ಚಿತ್ರದುರ್ಗ: ಜವನಗೊಂಡನಹಳ್ಳಿ ಬಳಿ ಸರಣಿ ಅಪಘಾತ, ದಂಪತಿ ಸೇರಿ ಮೂವರ ಸಾವು

| Updated By: shruti hegde

Updated on: Mar 22, 2021 | 1:15 PM

ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ: ಜವನಗೊಂಡನಹಳ್ಳಿ ಬಳಿ ಸರಣಿ ಅಪಘಾತ, ದಂಪತಿ ಸೇರಿ ಮೂವರ ಸಾವು
ಚಿತ್ರದುರ್ಗ: ಜವನಗೊಂಡನಹಳ್ಳಿ ಬಳಿ ಸರಣಿ ಅಪಘಾತ, ಮೂವರ ಸಾವು
Follow us on

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಟಾಟಾ ಸಫಾರಿ, ಐಷರ್ ಕ್ಯಾಂಟರ್ ವಾಹನ, ಕಾರಿನ ನಡುವೆ ಡಿಕ್ಕಿಯಾಗಿದೆ. ಟಾಟಾ ಸಫಾರಿಯಲ್ಲಿದ್ದ ನೇಮಿರಾಜ್ (58) ಮತ್ತು ಅವರ ಪತ್ನಿ ನಂದಾ (53) ಮೃತಪಟ್ಟಿದ್ದಾರೆ.

ಕ್ಯಾಂಟರ್ ವಾಹನ ಚಾಲಕ ರಂಗ (35) ಮತ್ತೊಬ್ಬ ಮೃತ ದುರ್ದೈವಿ. ಮತ್ತಿಬ್ಬರಿಗೆ ಗಾಯಗಳಾಗಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ KSRTC ಬಸ್ ಡಿಕ್ಕಿ, ಬೈಕ್ ಸವಾರನಿಗೆ ಗಂಭೀರ ಗಾಯ
KSRTC ಬಸ್ ಹಾಗೂ ಸ್ಕೂಡರ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಂಭೀರ ಗಾಯವಾಗಿದೆ. ಮಂಗಳೂರು ಹೊರವಲಯದ ತಲಪಾಡಿ ಬಳಿ ಘಟನೆ ನಡೆದಿದೆ. ಬಸ್, ಸ್ಕೂಟರ್ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇರಳದ ಉದ್ಯಾವರ ಮಾಡ ನಿವಾಸಿ ತುಳಸಿ (35) ಎಂಬಾತನಿಗೆ ಗಾಯವಾಗಿದೆ. ತುಳಸಿ ತಲಪಾಡಿಯಲ್ಲಿ ಟಯರ್ ಅಂಗಡಿ ಹೊಂದಿದ್ದರು. ಡಿವೈಡರ್ ಇರುವ ಪ್ರದೇಶದಲ್ಲಿ ತಿರುಗಿಸುತ್ತಿದ್ದಾಗ ಬಸ್ ಮತ್ತು ಸ್ಕೂಡರಿಗೆ ಡಿಕ್ಕಿಯಾಗಿದೆ. ನಾಗುರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್​ನಲ್ಲಿ ಭೀಕರ ಅಪಘಾತ
ಬೆಂಗಳೂರು ಹೊರವಲಯದ ಅತ್ತಿಬೆಲೆ ಟೋಲ್‌ನ ಬಳಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರ ಸಾವನ್ನಪ್ಪಿದ್ದಾರೆ. ಟಿಪ್ಪರ್ ಲಾರಿ ಕಾರಿನ ಮೇಲೆ‌ ಹತ್ತಿದ ಪರಿಣಾಮ‌ ಇಬ್ಬರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಾರು ಚಾಲಕ ಹಾಗೂ ಆತನ ಜೊತೆಯಿದ್ದ ಮತ್ತೊಬ್ಬ ವ್ಯಕ್ತಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಸ್ಥಳಕ್ಕೆ ಅತ್ತಿಬೆಲೆ‌ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬೈಕ್​ಗೆ ಡಿಕ್ಕಿ ಹೊಡೆದು ಎಸ್ಕೇಪ್​ ಆಗೋವಾಗ ಮನೆಗೆ ನುಗ್ಗಿದ ಕಾರು; ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Accident ಬೈಕ್ ಅಪಘಾತಕ್ಕೆ ರಾಂಪುರ ಗ್ರಾ.ಪಂ. ಪಿಡಿಒ ಬಲಿ, ನಾಲ್ಕು ಕಡೆ ಪ್ರತ್ಯೇಕ ಅವಘಡಗಳು, ಒಟ್ಟು 4 ಮಂದಿ ಸಾವು

Published On - 11:36 am, Mon, 22 March 21