ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷನ ಕೊಲೆ (Harsha Murder) ಇಡೀ ರಾಜ್ಯವನ್ನೆ ಕೆರಳಿಸಿದೆ. ಹರ್ಷನ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈಗಾಗಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನೈಜ ಸಂಗತಿ ತಿಳಿಯಬೇಕಿದೆ. ಈ ನಡುವೆ ಮೃತ ಹರ್ಷನಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಶಿವಾಜಿ (Shivaji) ರೂಪದಲ್ಲಿ ಕೇಸರಿ ಶಾಲಿನೊಂದಿಗೆ ಚಿತ್ರ ಬಿಡಿಸಿ ಅಭಿಮಾನಿಗಳು ಓಂ ಶಾಂತಿ ಕೋರಿದ್ದಾರೆ. ಈ ಚಿತ್ರ ಎಲ್ಲೆಡೆ ವೈರಲ್ ಆಗುತ್ತಿದೆ.
ಸಂಘಟನೆಯ ಕೈವಾಡ ಶಂಕೆ:
ಕೊಲೆ ಮಾಡಿದ ಆರೋಪಿಗಳು ಆರ್ಥಿಕವಾಗಿ ಸದೃಢವಾಗಿಲ್ಲ. ಕೊಲೆ ಮಾಡಿರುವ ಹಿಂದೆ ಸಂಘಟನೆಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಯಲ್ಲಿ ಯಾವುದಾದರೂ ಸಂಘಟನೆ ಕೈವಾಡ ಇದೆಯಾ? ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
15 ವರ್ಷದ ಹಿಂದೆ ಹಿಂದೂ ಮುಖಂಡನ ಕೊಲೆಯಾಗಿತ್ತು. ಸಾಥು ಗ್ಯಾಂಗ್ ಹಿಂದೂ ಮುಖಂಡನ ಕೊಲೆ ಮಾಡಿತ್ತು. ಈಗ ಜೈಲಿನಲ್ಲಿದ್ದೇ ಹರ್ಷ ಕೊಲೆಗೆ ಸ್ಕೆಚ್ ಹಾಕಿದ್ರ ಎಂಬ ಅನುಮಾನ ಮೂಡಿದೆ. ಸದ್ಯ ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಜೈಲಿನಲ್ಲಿರುವ ಸಾಥು ಗ್ಯಾಂಗ್ನ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಶಾಂತವಾಗಿದ್ದ ಶಿವಮೊಗ್ಗದಲ್ಲಿ ಕಾಣದ ಕೈಗಳು ಅಶಾಂತಿ ಸೃಷ್ಟಿ ಮಾಡಿವೆ- ಬಿ ವೈ ರಾಘವೇಂದ್ರ:
24 ಘಂಟೆಯಲ್ಲಿ ಹರ್ಷ ಕೊಲೆ ಆರೋಪಿಗಳ ಬಂಧನವಾಗಿದೆ ಅಂತ ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಶಾಂತವಾಗಿದ್ದ ಶಿವಮೊಗ್ಗದಲ್ಲಿ ಕಾಣದ ಕೈಗಳು ಅಶಾಂತಿ ಸೃಷ್ಟಿ ಮಾಡಿವೆ. ಈ ಘಟನೆಗೆ ಹಿಂದೆ ಯಾರು ಇದ್ದಾರೆ ಎನ್ನುವುದನ್ನು ಬೇರು ಮಟ್ಟದಿಂದ ಕಿತ್ತು ಬಿಸಾಕಬೇಕಿದೆ. ಇದು ಕೇವಲ ಶಿವಮೊಗ್ಗ ಸಮಸ್ಯೆ ಮಾತ್ರವಲ್ಲ. ಇದು ದೇಶದ ಸಮಸ್ಯೆ ಆಗಿದೆ. ಈಗಾಗಲೇ ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕೇಂದು ಕೇಂದ್ರ ನಾಯಕರು ಚರ್ಚೆ ಮಾಡಿದ್ದಾರೆ. ಈ ಕುರಿತು ಸಂಸತ್ತನಲ್ಲಿ ಚರ್ಚೆ ಮಾಡಲಾಗುವುದು. ಪದೇ ಪದೇ ಹಿಂದು ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ಇದು ಆತಂಕಕಾರಿ ಬೆಳವಣಿಗೆ ಆಗಿದೆ. ಹರ್ಷ ಕುಟುಂಬಕ್ಕೆ ತುಂಬಾಲಾರದ ನಷ್ಟ ಆಗಿದೆ ಅಂತ ಹೇಳಿದರು.
ಇದನ್ನೂ ಓದಿ
ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ: 6 ಆರೋಪಿಗಳ ಬಂಧನ, 13 ಎಫ್ಐಆರ್ ದಾಖಲು- ಎಸ್ಪಿ ಮಾಹಿತಿ
ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಕಾಂಗ್ರೆಸ್ ಗದ್ದಲವೇ ಕೊಲೆಗೆ ಕಾರಣ ಎಂದು ಆರೋಪಿಸಿದ ಸಿಎಂ ಬೊಮ್ಮಾಯಿ
Published On - 11:41 am, Wed, 23 February 22