ಶಿವಮೊಗ್ಗ: ಹುಣಸೋಡು ಸ್ಫೋಟ ಮರೆಯಾಗುವ ಮುಂಚೆಯೇ ಜಿಲ್ಲೆಯಲ್ಲಿ ಮತ್ತೊಂದು ಸ್ಫೋಟ ಕೇಳಿಬಂದಿದೆ. ತಾಳಗುಪ್ಪದಲ್ಲಿನ ರಂಗಪ್ಪನ ಗುಡ್ಡದ ಸುತ್ತಮುತ್ತದ ಜನ ಸ್ಫೋಟಕ್ಕೆ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರು ಹಾಗೂ ಇನ್ನಿತರ ನಗರ ಪ್ರದೇಶಗಳಿಗೆ ವಿದ್ಯುತ್ ನೀಡಲು ಕೆಪಿಟಿಸಿಎಲ್ ಇಲಾಖೆಯ ಹೈಟೆನ್ಷನ್ ಲೈನ್ ಹಾದುಹೋಗಿದ್ದು, ಈ ಲೈನ್ ಹತ್ತಿರದಲ್ಲೇ ಬೃಹತ್ ಪ್ರಮಾಣದ ಅಕೇಶಿಯಾ ಮರಗಳು ಬೆಳೆದಿವೆ. ಹೈಟೆನ್ಷನ್ ವೈರ್ಗೆ ಮರ ತಾಗಿ ಭಾರಿ ಸ್ಫೋಟವಾಗಿದೆ.
ಸ್ಫೋಟದ ಬೆನ್ನಲ್ಲೇ ಬೆಂಕಿ ಕಾಣಿಸಿಕೊಂಡು ಧಗ ಧಗನೇ ಉರಿದಿದೆ. ಈ ಬೃಹತ್ ಪಶ್ಚಿಮಘಟ್ಟದ ಜನರನ್ನ ಬೆಚ್ಚಿ ಬೀಳಿಸಿದ್ದು, ಪರಿಸರದ ಮೇಲೆ ತೀವ್ರತರವಾದ ಆಘಾತವುಂಟು ಮಾಡಿದೆ. ಇದು ಕೆಪಿಟಿಸಿಎಲ್ನ ದಿವ್ಯ ನಿರ್ಲಕ್ಷತನವೆಂದು ಜನ ದೂಷಿಸಿದ್ದಾರೆ.
ಸಾಗರ ತಾಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗನಾಥ ಕಾಲೋನಿಯಲ್ಲಿರುವ 250 ಕ್ಕೂ ಹೆಚ್ಚು ಕುಟುಂಬಗಳ ಜೀವ ಹಾಗೂ ಜೀವನ ಕೆಪಿಟಿಸಿಎಲ್ ಅಧಿಕಾರಿಗಳ ನಿರ್ಲಕ್ಷತನದಿಂದ ಭಯದಿಂದ ಸಾಗುತ್ತಿದೆ. ವರ್ಷವಿಡೀ ಈ ರೀತಿಯ ವಿದ್ಯುತ್ ಅವಘಡಗಳು ಸರ್ವೇ ಸಾಮಾನ್ಯವಾಗಿರುತ್ತದೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೇ ಹಲವಾರು ಮನೆಗಳ ಗೃಹಪಯೋಗಿ ವಸ್ತುಗಳು ಸುಟ್ಟು ಕರಾಕಲಾಗಿದ್ದೂ, ಅಪಾರವಾದ ನಷ್ಟ ಉಂಟಾಗಿರುವ ಉದಾಹರಣೆಗಳಿವೆ. ನಿನ್ನೆ ನಡೆದ ಘಟನೆಯಲ್ಲಿ ಕೆಪಿಟಿಸಿಎಲ್ ಗೆ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಆದರೆ ಈ ಅವಘಡ ಕುರಿತು ಕೆಪಿಟಿಸಿಎಲ್ ಅಧಿಕಾರಿಗಳು ಮಾತ್ರ ಗಪ್ ಚುಪ್ ಆಗಿದ್ದಾರೆ.
ಇದನ್ನೂ ಓದಿ
ಅಯೋಧ್ಯೆ ರಾಮಮಂದಿರ ಅಡಿಪಾಯಕ್ಕೆ ಬೆಂಗಳೂರಿನಿಂದ ಕಲ್ಲುಗಳ ರವಾನೆ, ಹನುಮನ ನಾಡಿನಿಂದ ರಾಮನೆಡೆಗೆ ಹೊರಟ ಲಾರಿಗಳು
Color Rice Benefits: ನಾವು ಸೇವಿಸುವ ಅಕ್ಕಿಯಲ್ಲೂ ಬಣ್ಣಗಳಿವೇ? ಯಾವ ಬಣ್ಣದ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದು ಗೊತ್ತಾ?
Published On - 12:05 pm, Mon, 25 October 21