ಶಿವಮೊಗ್ಗ: ಕೊರೊನಾ ಪೆಡಂಭೂತ ಜೊತೆಗೆ ಫಂಗಸ್ಗಳ ಹಾವಳಿಯೂ ಜೋರಾಗಿ ಕಾಡತೊಡಗಿದೆ. ಒಂದು ಸಾಲದು ಅಂತಾ ಮೂರು ಫಂಗಸ್ಗಳು ಬಣ್ಣ ಬಣ್ಣಗಳಲ್ಲಿ ಕಾಣಿಸಿಕೊಂಡು ಕೊರೊನಾ ಸೋಂಕಿತರನ್ನು ಪೇಲವವಾಗಿಸುತ್ತಿದೆ. ಈ ಮಧ್ಯೆ, ಫಂಗಸ್ ಹಬ್ಬುವುದನ್ನು ತಡೆಗಟ್ಟಲು ಸಾಧ್ಯವಾಗೆ ವೈದ್ಯ ಲೋಕ ಕೈಚೆಲ್ಲಿದೆ. ಸೂಕ್ತ ಔಷಧ, ಇಂಜೆಕ್ಷನ್ ಕೊರತೆಯೂ ಎದುರಾಗಿದೆ. ಅಸಲಿಗೆ ಯಾವ ಫಂಗಸ್‌ಗೆ ಯಾವ ಇಂಜಕ್ಷನ್/ ಔಷಧ ಎಂಬುದು ವೈದ್ಯಲೋಕಕ್ಕೂ ಖಚಿತವಾಗಿ ತಿಳಿದುಬಂದಿಲ್ಲ. ಈ ಮಧ್ಯೆ ಮಲೆನಾಡಿನ ಶಿವಮೊಗ್ಗದಲ್ಲಿ 48 ವರ್ಷದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ, ಬ್ಲ್ಯಾಕ್ ಫಂಗಸ್ ಅನ್ನು ದೂರಮಾಡಲಾಗಿದೆ. ಸೋಂಕಿತ ಅಪಾಯದಿಂದ ಪಾರಾಗಿದ್ದಾರೆ
ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ನಡೆದಿದ್ದು, ರಿಪ್ಪನ್‌ಪೇಟೆಯ 48 ವರ್ಷದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೆಗ್ಗಾನ್ ಆಸ್ಪತ್ರೆಯ ಕಿವಿ,ಮೂಗು ಮತ್ತು ಗಂಟಲು (ENT) ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಗಮನಾರ್ಹವೆಂದ್ರೆ ಈ ಹಿಂದೆ ಚಿಕ್ಕಮಗಳೂರಿನ ಒಬ್ಬ ಸೋಂಕಿತನಿಗೆ ಇದೇ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಗಮನಾರ್ಹವೆಂದ್ರೆ ಈ ಎರಡೂ ಶಸ್ತ್ರಚಿಕಿತ್ಸೆ ನಡೆಸಿ, ವೈದ್ಯ ಲೋಕದಲ್ಲಿ ಸಾಧನೆ ಮಾಡಿರುವುದು ಒಂದೇ ವೈದ್ಯ ತಂಡ.
ಜಿಲ್ಲೆಯ ರಿಪ್ಪನ್ ಪೇಟೆಯ 48 ವರ್ಷದ ವ್ಯಕ್ತಿಗೆ 20 ದಿನಗಳ ಹಿಂದೆ ಕೊರೋನ ಸೋಂಕು ತಗುಲಿತ್ತು. ಆತನಿಗೆ ಇಂದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಡಾ.ಗಂಗಾಧರ್ ಅವರ ನೇತೃತ್ವದ ಇಎನ್ಟಿ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ.
(Shivamogga megan hospital doctor gangadhar successfully conducts surgery on black fungus in covid patient)