ರಮೇಶ್​ ಜಾರಕಿಹೊಳಿ ಸಿಡಿ ಯುವತಿಯಿಂದ ಬಾಯ್​ಫ್ರೆಂಡ್​ಗೆ ಮರಾಮೋಸ; ವಿಡಿಯೋ ನೋಡಿ ನಿಂತ ನೆಲವೇ ಕುಸಿದಂತಾಯ್ತು ಬಾಯ್​ಫ್ರೆಂಡ್​ಗೆ..

SIT ತನಿಖೆ ವೇಳೆ ತನಗೆ ಗೊತ್ತಿರುವ ಅಷ್ಟು ಸತ್ಯವನ್ನು ಹೇಳಿರೊ ಯುವತಿ ಎಕ್ಸ್ ಬಾಯ್ ಫ್ರೆಂಡ್, SIT ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಸಿಡಿ ರಿಲೀಸ್ ಆಗಿದ್ದ ದಿನವೇ ಆತನಿಗೆ ತನ್ನ ಮೂವರು ಗೆಳೆಯರು ವಿಡಿಯೋ ಕಳಿಸಿದ್ರಂತೆ. ಈ ವೇಳೆ ವಿಡಿಯೋ ನೋಡಿ ಅದು ತನ್ನ ಹುಡುಗಿಯೇ ಎಂದಿದ್ದ.

ರಮೇಶ್​ ಜಾರಕಿಹೊಳಿ ಸಿಡಿ ಯುವತಿಯಿಂದ ಬಾಯ್​ಫ್ರೆಂಡ್​ಗೆ ಮರಾಮೋಸ; ವಿಡಿಯೋ ನೋಡಿ ನಿಂತ ನೆಲವೇ ಕುಸಿದಂತಾಯ್ತು ಬಾಯ್​ಫ್ರೆಂಡ್​ಗೆ..
ಪ್ರಾತಿನಿಧಿಕ ಚಿತ್ರ
Follow us
ಆಯೇಷಾ ಬಾನು
| Updated By: Digi Tech Desk

Updated on:Mar 24, 2021 | 3:00 PM

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಿಡಿ ಯುವತಿಯ ರೋಚಕ ಸತ್ಯವೊಂದು ಬಯಲಾಗಿದೆ.  ಎಂಜಿನಿಯರ್ ಓದಿದ್ದ ವಿದ್ಯಾವಂತ ಯುವತಿ ಇಂತಹ ನೀಚ ಕೃತ್ಯಕ್ಕೆ ಇಳಿದಿದ್ದು ಏಕೆ? ‘ಸಿಡಿ ಗ್ಯಾಂಗ್’ ಕೈಗೆ ಸಿಕ್ಕಿದ್ದೇಗೆ? ಎಂಜಿನಿಯರಿಂಗ್ ಕಲಿತು ಕೆಲ್ಸಕ್ಕೆ ಸೇರಿದವಳು ಏನಾದ್ಲು..? ಕೈತುಂಬಾ ಸಂಬಳದ ಕೆಲಸ ಬಿಟ್ಟು ಯುವತಿ ಮಾಡಿದ್ದೇನು? ತನ್ನ ಪ್ರಿಯತಮನಿಗೆ ಮೋಸ ಮಾಡಿದ್ದೇಕೆ? ಎಂಬ ಇಂಚಿಂಚು ಮಾಹಿತಿ ಇಲ್ಲಿದೆ ಓದಿ.

ವಿದ್ಯಾವಂತ ಯುವತಿ ‘ಸಿಡಿ ಗ್ಯಾಂಗ್’ ಸೇರಿದ್ಲು ಬೆಂಗಳೂರಿನ ಖಾಸಗಿ ಕಾಲೇಜುವೊಂದರಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ಯುವತಿ ಖಾಸಗಿ ಕಂಪನಿಗೆ ಕೆಲಸಕ್ಕೆ ಸೇರಿಕೊಂಡು 45 ಸಾವಿರ ಸಂಬಳ ಪಡೆಯುತ್ತಿದ್ದಳು. ಐಶಾರಾಮಿ ಜೀವನ ನಡೆಸಬೇಕು ಎಂಬ ಮಹದಾಸೆ ಹೊಂದಿದ್ದ ಈಕೆ ಹಣ ಗಳಿಸುವ ಆಸೆ ಇಟ್ಟುಕೊಂಡಿದ್ದಳು. ಕಾಲೇಜು ದಿನಗಳಲ್ಲೇ ಓರ್ವ ಯುವಕನನ್ನು ಪ್ರೀತಿ ಮಾಡಿ ನಾವಿಬ್ಬರು ಮದುವೆ ಆಗೋಣ ಎಂದೆಲ್ಲಾ ನಂಬಿಸಿದ್ಲು. ಪಾರ್ಕ್, ಹೋಟೆಲ್, ಸಿನಿಮಾ, ಪಬ್, ಟ್ರಿಪ್ ಅಂತೆಲ್ಲಾ ಇವರಿಬ್ಬರು ಸುತ್ತಾಡಿದ್ದರು. ಈ ಮಧ್ಯೆ.. ಹಣ ಮಾಡುವ ಆಸೆಯಲ್ಲಿದ್ದ ಯುವತಿ ತನ್ನ 45 ಸಾವಿರ ಸಂಬಳ ಪಡೆಯುತ್ತಿದ್ದ ಕೆಲಸವನ್ನೂ ಬಿಟ್ಟು ಸಿಡಿ ಗ್ಯಾಂಗ್ ಸೇರಿದ್ಲು.

ಸಿಡಿ ಗ್ಯಾಂಗ್ ಸೇರಿ ಮಾಡಿದ್ಳು ನೀಚ ಕೃತ್ಯ ಶ್ರವಣ್ ಮೂಲಕ ಸೆಪ್ಟೆಂಬರ್​ನಲ್ಲಿ ಈ ಯುವತಿ ಸಿಡಿ ಗ್ಯಾಂಗ್ ಸೇರಿದ್ಳು. ಸಿಡಿ ಗ್ಯಾಂಗ್ ಸೇರಿದ ಬಳಿಕ ಕೆಲಸ ಬಿಟ್ಟಿದ್ದಳು. ಶ್ರವಣ್ ಸಹ ಎಂಜಿನಿಯರಿಂಗ್ ಮಾಡಿದ್ದ. ಹೀಗಾಗಿ ಯುವತಿಯನ್ನು ಕಾಲೇಜು ದಿನದಲ್ಲೇ ನೋಡಿದ್ದ. ಆಕೆಗೆ ಐಷಾರಾಮಿ ಜೀವನ ನಡೆಸಲು ಮಹತ್ವಾಕಾಂಕ್ಷೆ ಹೊಂದಿದ್ದಾಳೆ ಎಂಬ ಸಂಗತಿ ಗೊತ್ತಿತ್ತು. ಹೀಗಾಗಿ ಆಕೆಯನ್ನು ಟಾರ್ಗೆಟ್ ಮಾಡಿದ್ದ ಬಳಿಕ ಆಕೆಯನ್ನು ತಮ್ಮ ರೂಟ್​ಗೆ ತಂದಿದ್ದಾಗಿ ಮಾಹಿತಿ ತಿಳಿದು ಬಂದಿದೆ.

SIT ಮುಂದೆ ಬಿಕ್ಕಿ ಬಿಕ್ಕಿ ಅತ್ತ ಯುವತಿ ಎಕ್ಸ್ ಬಾಯ್ ಫ್ರೆಂಡ್ SIT ತನಿಖೆ ವೇಳೆ ತನಗೆ ಗೊತ್ತಿರುವ ಅಷ್ಟೂ ಸತ್ಯವನ್ನು ಹೇಳಿರೊ ಸಿಡಿ ಯುವತಿಯ ಎಕ್ಸ್ ಬಾಯ್ ಫ್ರೆಂಡ್, SIT ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಸಿಡಿ ರಿಲೀಸ್ ಆಗಿದ್ದ ದಿನವೇ ಆತನಿಗೆ ತನ್ನ ಮೂವರು ಗೆಳೆಯರು ವಿಡಿಯೋ ಕಳಿಸಿದ್ರಂತೆ. ಈ ವೇಳೆ ವಿಡಿಯೋ ನೋಡಿ ಅದು ತನ್ನ ಹುಡುಗಿಯೇ ಎಂದಿದ್ದ. ಅದ್ರೆ ಈ ವೇಳೆ ಶ್ರವಣ್ ಮತ್ತು ನರೇಶ್​ ಇದೆಲ್ಲಾ ಸುಳ್ಳು ಬೇರೆ ಯಾರೊ ಮಾರ್ಫ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಒಪ್ಪದಿದ್ದಾಗ ಶ್ರವಣ್ ಬೇರೆ ಬೇರೆ ವಿಡಿಯೋ ತೋರಿಸಿ ಕನ್ವಿನ್ಸ್ ಮಾಡಿದ್ದನಂತೆ. ಯುವತಿಯ ಜೀವಕ್ಕೆ ತೊಂದರೆ ಇದೆ ಹೀಗಾಗಿ ಗೋವಾಗೆ ಹೋಗಿ ಇರಿ ಎಂದು ಯುವತಿ ಹಾಗೂ ಎಕ್ಸ್ ಬಾಯ್ ಫ್ರೆಂಡ್​ನನ್ನು ಶ್ರವಣ್ ಮತ್ತು ಸ್ನೇಹಿತರು ಕಳಿಸಿದ್ದಾರೆ. ನಂತ್ರ ಯುವತಿ ಮತ್ತು ಆಕೆಯ ಬಾಯ್ ಫ್ರೆಂಡ್ ಗೋವಾಕ್ಕೆ ಹೋಗಿದ್ದಾರೆ. ಅಲ್ಲಿ ತನ್ನ ಪ್ರಿಯತಮೆಯ ಸತ್ಯ ಬಯಲಾಗಿದೆ. ಗೋವಾದಿಂದ ಬಂದ ನಂತ್ರ ಜೀವನದಲ್ಲೇ ಯುವತಿಯನ್ನು ಮಾತನಾಡಿಸಬಾರದು ಎಂದು ತೀರ್ಮಾನ ಮಾಡಿದ್ದೆ ಎಂದು ಎಕ್ಸ್ ಬಾಯ್ ಫ್ರೆಂಡ್, SIT ಮುಂದೆ ಅಷ್ಟೂ ಸತ್ಯವನ್ನು ಬಿಚ್ಚಿಟ್ಟಿದ್ದಾನೆ.

ನರೇಶ್ ಅಂಡ್ ಟೀಮ್​ಗೆ ಸೇರಿದ ಯುವತಿ ಈ ಸಿಡಿ ಗ್ಯಾಂಗ್ ಕಳೆದ ವರ್ಷ ಆಗಸ್ಟ್ , ಸೆಪ್ಟೆಂಬರ್, ಅಕ್ಟೋಬರ್​ನಲ್ಲಿ ಹೆಚ್ಚು ಅಪರೇಟ್ ಅಗಿದೆ. ಈ ಯುವತಿ ಜುಲೈನಲ್ಲಿ ನರೇಶ್ ಅಂಡ್ ಟೀಮ್​ಗೆ ಸೇರ್ತಾಳೆ. ನಂತ್ರ ಯುವತಿಗೆ ಹಣ ಕೊಟ್ಟು ಏನು ಮಾಡಬೇಕು ಎಂದು ಈ ಗ್ಯಾಂಗ್ ಟ್ರೈನ್ ಮಾಡಿದೆ. ಯಾವ ಕಾರಣಕ್ಕೂ ಮುಖ ಕಾಣಲ್ಲಾ ಫೇಸ್ ಬ್ಲರ್ ಮಾಡ್ತಿವಿ ಎಂದು ಹೇಳಿ ಈ ನೀಚ ಕೃತ್ಯ ಮಾಡಿಸಿದ್ದಾರೆ. ಆದ್ರೆ ಫೇಸ್ ಬ್ಲರ್ ಮಾಡದೆ ವಿಡಿಯೋ ರಿಲೀಸ್ ಮಾಡಿದ್ದಾರೆ. ಸಿಡಿ ಗ್ಯಾಂಗ್ ಅನ್ನು ನಂಬಿದ್ದ ಯುವತಿ ತನ್ನ ಕೆಲಸ ಮುಗಿಸಿದ್ದಾಳೆ. ಆದ್ರೆ ತನ್ನ ಮಾನವನ್ನೇ ಕಳೆದುಕೊಂಡಿದ್ದಾಳೆ.

ಜಾರಕಿಹೊಳಿ ಪ್ರಭಾವದ ಬಗ್ಗೆ ತಿಳಿಯದೆ ಹೀಗೆ ಮಾಡಿದ್ಲಾ ಯುವತಿ? ಯುವತಿ ತನ್ನ ಗುರುತು ಪತ್ತೆ ಆಗಲ್ಲಾ ಎಂದು ಈ ಕೆಲಸ ಮಾಡಿದ್ದಾಳೆ. ಅದ್ರೆ ನಂತ್ರದ ದಿನದಲ್ಲಿ ಬ್ಲರ್​ ಮಾಡದ ಮುಖದ ಸಹಿತ ವಿಡಿಯೋ ರಿಲೀಸ್ ಆಗಿದೆ. ಇತ್ತ ಕೆಲಸವೂ ಇಲ್ಲದೆ, ಬಾಯ್ ಫ್ರೆಂಡ್, ಸ್ವಂತ ಕುಟುಂಬವೂ ಇಲ್ಲದವಳಾಗಿದ್ದಾಳೆ.

ಪೊಲೀಸರು ಈಕೆಯನ್ನು ಯಾವಾಗ ಬೇಕಾದರೂ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಸಿಕ್ಕ ಮಾಹಿತಿ ಪ್ರಕಾರ ಸಿಡಿ ಲೇಡಿ ಸಿಡಿ ಗ್ಯಾಂಗ್ ಬಂಧನದಲ್ಲಿದ್ದಾಳಂತೆ. ಯಾರ ಸಂಪರ್ಕಕ್ಕೂ ಬಾರದೆ, ಗ್ಯಾಂಗ್​ನ ಸದಸ್ಯರು ಹೇಳಿದಂತೆ ಕೇಳಿಕೊಂಡು ಅವರ ವಶದಲ್ಲಿದ್ದಾಳೆ ಎಂಬ ಮಾಹಿತಿ ಟಿವಿ9ಗೆ ಸಿಕ್ಕಿದೆ.

ಇದನ್ನೂ ಓದಿ: ಐ ಆಮ್ ಸಾರಿ ಅಂಕಲ್​ -ಮನೆ ಮಾಲೀಕರಿಗೆ ಫೋನ್​ ಮಾಡಿ ಕ್ಷಮೆ ಕೇಳಿದ್ದರಂತೆ ‘ಸಿಡಿ ಲೇಡಿ’!

Published On - 10:35 am, Mon, 22 March 21