ್ದೇನೆ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಇಂಥ ಕೃತ್ಯ ಯಾರೇ ಮಾಡಿದ್ದರೂ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ.

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ, ಡಿ.ಕೆ. ಶಿವಕುಮಾರ್​ಗೆ ಭದ್ರತೆ: ಬಸವರಾಜ ಬೊಮ್ಮಾಯಿ ಹೇಳಿಕೆ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್ ಬೆಂಗಾವಲು ಮತ್ತು ಬೆಂಗಲಿಗರ ವಾಹನದ ಮೇಲೆ ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ಚಪ್ಪಲಿ ಎಸೆದು ಗಲಾಟೆ ಮಾಡಿರುವ ಪ್ರಕರಣಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಸೂಕ್ತ ಭದ್ರತೆ ಒದಗಿಸುತ್ತೇವೆ ಎಂದು ಟಿವಿ9ಗೆ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಘಟನೆಯ ಬಗ್ಗೆ ಬೆಳಗಾವಿ ನಗರ ಪೊಲೀಸ್​ ಕಮಿಷನರ್ ಜತೆ ಚರ್ಚಿಸಿದ್ದೇನೆ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಇಂಥ ಕೃತ್ಯ ಯಾರೇ ಮಾಡಿದ್ದರೂ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಯುವತಿ ಹಾಗೂ ಯುವತಿಯ ಪೋಷಕರಿಗೂ ಸೂಕ್ತ ಭದ್ರತೆಯನ್ನು ಒದಗಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಘಟನೆ ದೃಶ್ಯ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ: ಡಿಸಿಪಿ ವಿಕ್ರಂ ಅಮಟೆ
ಡಿ.ಕೆ. ಶಿವಕುಮಾರ್ ಬೆಂಬಲಿಗರ ವಾಹನದ ಮೇಲೆ ಚಪ್ಪಲಿ ಎಸೆದು ಗಲಾಟೆ ಮಾಡಿದ ಪ್ರಕರಣಕ್ಕೆ ಬೆಳಗಾವಿಯಲ್ಲಿ ಡಿಸಿಪಿ ವಿಕ್ರಂ ಅಮಟೆ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ವಾಹನ ತೆರಳಿದ ಬಳಿಕ ಗಲಾಟೆ ಮಾಡಿದ್ದಾರೆ. ವಾಹನ ಹೋದ ಬಳಿಕ ರಸ್ತೆಯಲ್ಲಿ ಕುಳಿತು ಗಲಾಟೆ ಮಾಡಿದ್ದಾರೆ. ಸಮಸ್ಯೆ ಉಂಟುಮಾಡಿದವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಘಟನೆಯ ದೃಶ್ಯಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ವಿಕ್ರಂ ಅಮಟೆ ತಿಳಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಮುತ್ತಿಗೆಗೆ ಮೊದಲೇ ಯೋಜನೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಬೆಳಗಾವಿಗೆ ಭೇಟಿ ನೀಡಲಿರುವ ವಿಚಾರ ತಿಳಿದು ಮುತ್ತಿಗೆ ಹಾಕಲು ಮೊದಲೇ ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮುತ್ತಿಗೆ ಹಾಕಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಬೆಂಬಲಿಗರ ಪ್ಲ್ಯಾನ್ ಆಗಿತ್ತು. 2 ತಂಡಗಳಾಗಿ ಮುತ್ತಿಗೆ ಹಾಕಿ ಗಲಾಟೆ ಮಾಡಲು ರಮೇಶ್​ ಬೆಂಬಲಿಗರು ಪ್ಲ್ಯಾನ್​ ಮಾಡಿಕೊಂಡು ಬಂದಿದ್ದರು.

35ಕ್ಕೂ ಹೆಚ್ಚು ಕ್ರೂಸರ್ ವಾಹನಗಳಲ್ಲಿ ಬಂದಿದ್ದ ಬೆಂಬಲಿಗರು, ಬೆಳಗಾವಿಯಿಂದ 15ಕ್ಕೂ ಹೆಚ್ಚು ಕಾರುಗಳಲ್ಲಿ ಬಂದಿದ್ದರು. 1 ಟೀಮ್ ಏರ್​ಪೋರ್ಟ್​​ ಬಳಿ ಮುತ್ತಿಗೆ ಹಾಕಲು ಪ್ಲ್ಯಾನ್ ಮಾಡಿಕೊಂಡಿತ್ತು. ಇನ್ನೊಂದು ಟೀಮ್ ರಸ್ತೆಯಲ್ಲಿ ಘೇರಾವ್ ಹಾಕಲು ಯೋಜನೆ ಹಾಕಿತ್ತು.

ಬೆಳಗಾವಿ-ಬಾಗಲಕೋಟೆ ರಸ್ತೆಯಲ್ಲಿ ಮುತ್ತಿಗೆ ಹಾಕಲು ಯೋಜನೆ ಇತ್ತು. ಅದರಂತೆ ಮೊದಲ ಟೀಮ್​ನಿಂದ ಚಪ್ಪಲಿ ತೂರಿ ಗಲಾಟೆ ನಡೆದಿದೆ. ಬಳಿಕ ಮುಂದೆ ಬಂದು ಡಿ.ಕೆ. ಶಿವಕುಮಾರ್ ಕಾರಿಗೆ ಮುತ್ತಿಗೆ ಹಾಕಿ ತಡೆ ಒಡ್ಡಲಾಗಿದೆ.

ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ವಾಹನದ ಮೇಲೆ ಚಪ್ಪಲಿ ಎಸೆತ, ಪೊಲೀಸ್‌ ಕಾನ್ಸ್‌ಟೇಬಲ್‌ ಎಳೆದಾಟ: ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಪ್ರತಿಭಟನೆ

ನನ್ನನ್ನು ಸ್ವಾಗತಿಸಿದ ರಮೇಶ್ ಜಾರಕಿಹೊಳಿ ಬೆಂಬಲಿಗರಿಗೆ ಅಭಿನಂದನೆಗಳು: ಡಿ.ಕೆ. ಶಿವಕುಮಾರ್ ಟಾಂಗ್

Published On - 6:20 pm, Sun, 28 March 21