Shakti Yojana: ಉಚಿತ ಬಸ್ ಪ್ರಯಾಣದಿಂದ ವಂಚಿತರಾದ ಗಡಿಭಾಗದ ಗ್ರಾಮಗಳ ಮಹಿಳೆಯರು, ಏಕೆ ? ಇಲ್ಲಿದೆ ಓದಿ

|

Updated on: Jun 12, 2023 | 10:51 AM

ಅಂತರರಾಜ್ಯ ಬಸ್​​ಗಳಲ್ಲಿ ಉಚಿತ ಪ್ರಯಾಣ ನಿರ್ಬಂಧ ಹಿನ್ನೆಲೆ ವಿಜಯಪುರ, ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಭಾಗದ ಗ್ರಾಮಗಳ ಮಹಿಳೆಯರು ಉಚಿತ ಪ್ರಯಾಣ ಯೋಜನೆಯಿಂದ ವಂಚಿತರಾಗಿದ್ದಾರೆ.

Shakti Yojana: ಉಚಿತ ಬಸ್ ಪ್ರಯಾಣದಿಂದ ವಂಚಿತರಾದ ಗಡಿಭಾಗದ ಗ್ರಾಮಗಳ ಮಹಿಳೆಯರು, ಏಕೆ ? ಇಲ್ಲಿದೆ ಓದಿ
ಕೆಎಸ್​ಆರ್​ಟಿಸಿ ಬಸ್​
Follow us on

ವಿಜಯಪುರ/ಚಿಕ್ಕಬಳ್ಳಾಪುರ: ಶಕ್ತಿ ಯೋಜನೆ (Shakti Yojana) ಅಡಿಯಲ್ಲಿ ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ (Government Bus) ಉಚಿತ ಪ್ರಯಾಣ ಮಾಡಬಹುದಾಗಿದೆ. ರಾಜ್ಯ ಸರ್ಕಾರದ (Karnataka Government) ಈ ಮಹತ್ವದ ಯೋಜನೆ ನಿನ್ನೆ (ಜೂ.11) ರಿಂದ ಜಾರಿಯಾಗಿದ್ದು, ಇದಕ್ಕೆ ರಾಜ್ಯ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದೆ. ಆದರೆ ಅಂತರರಾಜ್ಯ ಬಸ್​​ಗಳಲ್ಲಿ ಉಚಿತ ಪ್ರಯಾಣ ನಿರ್ಬಂಧವಿದೆ. ಇದೀಗ ಈ ಷರತ್ತು ಗಡಿಭಾಗದ ಮಹಿಳೆಯರಲ್ಲಿ ಗೊಂದಲ ಮೂಡಿಸಿದೆ. ವಿಜಯಪುರ ಜಿಲ್ಲೆ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿದ್ದು, ಗಡಿಯಲ್ಲಿರುವ ಚಡಚಣ ತಾಲೂಕಿನ ಗಡಿಗ್ರಾಮಗಳ ಜನತೆ ಉಚಿತ ಪ್ರಯಾಣದಿಂದ ವಂಚಿತರಾಗಿದ್ದಾರೆ.

ಈ ಭಾಗದಲ್ಲಿ ಸಂಚರಿಸುವ ಬಹುತೇಕ ಬಸ್​​ಗಳು ಅಂತರರಾಜ್ಯಕ್ಕೆ ಸಂಚರಿಸುತ್ತವೆ. ಹೀಗಾಗಿ ತಾಲೂಕಿನ ಝಳಕಿ, ಧೂಳಖೇಡ, ಚಡಚಣ ಮಾರ್ಗವಾಗಿ ಶಿರಾಡೋಣ ಸೇರಿದಂತೆ ವಿವಿಧ ಗ್ರಾಮಗಳ ಮಹಿಳೆಯರು ಪ್ರತಿದಿನ ಹೊರ್ತಿ, ಝಳಕಿ, ಧೂಳಖೇಡ ಮಾರ್ಗವಾಗಿ ಸೋಲಾಪುರಕ್ಕೆ ತೆರಳುತ್ತಾರೆ. ಈ ಷರತ್ತಿನಿಂದ ಮಹಿಳೆಯರು ಶಕ್ತಿ ಯೋಜನೆಯ ಸೌಲಭ್ಯದಿಂದ ವಂಚಿತರಾಗುತ್ತಿದ್ದು, ಕರ್ನಾಟಕ ರಾಜ್ಯದ ಗಡಿ ಗ್ರಾಮಗಳ ಮಹಿಳೆಯರಿಗೂ ಶಕ್ತಿ ಯೋಜನೆಯ ಸೌಲಭ್ಯ ಒದಗಿಸಲು ಆಗ್ರಹಿಸಿದ್ದಾರೆ.

ಪ್ರತಿದಿನ ಕರ್ನಾಟಕದಿಂದ ಮಹರಾಷ್ಟ್ರಕ್ಕೆ 110 ರಿಂದ 120 ಬಸ್​​ಗಳು ತೆರಳುತ್ತವೆ. ಕರ್ನಾಟಕ ರಾಜ್ಯದ ಗಡಿ ಗ್ರಾಮಗಳಾದ ಧೂಳಖೇಡ, ಶಿರಾಡೋಣ ಗ್ರಾಮಗಳಿಗೆ ಹೋಗಬೇಕಾದಲ್ಲಿ ಮಹಿಳೆಯರು ಹಣ ಪಾವತಿಸಬೇಕಾಗಿದೆ.
ಶಿರಾಡೋಣ ಗ್ರಾಮ ಚಡಚಣ ಮಾರ್ಗವಾಗಿ ಪಂಡರಪುರ ಹೋಗುವ ಮಾರ್ಗದಲ್ಲಿ ಬರುತ್ತಿದ್ದು, ಈ ಮಾರ್ಗ ಮತ್ತು ಭಾಗದಲ್ಲಿ ಸಂಚರಿಸುವ ಬಹುತೇಕ ಬಸ್​ಗಳು ಅಂತರ ರಾಜ್ಯ ಸಂಚಾರದ ಬೋರ್ಡ್ ಹೊಂದಿವೆ. ಈ ಬಸ್​​ಗಳಲ್ಲಿ ಮಹಿಳೆಯರು ಸಂಚರಿಸಿದರೇ ಹಣಕೊಟ್ಟು ಟಿಕೆಟ್​​ ಪಡೆಯಬೇಕು. ಹೀಗಾಗಿ ಮಹಿಳೆಯರು ಉಚಿತ ಪ್ರಯಾಣದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ: ಹೊಸದಾಗಿ 1,894 ಬಸ್​​ಗಳನ್ನು ಖರೀದಿಸಲು ರಾಜ್ಯ ಸಾರಿಗೆ ನಿಗಮ ಚಿಂತನೆ

ಈ ಭಾಗದಲ್ಲಿ ಮಹಿಳೆಯರ ಉಚಿತ ಸಂಚಾರಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಿ ಯೋಜನೆಯ ಸೌಲಭ್ಯ ಕಲ್ಪಿಸಿ. ಇಲ್ಲವಾದಲ್ಲಿ ಈ ಮಾರ್ಗಗಳಲ್ಲಿ ಸಂಚರಿಸುವ ಅಂತರರಾಜ್ಯ ಬಸ್​​​ಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿ ಎಂದು ಚಡಚಣ ತಾಲೂಕಿನ ಜನತೆ ಆಗ್ರಹಿಸಿದ್ದಾರೆ.

ಇನ್ನು ಚಿಕ್ಕಬಳ್ಳಾಪುರದಲ್ಲೂ ಇದೇ ಕತೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಆಂದ್ರ ಪ್ರದೇಶ-ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಕಾರಣ ಅಂತರ ರಾಜ್ಯ ಬಶ್​ಗಳ ಸಂಚಾರ ಹೆಚ್ಚಾಗಿದೆ. ಆದರೆ ಅಂತರರಾಜ್ಯ ಬಸ್​​ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ನಿರ್ಬಂಧವಿದೆ.

ಬೆಂಗಳೂರಿನಿಂದ ಆರಂಭವಾಗುವ ಟ್ರೀಟ್​​ಗಳಿಗೆ ಚಿಕ್ಕಬಳ್ಳಾಪುರದಿಂದ ಉಚಿತ ಪ್ರಯಾಣಕ್ಕೆ ಮಾತ್ರ ಅವಕಾಶವಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮೂಲಕ ಹಾದು ಹೋಗುವ ಬಸ್​​ಗಳಲ್ಲಿ ನಿರ್ಬಂಧವಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:45 am, Mon, 12 June 23