ಶತ್ರು ಭೈರವಿ ಯಾಗ: ಬಸವಣ್ಣನವರ ವಚನ ಹೇಳಿ ಡಿಸಿಎಂ ಡಿಕೆಗೆ ಹೆಚ್​ಡಿ ಕುಮಾರಸ್ವಾಮಿ ಟಾಂಗ್​​

| Updated By: ಆಯೇಷಾ ಬಾನು

Updated on: Jun 03, 2024 | 2:26 PM

ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ, ಶತ್ರು ಭೈರವಿ ಯಾಗ ನಡೆಸಲಾಗಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಸಂಬಂಧಿಸಿ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕುರಿ ಕೋಳಿ ಹೊಡೆದ ಬಗ್ಗೆ ಎಸ್​​ಐಟಿ ರಚನೆ ಮಾಡಲಿ. ಬಸವಣ್ಣನವರ ವಚನ ಹೇಳಿ ಟಾಂಗ್​ ಕೊಟ್ಟಿದ್ದಾರೆ.​

ಶತ್ರು ಭೈರವಿ ಯಾಗ: ಬಸವಣ್ಣನವರ ವಚನ ಹೇಳಿ ಡಿಸಿಎಂ ಡಿಕೆಗೆ ಹೆಚ್​ಡಿ ಕುಮಾರಸ್ವಾಮಿ ಟಾಂಗ್​​
ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ಜೂನ್.03: ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ, ಶತ್ರು ಭೈರವಿ ಯಾಗ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದರ ನಡುವೆ ಬಸವಣ್ಣನವರ ವಚನ ಹೇಳಿ ಡಿಸಿಎಂ ಡಿಕೆ ಶಿವಕುಮಾರ್​ ಅವರಿಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಟಾಂಗ್​ ಕೊಟ್ಟಿದ್ದಾರೆ.​

ಕೇರಳದ ರಾಜರಾಜೇಶ್ವರಿ ದೇವಸ್ಥಾನ ಬಳಿ ದೊಡ್ಡ ಕುಟುಂಬದವರು ಮಾಟ ಮಂತ್ರ ಮಾಡಿಸಿದ್ದಾರೆಂದು ಹೇಳಿದ್ದಾರೆ. ಮಾಟ ಮಂತ್ರದ ಬಗ್ಗೆ ದಾಖಲೆ ಕೊಡುತ್ತೇವೆ ಅಂತಾರೆ. ನಮ್ಮಲ್ಲಿ ಇದೆಲ್ಲ ನಡೆಯೊಲ್ಲಾ ಅಂತಾ ಕೇರಳ ಸರ್ಕಾರ ಚೀಮಾರಿ ಹಾಕಿದೆ. ಕುರಿ ಕೋಳಿ ಹೊಡೆದ ಬಗ್ಗೆ ಎಸ್​​ಐಟಿ ರಚನೆ ಮಾಡಲಿ. ಮಾಟ ಮಾಡಿಸಿರೋರು ರಾಜಕೀಯವಾಗಿ ದೊಡ್ಡ ಕುಟುಂಬ ಅಂತಾರೆ. ನಾನು ಕೇರಳಕ್ಕೆ ಹೋಗಿದ್ದು ಮಾಟ ಮಂತ್ರಕ್ಕೆ ಎಂದು ಹೇಳಿದ್ದಾರೆ. ನಾನು ನನ್ನ ಮೊಮ್ಮಗನ ಜೊತೆ ಕಾಲ ಕಳೆಯಲು ಹೋಗಿದ್ದೆ. ಗುಪ್ತಚರ ಮೂಲಕ ನನ್ನನ್ನು ಹುಡುಕುವ ಕೆಲಸ ಮಾಡಿದ್ರು. ಈ ವೇಳೆ ಅವರಿಗೆ ನಾನು ಕಬಿನಿಯಲ್ಲಿ ಇರೋ ವಿಚಾರ ಗೊತ್ತಾಗಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

‘ಕೈ’ ಸರ್ಕಾರ ತೆಗೆಯೋಕೆ ಯಾರೋ ಕುರಿ & ಕೋಳಿ ಬಲಿ ಕೊಟ್ಟಿದ್ದಾರೆ. ಕುರಿ, ಕೋಳಿ ಯಾರು ಹೊಡೆದಿದ್ದಾರೆಂದು ಡಿಸಿಎಂ ಡಿಕೆ ಹೇಳಿದ್ದಾರೆ. ಅದಕ್ಕೂ ಎಸ್​ಐಟಿ ತನಿಖೆ ಮಾಡಿಸಿ ಎಂದ ಹೆಚ್​.ಡಿ.ಕುಮಾರಸ್ವಾಮಿ ತಿರುಗೇಟಿ ನೀಡಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಮಳೆಯಾಗಲಿ ಅಂತ ಪ್ರಾರ್ಥಿಸುತ್ತಿದರೆ ಬೆಂಗಳೂರು ನಿವಾಸಿಗಳು ತಮ್ಮ ಕಷ್ಟ ನೀಗಲಿ ಅಂತ!

ಘಟನೆ ಹಿನ್ನೆಲೆ

ಡಿಸಿಎಂ ಡಿಕೆ ಶಿವಕುಮಾರ್ ಅವರು ಕೇರಳದ ದೇವಸ್ಥಾನದಲ್ಲಿ ಶತ್ರು ಭೈರವಿ ಯಾಗ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಅಂತಹ ಯಾವುದೇ ಯಾಗ ನಡೆದಿಲ್ಲ ಎಂದು ದೇವಾಲಯ ಆಡಳಿತ ಮಂಡಳಿ ಅಧಿಕೃತ ಹೇಳಿಕೆ ನೀಡಿತ್ತು. ಇದಾದ ಬೆನ್ನಲ್ಲೆ ಡಿಕೆ ಶಿವಕುಮಾರ್ ಅವರು ಮತ್ತೊಂದು ಸ್ಪಷ್ಟನೆ ನೀಡಿ ವಿವಾದ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು.

ನಾನು ದೇವಿ ರಾಜರಾಜೇಶ್ವರಿಯ ಭಕ್ತನಾಗಿದ್ದು, ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡುವುದಿಲ್ಲ ಎನ್ನುವ ಅರಿವಿದೆ. ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದು, ದೇವಸ್ಥಾನದಿಂದ 15 ಕಿ.ಮೀ. ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ಯಾಗ ನಡೆದಿದೆ ಎಂದು ಸ್ಪಷ್ಟಪಡಿಸುತ್ತೇನೆ. ಯಾಗ ನಡೆದಿರುವ ಸ್ಥಳದ ಬಗ್ಗೆ ಮಾಹಿತಿ ನೀಡಲಷ್ಟೇ ನಾನು ದೇಗುಲದ ಹೆಸರನ್ನು ಉಲ್ಲೇಖಿಸಿದ್ದೆ. ಕೆಲವು ದಿನಗಳ ಹಿಂದೆ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ‌ಭೇಟಿ‌ ನೀಡಿ ದೇವಿಯ ಆಶೀರ್ವಾದ ಪಡೆದಿದ್ದೆ. ವಿಷಯಗಳನ್ನು ಸಂದರ್ಭದಿಂದ ಹೊರಗಿಟ್ಟು ಅವುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂಬುದು ನನ್ನ ವಿನಂತಿ ಎಂದು ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:22 pm, Mon, 3 June 24