AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐ ಆಮ್ ಸಾರಿ ಅಂಕಲ್​ -ಮನೆ ಮಾಲೀಕರಿಗೆ ಫೋನ್​ ಮಾಡಿ ಕ್ಷಮೆ ಕೇಳಿದ್ದರಂತೆ ‘ಸಿಡಿ ಲೇಡಿ’!

ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಸಂತ್ರಸ್ತೆ ವಾಸವಿದ್ದ ಮನೆಗೆ ಎಸ್​ಐಟಿ ತಂಡ ಇಂದು ಭೇಟಿ ನೀಡಿದೆ. ಆರ್​.ಟಿ.ನಗರದ ಮನೆಗೆ ಎಸ್ಐಟಿ ತಂಡ ಭೇಟಿಕೊಟ್ಟಿತು. ಎಸಿಪಿ ಧರ್ಮೇಂದ್ರ ನೇತೃತ್ವದ ತಂಡ ಮನೆಗೆ ಭೇಟಿಕೊಟ್ಟಿತು.

ಐ ಆಮ್ ಸಾರಿ ಅಂಕಲ್​ -ಮನೆ ಮಾಲೀಕರಿಗೆ ಫೋನ್​ ಮಾಡಿ ಕ್ಷಮೆ ಕೇಳಿದ್ದರಂತೆ ‘ಸಿಡಿ ಲೇಡಿ’!
ಸಂತ್ರಸ್ತೆ ವಾಸವಿದ್ದ ಮನೆಗೆ ಎಸ್​ಐಟಿ ತಂಡ ಭೇಟಿ
KUSHAL V
|

Updated on:Mar 17, 2021 | 10:14 PM

Share

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಸಂತ್ರಸ್ತೆ ವಾಸವಿದ್ದ ಮನೆಗೆ ಎಸ್​ಐಟಿ ತಂಡ ಇಂದು ಭೇಟಿ ನೀಡಿದೆ. ಆರ್​.ಟಿ.ನಗರದ ಮನೆಗೆ ಎಸ್ಐಟಿ ತಂಡ ಭೇಟಿಕೊಟ್ಟಿತು. ಎಸಿಪಿ ಧರ್ಮೇಂದ್ರ ನೇತೃತ್ವದ ತಂಡ ಮನೆಗೆ ಭೇಟಿಕೊಟ್ಟಿತು. ಈ ವೇಳೆ, ಯುವತಿ ವಾಸವಿದ್ದ ರೂಮ್​ನ ಅಧಿಕಾರಿಗಳು ಪರಿಶೀಲಿಸಿದರು. ಬಳಿಕ, ಕಟ್ಟಡದ ಮಾಲೀಕರಿಂದ ಎಸ್​ಐಟಿ ಟೀಮ್​ ಮಾಹಿತಿ ಪಡೆಯಿತು. ಸಿಡಿಯಲ್ಲಿನ ಯುವತಿ ಇತ್ತೀಚೆಗೆ ನಿಮ್ಮನ್ನು ಸಂಪರ್ಕಿಸಿದ್ರಾ? ಆಕೆ ಇಲ್ಲಿದ್ದಾಗ ಬೇರೆ ಯಾರಾದರೂ ಇಲ್ಲಿಗೆ ಬರುತ್ತಿದ್ರಾ? ಎಂದು ಮನೆ ಮಾಲೀಕರನ್ನು ಪ್ರಶ್ನಿಸಿದರಂತೆ.

ಈ ವೇಳೆ, ವಿಡಿಯೋ ಬಹಿರಂಗವಾಗುತ್ತಿದ್ದಂತೆ ಸಂತ್ರಸ್ತೆ ನಾಪತ್ತೆ ಆಗಿದ್ದಳು. ಆದರೆ, 3-4 ದಿನದ ಹಿಂದೆ ನನಗೆ ಕರೆ ಮಾಡಿದ್ದರು ಎಂದು ಮನೆ ಮಾಲೀಕರು ಎಸ್​ಐಟಿಗೆ ಮಾಹಿತಿ ನೀಡಿದ್ದಾರಂತೆ. ಅಷ್ಟೇ ಅಲ್ಲ, ಮಾಲೀಕರಿಗೆ ಕರೆಮಾಡಿ ಸಂತ್ರಸ್ತೆ ಕ್ಷಮೆ ಸಹ ಕೇಳಿದ್ದರು ಎಂಬ ಮಾಹಿತಿ ತಂಡಕ್ಕೆ ಲಭ್ಯವಾಗಿದೆ.

ಸಂಜೆ 6.30ರ ಸುಮಾರಿಗೆ ನಿವಾಸಕ್ಕೆ ಎಸ್ಐಟಿ ತಂಡ  ಭೇಟಿ ನೀಡಿತ್ತು. 2 ಬಾರಿ ನೋಟಿಸ್​​ ನೀಡಿದರೂ ಸಂತ್ರಸ್ತೆ ಪ್ರತಿಕ್ರಯಿಸದ ಹಿನ್ನೆಲೆಯಲ್ಲಿ ಮನೆ ಮಾಲೀಕರಿಂದ ತಂಡ ಸುದೀರ್ಘ ಮಾಹಿತಿ ಪಡೆದಿದೆ. ಜೊತೆಗೆ, ಸಂತ್ರಸ್ತೆಗೆ  ಸಂಬಂಧಿಸಿದ ಕೆಲ ವಸ್ತುಗಳು, ದಾಖಲೆಗಳು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತೆಯ ವೃತ್ತಿಗೆ ಸಂಬಂಧಿಸಿದ ಕೆಲ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆ.

ಅಂದ ಹಾಗೆ, ನನ್ನ ಮಗಳನ್ನ ಅಪಹರಿಸಲಾಗಿದೆ ಎಂದು ನಿನ್ನೆ ದೂರು ದಾಖಲಾಗಿತ್ತು. ಬೆಳಗಾವಿಯ ಎಪಿಎಂಸಿ ಯಾರ್ಡ್ ಠಾಣೆಗೆ ಸಂತ್ರಸ್ತೆ ತಂದೆ ದೂರು ದಾಖಲಿಸಿದ್ದರು.

‘ಇದಕ್ಕೆ ಹಣ ಖರ್ಚು ಮಾಡಿದ್ದು ಯಾರು?’ ಇನ್ನು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಪಕ್ಷ ಟ್ವೀಟ್​ ಮಾಡಿದೆ. ಬ್ಲ್ಯಾಕ್​ಮೇಲ್​ ಮಾಡಿದವರಿಗೆ ಜಾರಕಿಹೊಳಿಯಿಂದ ಹಣ ಸಂದಾಯವಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಹಣ ಖರ್ಚು ಮಾಡಿದ್ದು ಯಾರು? ಇಲ್ಲಿ ಹಣಕಾಸು ಅವ್ಯವಹಾರ ನಡೆದಿರಬೇಕಲ್ಲವೇ? ಇಡಿ, ಆದಾಯ ತೆರಿಗೆ ಇಲಾಖೆಗಳು ಏಕೆ ಕಣ್ಮುಚ್ಚಿ ಕೂತಿವೆ?ತನಿಖಾ ಸಂಸ್ಥೆಗಳು ಇರುವುದು ಅಕ್ರಮ ತಡೆಯುವುದಕ್ಕಾ? ಅಥವಾ ಪ್ರತಿಪಕ್ಷಗಳ ಮೇಲೆ ದಾಳಿ ಮಾಡುವುದಕ್ಕಾ? ಎಂದು ಟ್ವೀಟ್ ಮೂಲಕ ಬಿಜೆಪಿಗೆ ಕಾಂಗ್ರೆಸ್​ ಪ್ರಶ್ನೆ ಮಾಡಿದೆ.

ಇದನ್ನೂ ಓದಿ: ‘ಸಿಡಿ ಲೇಡಿ’ಗೆ ಎಸ್‌ಐಟಿಯಿಂದ ಮತ್ತೆ ನೋಟಿಸ್ ಜಾರಿ

Published On - 9:39 pm, Wed, 17 March 21

Follow Us
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ