ಶಿವಮೊಗ್ಗ ಟ್ರಯಲ್ ಬ್ಲಾಸ್, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಿಂದ ಸರ್ವೈವಲ್ ಟಾಸ್ಕ್

| Updated By: Rakesh Nayak Manchi

Updated on: Sep 21, 2023 | 11:10 AM

ಶಿವಮೊಗ್ಗ ತುಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್​ಐಎ ತನಿಖೆ ಮುಂದುವರಿಸಿದ್ದು, ಹವಲು ವಿಚಾರಗಳು ಬೆಳಕಿಗೆ ಬರುತ್ತಿವೆ. ಅದರಂತೆ, ಆರೋಪಿಗಳು ಸರ್ವೈವಲ್ ಟಾಕ್ಸ್ ಮಾಡಿದ್ದು, ಗೂಗಲ್​ನಲ್ಲಿ ಬಾಂಬ್ ತಯಾರಿಸುವ ವಿಧಾನದ ಬಗ್ಗೆ ತಿಳಿದುಕೊಂಡಿರುವುದು ತಿಳಿದುಬಂದಿದೆ.

ಶಿವಮೊಗ್ಗ ಟ್ರಯಲ್ ಬ್ಲಾಸ್, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಿಂದ ಸರ್ವೈವಲ್ ಟಾಸ್ಕ್
ಸರ್ವೈವಲ್ ಟಾಸ್ಕ್ ನಡೆಸಿದ ಶಿವಮೊಗ್ಗ ಟ್ರಯಲ್ ಬ್ಲಾಸ್, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು (ಸಾಂದರ್ಭಿಕ ಚಿತ್ರ)
Image Credit source: Getty Images
Follow us on

ಬೆಂಗಳೂರು, ಸೆ.21: ಶಿವಮೊಗ್ಗ ತುಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ (Shivamogga trial blast) ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ (Mangaluru cooker bomb blast) ಪ್ರಕರಣ ಸಂಬಂಧ ಎನ್​ಐಎ ತನಿಖೆ ಮುಂದುವರಿಸಿದ್ದು, ಹವಲು ವಿಚಾರಗಳು ಬೆಳಕಿಗೆ ಬರುತ್ತಿವೆ. ಅದರಂತೆ, ಆರೋಪಿಗಳು ಸರ್ವೈವಲ್ ಟಾಕ್ಸ್ ಮಾಡಿದ್ದು, ಗೂಗಲ್​ನಲ್ಲಿ ಬಾಂಬ್ ತಯಾರಿಸುವ ವಿಧಾನದ ಬಗ್ಗೆ ತಿಳಿದುಕೊಂಡಿರುವುದು ತಿಳಿದುಬಂದಿದೆ.

ವಿಚಾರಣೆ ವೇಳೆ, ಸರ್ವೈವಲ್ ಟಾಸ್ಕ್ ಮಾಡಿದ್ದನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಪೊಲೀಸ್, ತನಿಖಾ ಸಂಸ್ಥೆಯಿಂದ ತಪ್ಪಿಸಿಕೊಳ್ಳುಲೂ ವಿಶೇಷ ತರಬೇತಿ ನೀಡಲಾಗುತ್ತದೆ. ಇದನ್ನೇ ಸರ್ವೈವಲ್ ಟಾಸ್ಕ್ ಎನ್ನುತ್ತಾರೆ.

ಕಾಡುಗಳಲ್ಲಿ ತಲೆಮರೆಸಿಕೊಂಡು ಎರಡು ಮೂರು ದಿನ ಊಟ ನಿದ್ದೆ ಇಲ್ಲದೆ ಇರುವಂತಹದ್ದೇ ಸರ್ವೈವಲ್ ಟಾಸ್ಕ್​ ಆಗಿದ್ದು, ಇಂತಹ ಟಾಸ್ಕ್​ಗಾಗಿ ಕಾಡುಗಳಲ್ಲಿ ಕೆಲ ದಿನಗಳ ಕಾಲ ತರಬೇತಿ ನೀಡಲಾಗುತ್ತಿತ್ತು ಎಂಬ ವಿಚಾರವನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಮಂಗಳೂರು ಕುಕ್ಕರ್ ಸ್ಫೋಟ ಬಳಿಕ ಆರೋಪಿ ಶಾರೀಕ್ ಇದೇ ರೀತಿ ಸರ್ವೈವಲ್ ಟಾಸ್ಕ್​ನಲ್ಲಿ ತೊಡಗುವ ಉದ್ದೇಶ ಹೊಂದಿದ್ದ. ಅರಣ್ಯ ಪ್ರದೇಶದಿಂದ ಕೆಲ ದಿನಗಳ ಬಳಿಕ ಬೇರೆ ಪಾಸ್ ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗುವ ಪ್ಲಾನ್ ಮಾಡಿದ್ದರು.

ಇದನ್ನೂ ಓದಿ: ಜಾರ್ಖಂಡ್​ನಲ್ಲಿ ಬಂಧಿತನಾದ ಉಗ್ರನಿಗೆ ಯಾದಗಿರಿ ನಂಟು, ಎರಡನೇ ಬಾರಿ ಶಹಾಪುರ ನಗರಕ್ಕೆ ಎನ್​ಐಎ ಎಂಟ್ರಿ

ಅಲ್ಲದೆ, ಮೊಬೈಲ್​ನಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂದು ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದು ಕೂಡ ವಿಚಾರಣೆ ವೇಳೆ ತಿಳಿದುಬಂದಿದೆ. ಇದರ ಜೊತೆಗೆ ಅಬ್ದುಲ್ ಮತೀನ್ ಹಾಗೂ ಅರಾಫತ್ ಇಷ್ಟು ದಿನ ತಲೆಮರೆಸಿಕೊಂಡಿದ್ದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಂಬುದು ಬೆಳಕಿಗೆ ಬಂದಿದೆ.

ಪಿಓಕೆಯಲ್ಲೇ ಅರಾಫತ್ ತರಬೇತಿ ಪಡೆದಿರುವ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ಯಾರಿಗೂ ತಿಳಿಯದಂತೆ ದುಬೈಗೆ ತೆರಳಿ ಅಲ್ಲಿಂದ ಪಾಕಿಸ್ತಾನಕ್ಕೆ ಹೋಗುತ್ತಿದ್ದನು. ಅಲ್ಲಿನ ಉಗ್ರರು ಮತಾಂಧ ಮನಸ್ಥಿತಿಯ ಹುಡುಗರನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದರು. ನಂತರ ನಕಲಿ ಪಾಸ್ ಪೋರ್ಟ್ ಮೂಲಕ ದುಬೈಗೆ ಕರೆಸಿಕೊಳ್ಳುತ್ತಿದ್ದರು. ಅಲ್ಲಿಂದ ಪಾಕಿಸ್ತಾನದ ಪಾಸ್​ಪೋರ್ಟ್​ ನೀಡಿ ಪಾಕಿಸ್ತಾನಕ್ಕೆ ಕರೆಸಿಕೊಳ್ಳುತ್ತಿದ್ದರು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಬೇಕಾದ ಎಲ್ಲಾ ತರಬೇತಿ ಸಿಗುತ್ತಿತ್ತು. ಮಿಲಿಟೆಂಟ್ ಮಾದರಿಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಎಲ್ಲಾ ಮುಗಿದ ನಂತರ ಪಾಕ್​ನಿಂದ ದುಬೈಗೆ ಬಂದು ಭಾರತದ ಪಾಸ್ ಪೋರ್ಟ್ ಬಳಸಿ ಭಾರತಕ್ಕೆ ಬರುತ್ತಿದ್ದರು ಎಂಬ ಸತ್ಯಸಂಗತಿಯನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ