ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಗೆ ಟೆಂಡರ್: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ
8 ಸಾವಿರ ಕೋಟಿ ರೂ. ವೆಚ್ಚದ ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಗೆ ಟೆಂಡರ್ನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಲೆಟರ್ ಆಫ್ ಅವಾರ್ಡ್ ಅಮಾನತ್ತಿನಲ್ಲಿಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಪಾರದರ್ಶಕ ಕಾಯ್ದೆ ವಿರುದ್ಧವಾಗಿ ಕೇವಲ 21 ದಿನಗಳ ಕಾಲ ಟೆಂಡರ್ ನಡೆಯಿತು.

ಬೆಂಗಳೂರು, ಮಾರ್ಚ್ 11: 8 ಸಾವಿರ ಕೋಟಿ ರೂ. ವೆಚ್ಚದ ಶರಾವತಿ ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಗೆ (Hydro Electric Power Plant) ಟೆಂಡರ್ನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಲೆಟರ್ ಆಫ್ ಅವಾರ್ಡ್ ಅಮಾನತ್ತಿನಲ್ಲಿಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಪಾರದರ್ಶಕ ಕಾಯ್ದೆ ವಿರುದ್ಧವಾಗಿ ಕೇವಲ 21 ದಿನಗಳ ಕಾಲ ಟೆಂಡರ್ ನಡೆಯಿತು. ಕೆಪಿಸಿಎಲ್ನಿಂದ ಕೆಲ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಟೆಂಡರ್ ಎಂದು ಆರೋಪ ಕೇಳಿಬಂದಿತ್ತು. ಹೀಗಾಗಿ ಪಾರದರ್ಶಕ ಕಾಯ್ದೆಯಂತೆ ಕನಿಷ್ಠ 30 ದಿನಗಳ ಕಾಲಾವಕಾಶ ನೀಡಬೇಕು. 5 ವರ್ಷ ಅವಧಿಯ 8000 ಕೋಟಿ ರೂ. ಯೋಜನೆಗೆ ಕೇವಲ 21 ದಿನಗಳ ಕಾಲ ಟೆಂಡರ್ ನಡೆಯಿತು.
ನೀತಿ ಸಂಹಿತೆಯಿಂದ ಪಾರಾಗಲು ತರಾತುರಿಯ ಟೆಂಡರ್ ಮತ್ತು ಅರ್ಜಿದಾರ ಎಲ್ & ಟಿ ಸಂಸ್ಥೆ ಪರ ಹಿರಿಯ ವಕೀಲ ಉದಯ್ ಹೊಳ್ಳ ಆರೋಪ ಮಾಡಿದ್ದಾರೆ. ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿದಾರರ ವಾದ ತಿರಸ್ಕರಿಸಿದೆ. 30 ದಿನಗಳ ಅವಧಿ ಕಡಿತಗೊಳಿಸಲು ಟೆಂಡರ್ ಪ್ರಾಧಿಕಾರಕ್ಕೆ ಅಧಿಕಾರವಿದೆ. ಈಗಾಗಲೇ ಬಿಡ್ ತೆರೆಯಲಾಗಿದ್ದು ಲೆಟರ್ ಆಫ್ ಅವಾರ್ಡ್ ನೀಡಲಾಗಿದೆ.
ಇದನ್ನೂ ಓದಿ: ಬನ್ನೇರುಘಟ್ಟ ಉದ್ಯಾನವನದಲ್ಲೂ ನೀರಿಗಾಗಿ ಹಾಹಾಕಾರ: ಬತ್ತಿದ ಬೋರ್ವೆಲ್ಗಳು, ಟ್ಯಾಂಕರ್ ಮೂಲಕ ನೀರು ಪೂರೈಕೆ
ತಡೆ ನೀಡದಂತೆ ರಾಜ್ಯ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಾಡಿದ್ದು, ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿನ ಪ್ರತಿ ಲಭ್ಯವಾಗದ ಹಿನ್ನೆಲೆ ಗುತ್ತಿಗೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳಲು CJ N.V.ಅಂಜಾರಿಯಾ, ನ್ಯಾ.ಕೃಷ್ಣ ದೀಕ್ಷಿತ್‌ರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ.
ಶರಾವತಿ ನದಿಯು ಕರ್ನಾಟಕದಲ್ಲಿ ಜಲವಿದ್ಯುತ್ ಶಕ್ತಿಯ ಪ್ರಮುಖ ಮೂಲವಾಗಿದೆ. ಪ್ರಸ್ತುತ, ನದಿಯು ಅಸ್ತಿತ್ವದಲ್ಲಿರುವ ಏಳು ಅಣೆಕಟ್ಟುಗಳು ಮತ್ತು ಐದು ಸುರಂಗಗಳನ್ನು ಬಳಸಿಕೊಂಡು ರಾಜ್ಯದ ಜಲವಿದ್ಯುತ್‌ನ ಗಮನಾರ್ಹ ಭಾಗವನ್ನು (ಶೇಕಡಾ 40 ಅಥವಾ 1,469.2 ಮೆಗಾವ್ಯಾಟ್) ಉತ್ಪಾದಿಸುತ್ತದೆ.
ಇದನ್ನೂ ಓದಿ: ಟಿವಿ9 ಡಿಜಿಟಲ್ ವರದಿ ಫಲಶ್ರುತಿ: ಬೀದರಿನ ಪುರಾತನ ಶಿವ ದೇಗುಲ ಜೀರ್ಣೋದ್ಧಾರಕ್ಕೆ ಮುಂದಾದ ಶಾಸಕ, ಪುರಾತತ್ವ ಇಲಾಖೆ
ಹೊಸ ತಂತ್ರಜ್ಞಾನದ ಮೂಲಕ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಪಂಪ್ಡ್ ಸ್ಟೋರೇಜ್ ಯೋಜನೆಯು 250 ಮೆಗಾವ್ಯಾಟ್ ಸಾಮರ್ಥ್ಯದ ಎಂಟು ಜಲವಿದ್ಯುತ್ ಸ್ಥಾವರಗಳ ಮೂಲಕ ನೀರನ್ನು ಪದೇ ಪದೇ ಪಂಪ್ ಮಾಡುವುದನ್ನು ಒಳಗೊಂಡಿರುತ್ತದೆ, ಯೋಜಿತ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2,000 MW ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:21 pm, Mon, 11 March 24