ಕೊರೊನಾ ಎರಡನೇ ಅಲೆಯ ನಡುವೆ ಕರಗ ಆಚರಣೆ; ಕೊವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಎಪ್ಐಆರ್
ಹೊಸಕೋಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಗುಂಪು ಗೂಡದೆ ಹೂವಿನ ಕರಗ ಮಹೋತ್ಸವ ನೆರವೇರಿಸಿದ್ದಾರೆ. ಆದರೆ ದೊಡ್ಡಬಳ್ಳಾಪುರದಲ್ಲಿ ಮಾತ್ರ ಕರಗದ ಹೆಸರಲ್ಲಿ ಆಯೋಜಕರು ಗುಂಪು ಗುಂಪಾಗಿ ಜನರನ್ನು ಗೂಡಿಸಿ ಕೊರೊನಾ ಜಾತ್ರೆಯನ್ನೆ ಮಾಡಿ ಮೈಮರೆತಿದ್ದಾರೆ.
ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದ್ದು, ಸರ್ಕಾರ ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಕ್ಡೌನ್ ಜಾರಿಗೆ ತಂದಿದೆ. ಆದರೆ ಜನರು ಕೊರೊನಾ ಭೀತಿಯ ನಡುವೆಯು ಮೂಡನಂಬಿಕೆಗಳಿಂದ ಹೊರ ಬಂದಿಲ್ಲ. ಇದಕ್ಕೆ ಸಾಕ್ಷಿ ಇತ್ತೀಚೆಗಷ್ಟೆ ಜನರು ಗುಂಪು ಗುಂಪಾಗಿ ಸೇರಿ ಜಾತ್ರೆ ಮತ್ತು ಹೋಮಗಳನ್ನ ಮಾಡುತ್ತಿರುವುದು. ಇಂತಹದ್ದೇ ಈಗ ಮತ್ತೊಂದು ಘಟನೆ ನಡೆದಿದ್ದು, ಸಿಲಿಕಾನ್ ಸಿಟಿಯಿಂದ ಸ್ವಲ್ಪ ದೂರದಲ್ಲಿರುವ ದೇವನಹಳ್ಳಿಯಲ್ಲಿ ಜನ ಗುಂಪು ಗುಂಪಾಗಿ ಸೇರಿ ಕರಗ ಆಚರಣೆ ಮಾಡುವ ಮೂಲಕ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ನಗರದಲ್ಲಿಮೊದಲಿನಿಂದಲು ಮೇ ತಿಂಗಳಲ್ಲಿ ಕರಗ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿಯ ಕರಗಕ್ಕೆ ಕೊರೊನಾ ಅಡ್ಡಿಯುಂಟಾಗಿ ಎಲ್ಲದ್ದಕ್ಕೂ ನಿರ್ಬಂಧ ಹಾಕಿದ್ದಾರೆ. ಆದರೆ ಈ ಕರಗ ಪರಂಪರಿಕವಾಗಿ ಬರುತ್ತಿರುವ ಕರಗ ಮಹೋತ್ಸವ ಎಂದು ಸ್ಥಳಿಯರು ಜನಪ್ರತಿನಿಧೀಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ 15 ಜನ ಮೀರದಂತೆ ದೇವಸ್ಥಾನದ ಆವರಣದಲ್ಲಿ ಕರಗ ಮಾಡಿಕೊಳ್ಳಲು ತಾಲೂಕು ಆಡಳಿತ ಪರೋಕ್ಷ ಬೆಂಬಲ ನೀಡಿದೆ.
ಹೀಗಾಗಿ ಹೊಸಕೋಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಗುಂಪು ಗೂಡದೆ ಹೂವಿನ ಕರಗ ಮಹೋತ್ಸವ ನೆರವೇರಿಸಿದ್ದಾರೆ. ಆದರೆ ದೊಡ್ಡಬಳ್ಳಾಪುರದಲ್ಲಿ ಮಾತ್ರ ಕರಗದ ಹೆಸರಲ್ಲಿ ಆಯೋಜಕರು ಗುಂಪು ಗುಂಪಾಗಿ ಜನರನ್ನು ಗೂಡಿಸಿ ಕೊರೊನಾ ಜಾತ್ರೆಯನ್ನೆ ಮಾಡಿ ಮೈಮರೆತಿದ್ದಾರೆ.
ಕರಗ ಆಯೋಜಕರ ವಿರುದ್ದ ಅಧಿಕಾರಿಗಳಿಂದ ಎಪ್ಐಆರ್ 15 ಜನ ಮೀರದಂತೆ ಕರಗ ಆಚರಣೆ ಮಾಡಿ ಎಂದರೆ ಹೊಸಕೋಟೆ ನಗರದ ದ್ರೌಪದಮ್ಮ ದೇವಿ ಸನ್ನಿದಾನದಲ್ಲಿ 40 ಕ್ಕೂ ಅಧೀಕ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಕರಗ ಆಚರಣೆ ಮಾಡಿದ್ದಾರೆ. ಆದರೆ ದೊಡ್ಡಬಳ್ಳಾಪುರದಲ್ಲಿ ಮಾತ್ರ ದೇವಸ್ಥಾನದ ಆವರಣಕ್ಕೆ ಸೀಮಿತ ಮಾಡಬೇಕಿದ್ದ. ಆಚರಣೆಯನ್ನು ಬೀದಿ ಬೀದಿಗೆ ತಂದು, ನೂರಾರು ಜನ ನೂಕು ನುಗ್ಗಲಲ್ಲಿ ಭಾಗಿಯಾಗುವ ಮೂಲಕ ಕೊರೊನಾ ನಿರ್ಲಕ್ಷ್ಯ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರೆ.
ಸಾಮಾಜಿಕ ಜಾಲತಾಣದಲ್ಲಿ ಕರಗದ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಇದೀಗ ಕೊರೊನಾ ಮಹಾಮಾರಿಯ ನಡುವೆ ಸರ್ಕಾರದ ನಿಯಮಗಳನ್ನ ಪಾಲಿಸದೆ ನಿರ್ಲಕ್ಷ್ಯ ವಹಿಸಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಒಟ್ಟಾರೆ ಕೊರೊನಾ ತಡೆಯಲು ಸರ್ಕಾರ ಶತ ಪ್ರಯತ್ನಗಳನ್ನು ಮಾಡುತ್ತಿದ್ದರು. ಜನರು ಮಾತ್ರ ಹಬ್ಬ ಆಚರಣೆಗಳ ಹೆಸರಲ್ಲಿ ಕೊರೊನಾ ಮಹಾಮಾರಿಯನ್ನ ಮರೆಯುತ್ತಿರುವುದು ನಿಜಕ್ಕೂ ದುರಂತ. ಇನ್ನಾದರು ಸರ್ಕಾರ ಮತ್ತು ಜಿಲ್ಲಾಡಳೀತ ಎಚ್ಚೆತ್ತು ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಇದನ್ನೂ ಓದಿ:
ಗದಗದಲ್ಲಿ ಮತ್ತೆ ಸರ್ಕಾರಿ ನಿಯಮಗಳ ಉಲ್ಲಂಘನೆ; ದೇವರ ಜಾತ್ರೆ ಹೆಸರಿನಲ್ಲಿ ನೂರಾರು ಮಂದಿ ಒಂದೆಡೆ ಭಾಗಿ
ಕೊರೊನಾ ನಿಯಮ ಉಲ್ಲಂಘನೆ.. ಬೆಂಗಳೂರಿನ JW ಮ್ಯಾರಿಯೆಟ್ ಸೇರಿ 3 ಹೋಟೆಲ್ಗಳ ವಿರುದ್ಧ FIR