ಹಿರಿಯ ಸಂಸ್ಕೃತ ವಿದ್ವಾಂಸ ಮೇಲುಕೋಟೆಯ ಡಾ.ಲಕ್ಷ್ಮೀತಾತಾಚಾರ್ ವಿಧಿವಶ

ಡಾ.ಲಕ್ಷ್ಮೀತಾತಾಚಾರ್ ಮೇಲುಕೋಟೆಯಲ್ಲಿ ಸಂಸ್ಕೃತ ಅಕಾಡೆಮಿ ಸ್ಥಾಪಿಸಿದ್ದರು. ಸಂಸ್ಕೃತ, ಧರ್ಮಶಾಸ್ತ್ರ ಪಂಡಿತರಾಗಿದ್ದರು. ಕೆಲ ದಿನಗಳಿಂದ ಸಂಸ್ಕೃತ ಸಂಶೋಧನಾ ಸಂಸ್ಥೆ ಸಂಸ್ಥಾಪಕರು, ಮಾಜಿ ನಿರ್ದೇಶಕ ಡಾ.ಲಕ್ಷ್ಮೀತಾತಾಚಾರ್ ಅನಾರೋಗ್ಯದಿಂದ ಬಳಲುತ್ತಿದ್ದರು.

ಹಿರಿಯ ಸಂಸ್ಕೃತ ವಿದ್ವಾಂಸ ಮೇಲುಕೋಟೆಯ ಡಾ.ಲಕ್ಷ್ಮೀತಾತಾಚಾರ್ ವಿಧಿವಶ
ಡಾ.ಲಕ್ಷ್ಮೀತಾತಾಚಾರ್
Follow us
sandhya thejappa
|

Updated on: May 15, 2021 | 2:50 PM

ಮಂಡ್ಯ: ಕೊರೊನಾ ಸೋಂಕು ದೃಢಪಟ್ಟಿದ್ದ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಸಂಸ್ಕೃತ ವಿದ್ವಾಂಸ ಡಾ.ಲಕ್ಷ್ಮೀತಾತಾಚಾರ್ (84) ನಿಧನರಾಗಿದ್ದಾರೆ. ವಾರದ ಹಿಂದೆ ಕೊರೊನಾ ಸೋಂಕು ಇರುವುದು ತಿಳಿದುಬಂದಿತ್ತು. ಚಿಕಿತ್ಸೆ ಪಡೆಯಲು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಡಾ.ಲಕ್ಷ್ಮೀತಾತಾಚಾರ್ ಮೇಲುಕೋಟೆಯಲ್ಲಿ ಸಂಸ್ಕೃತ ಅಕಾಡೆಮಿ ಸ್ಥಾಪಿಸಿದ್ದರು. ಸಂಸ್ಕೃತ, ಧರ್ಮಶಾಸ್ತ್ರ ಪಂಡಿತರಾಗಿದ್ದರು. ಕೆಲ ದಿನಗಳಿಂದ ಸಂಸ್ಕೃತ ಸಂಶೋಧನಾ ಸಂಸ್ಥೆ ಸಂಸ್ಥಾಪಕರು, ಮಾಜಿ ನಿರ್ದೇಶಕ ಡಾ.ಲಕ್ಷ್ಮೀತಾತಾಚಾರ್ ಅನಾರೋಗ್ಯದಿಂದ ಬಳಲುತ್ತಿದ್ದರು. ಜೊತೆಗೆ ವಾರದ ಹಿಂದೆ ಕೊರೊನಾ ಕೂಡಾ ದೃಢಪಟ್ಟಿತ್ತು. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಮೇಲುಕೋಟೆಯಲ್ಲಿ ಅಂತ್ಯಕ್ರಿಯೆ ಕಾರ್ಯ ನಡೆದಿದೆ.

13 ಶಿಕ್ಷಕರು ಕೊರೊನಾಗೆ ಬಲಿ ಬಳ್ಳಾರಿ: ಬಳ್ಳಾರಿ, ವಿಜಯನಗರ ಉಭಯ ಜಿಲ್ಲೆಗಳಲ್ಲಿ ಮೇ ತಿಂಗಳಲ್ಲಿ ಒಟ್ಟು 13 ಶಿಕ್ಷಕರು ಕೊರೊನಾಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಪೈಕಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಕರ್ತವ್ಯಕ್ಕೆ ಹಾಜರಾಗಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಸಂಗನಕಲ್ಲು ಬಸವೇಶ್ವರ ಪ್ರೌಢಶಾಲೆಯ ಸಿದ್ದೇಶ್ವರ ಹಾಗೂ ಕುರುಗೋಡು ಬಿಇಒ ಕಚೇರಿದ ಎಸ್​ಡಿಎ ಹರಿಪ್ರಸಾದ್ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒರ್ವ ಗ್ರೂಪ್ ಡಿ ಸಿಬ್ಬಂದಿ ಸೇರಿ 23 ಶಿಕ್ಷಕರು ಮೃತಪಟ್ಟಿದ್ದಾರೆ.

ಇದನ್ನೂ ಓದಿ

ಎರಡನೇ ಡೋಸ್ ಲಸಿಕೆಯ ಅವಧಿ 12 ವಾರದಿಂದ 8 ವಾರಕ್ಕೆ ಇಳಿಕೆ‌ ಮಾಡಲು ಇಂಗ್ಲೆಂಡ್ ಸರ್ಕಾರದಿಂದ ತಿರ್ಮಾನ

ಮಂಡ್ಯ: 15 ದಿನದ ಅಂತರದಲ್ಲಿ ತಂದೆ, ತಾಯಿ ಕೊರೊನಾಗೆ ಬಲಿ; ತಬ್ಬಲಿಯಾದ 5 ದಿನದ ಮಗು

(senior sanskrit scholar dr laxmithatachar died due to corona in mandya)