Death Note: ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ತಿಳಿದುಬಂದಿಲ್ಲ. ಆದರೆ ಲಾಕ್ಡೌನ್ ಶುರುವಾದಾಗಿನಿಂದ ಮಠಕ್ಕೆ ಯಾರೂ ಬರದೆ ಒಂಟಿಯಾಗಿದ್ದರು.
ಹಾಸನ: ಇಲ್ಲಿನ ಕಾರ್ಜುವಳ್ಳಿ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.
ಬಾಳೆ ಹೊನ್ನೂರಿನ ರಂಭಾಪುರಿ ಶಾಖಾಮಠವಾದ ಆಲೂರು ತಾಲೂಕಿನ ಕಾರ್ಜುವಳ್ಳಿಯ ಮಠದ ಪೀಠದ ಜವಾಬ್ದಾರಿಯನ್ನು 2006ರಲ್ಲಿ ಇವರು ವಹಿಸಿಕೊಂಡಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಲಾಕ್ಡೌನ್ ಆದಾಗಿನಿಂದ ಮಠಕ್ಕೆ ಭಕ್ತರು ಬರುತ್ತಿರಲಿಲ್ಲ. ಸ್ವಾಮೀಜಿ ಒಬ್ಬರೇ ಆಗಿದ್ದರು. ಒಂಟಿತನದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮೂಲತಃ ಕಾರವಾರದ ಹಳಿಯಾಳ ಗ್ರಾಮದವರು. ಪೂರ್ವಾಶ್ರಮದ ಹೆಸರು ಸತೀಶ್ ದೇವರು. ಬಳಿಕ ಸನ್ಯಾಸ ಸ್ವೀಕರಿಸಿ ಶಂಭುಲಿಂಗ ಸ್ವಾಮೀಜಿಯಾಗಿದ್ದರು. ಈ ಕೇಸ್ ಸಂಬಂಧ ಆಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published On - 2:46 pm, Wed, 25 November 20