ಸ್ನೇಹಿತರ ಜೊತೆ ಸ್ವಿಮ್ಮಿಂಗ್ ಪೂಲ್​ಗೆ ಈಜಲು ಹೋಗಿದ್ದ ಯುವಕ ಸಾವು

| Updated By: ವಿವೇಕ ಬಿರಾದಾರ

Updated on: Sep 28, 2022 | 5:29 PM

ಸ್ನೇಹಿತರ ಜತೆ ಸ್ವಿಮ್ಮಿಂಗ್​ಪೂಲ್​ಗೆ ಈಜಲು ಹೋಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ಶಕ್ತಿಧಾಮ ಲೇಔಟ್​ ಬಳಿ ಇರುವ ಖಾಸಗಿ ಒಡೆತನದ ಕರ್ಣ ಮೋದಿ ಸ್ವಿಮ್ಮಿಂಗ್ ಪೂಲ್​ನಲ್ಲಿ ನಡೆದಿದೆ.

ಸ್ನೇಹಿತರ ಜೊತೆ ಸ್ವಿಮ್ಮಿಂಗ್ ಪೂಲ್​ಗೆ ಈಜಲು ಹೋಗಿದ್ದ ಯುವಕ ಸಾವು
ಮೃತ ಯುವಕ
Follow us on

ಶಿವಮೊಗ್ಗ: ಸ್ನೇಹಿತರ ಜತೆ ಸ್ವಿಮ್ಮಿಂಗ್​ಪೂಲ್​ಗೆ ಈಜಲು ಹೋಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ಶಕ್ತಿಧಾಮ ಲೇಔಟ್​ ಬಳಿ ಇರುವ ಖಾಸಗಿ ಒಡೆತನದ ಕರ್ಣ ಮೋದಿ ಸ್ವಿಮ್ಮಿಂಗ್ ಪೂಲ್​ನಲ್ಲಿ ನಡೆದಿದೆ. ರಾಕೇಶ್ (18) ಮೃತ ಯುವಕ. ಶಿವಮೊಗ್ಗದ ಜೊಸೆಫ್ ನಗರದ ನಿವಾಸಿ ಕುಮಾರ್ ಎಂಬುವರ ಪುತ್ರನಾಗಿರುವ ರಾಕೇಶ್, ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದನು. ರಾಕೇಶ್ ಇಂದು ಸ್ನೇಹಿತರೊಂದಿಗೆ ಶಿವಮೊಗ್ಗ ಹೊರವಲಯದ ಗಾಡಿಕೊಪ್ಪ ಸಮೀಪದ ಶಕ್ತಿಧಾಮ ಲೇಔಟ್ ಬಳಿ ಇರುವ ಖಾಸಗಿ ಒಡೆತನದ ಕರ್ಣ ಮೋದಿ ಈಜಲು ತೆರಳಿದ್ದಾನೆ. ಆದರೆ ರಾಕೇಶ್​ಗೆ ಈಜಲು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದು ತಾಯಿ, ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

ಯಾದಗಿರಿ: ಸಿಡಿಲು ಬಡಿದು ತಾಯಿ,ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ಗುರುಮಠಕಲ್‌ ತಾಲೂಕಿನ ಎಸ್ ಹೊಸಹಳ್ಳಿ ಬಳಿ ನಡೆದಿದೆ. ಗಾಜರಕೋಟ ಗ್ರಾಮದ ಮೋನಮ್ಮ (25) ಭಾನು (4) ಶ್ರೀನಿವಾಸ್ (2), ಎಸ್ ಹೊಸಹಳ್ಳಿ ಗ್ರಾಮ ಸಾಬಣ್ಣ (17) ಮೃತ ದುರ್ದೈವಿಗಳು. ಓರ್ವ ಯುವಕನಿಗೆ ಗಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮಧ್ಯಾಹ್ನ ಯಾದಗಿರಿಯಿಂದ ಊರಿಗೆ ಹೋಗುವಾಗ ಸುರಿದ ಮಳೆಯಿಂದಾಗಿ ಸಿಡಲು ಬಡಿದು ಸಾವನ್ನಪ್ಪಿದ್ದಾರೆ. ಗುರುಮಠಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:25 pm, Wed, 28 September 22