Crime News: ಪತಿಯಿಂದ ಪತ್ನಿ, ಆತ್ತೆಯ ಕೊಚ್ಚಿ ಕೊಲೆ – ಅಪ್ರಾಪ್ತ ವಯಸ್ಸಿನ ಬಾಲಕಿಗೆ ಸಿನಿಮಾದಲ್ಲಿ ನಟಿಸುವ ಆಸೆ, ವಂಚನೆ

ಳೆನೀರು ವ್ಯಾಪಾರಿ ರವಿ ಎಂಬಾತ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಏಳೆನೀರು ಕೊಚ್ಚುವ ಮಚ್ಚಿನಿಂದಲೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಗೋವಿಂದರಾಜ ನಗರ ಪೊಲೀಸರು ಅರೋಪಿ ರವಿಯನ್ನು ವಶಕ್ಕೆ ಪಡೆದಿದ್ದಾರೆ.

Crime News: ಪತಿಯಿಂದ ಪತ್ನಿ, ಆತ್ತೆಯ ಕೊಚ್ಚಿ ಕೊಲೆ - ಅಪ್ರಾಪ್ತ ವಯಸ್ಸಿನ ಬಾಲಕಿಗೆ ಸಿನಿಮಾದಲ್ಲಿ ನಟಿಸುವ ಆಸೆ, ವಂಚನೆ
ಸಾಂಕೇತಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 22, 2022 | 12:43 PM

ಬೆಂಗಳೂರು: ಬೆಂಗಳೂರಿನ ಗೋವಿಂದರಾಜನಗರದಲ್ಲಿ ಪತಿಯಿಂದಲೇ ಪತ್ನಿ ಮತ್ತು ಆತ್ತೆಯ ಬರ್ಬರ ಹತ್ಯೆಗಳಾಗಿವೆ. ಸರೋಜಮ್ಮ ಮತ್ತು ಸಾವಿತ್ರಿ ಹತ್ಯೆಗೀಡಾದವರು. ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಾವಿತ್ರಿ ಪತಿ, ಎಳೆನೀರು ವ್ಯಾಪಾರಿ ರವಿ ಎಂಬಾತ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಏಳೆನೀರು ಕೊಚ್ಚುವ ಮಚ್ಚಿನಿಂದಲೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಗೋವಿಂದರಾಜ ನಗರ ಪೊಲೀಸರು ಅರೋಪಿ ರವಿಯನ್ನು ವಶಕ್ಕೆ ಪಡೆದಿದ್ದಾರೆ.

ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ಪತಿ: ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ರವಿಕುಮಾರ್ ಪದೇ ಪದೇ ಹೆಂಡತಿಗೆ ಬದ್ಧಿವಾದ ಹೇಳಿದ್ದ. ಹೆಂಡತಿ ತನ್ನ ಚಾಳಿಯನ್ನ ತಿದ್ದಕೊಳ್ಳದ ಹಿನ್ನೆಲೆ ಮೊದಲು ವಾಸ ಮಾಡಿದ್ದ ಮನೆಯನ್ನು ಖಾಲಿ ಮಾಡಿ ಬೇರೆ ಕಡೆ ಮನೆ ಮಾಡಿದ್ದ. ಬಳಿಕವೂ ಹೆಂಡತಿಯು ತನ್ನ ಹಳೆಯ ಗೆಳಯನ ಸಹವಾಸ ಬಿಟ್ಟಿರಲಿಲ್ಲ. ಇದರಿಂದ ಬೇಸತ್ತು, ಇಂದು ಮಕ್ಕಳನ್ನು ಸ್ವತಃ ತಾನೇ ಸ್ಕೂಲ್ ಗೆ ಬಿಟ್ಟಿದ್ದಾನೆ. ಸ್ಕೂಲ್ ಗೆ ಬಿಟ್ಟು ಬಂದು ಮನೆಗೆ ವಾಪಸಾದಾಗ ಜಗಳ ಪ್ರಾರಂಭವಾಗಿದೆ. ಬಳಿಕ ಎಳೆ ನೀರು ಕೊಚ್ಚುವ ಮಚ್ಚಿನಿಂದಲೇ ಹೆಂಡತಿ ಮತ್ತು ತಾಯಿ ಇಬ್ಬರನ್ನೂ ಕೊಚ್ಚಿಕೊಂದಿದ್ದಾನೆ. ಕೊಲೆ ಮಾಡಿದ ಆರೋಪಿ, ತಾನೇ ತನ್ನ ಸ್ಕೂಟರ್ ಮೂಲಕ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ಹಾಜರಾಗಿ ಹೆಂಡತಿ ಹತ್ಯೆಯ ವಿಚಾರ ಹೇಳಿದ್ದಾನೆ.

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಸಿನಿಮಾದಲ್ಲಿ ನಟಿಸುವ ಆಸೆ, ವಂಚನೆ; ಆರೋಪಿ ಅರೆಸ್ಟ್ ನೆಲಮಂಗಲ: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಸಿನಿಮಾದಲ್ಲಿ ನಟಿಸಲು ಚಾನ್ಸ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವುದು ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ. ವಂಚಿಸಿದ್ದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಓಂ ಸಾಯಿ ಮಹದೇವ (25) ಎಂಬ ಯುವಕನನ್ನು ಬಂಧಿಸಲಾಗಿದೆ. ಬಾಲಕಿಯಿಂದ 3 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದು ಅರೋಪಿ ವಂಚಿಸಿರುವುದಾಗಿ ಹೇಳಲಾಗಿದೆ.

ನಟಿಯಾಗುವ ಆಸೆಗಾಗಿ ಮನೆಯಲ್ಲಿದ್ದ ಚಿನ್ನಾಭರಣ, ಹಣ ತೆಗೆದುಕೊಂಡು ಬಾಲಕಿಯು ಆರೋಪಿ ವಂಚಕ ಮಹದೇವನಿಗೆ ಕೊಟ್ಟಿದ್ದಾಳೆ. ಆದರೆ ಕಾಲಾಂತರದಲ್ಲಿ ಹಣವೂ ಇಲ್ಲ, ನಟನೆಯೂ ಇಲ್ಲ ಎಂಬುದು ಸಂತ್ರಸ್ತ ಬಾಲಕಿಯ ಅರಿವಿಗೆ ಬಂದಿದೆ. ವಿಷಯ ತಿಳಿದು ಬಾಲಕಿಯ ಪೋಷಕರು ತಕ್ಷಣ ದಾಬಸ್ ಪೇಟೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಸಂತ್ರಸ್ತ ಬಾಲಕಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ದೂರಿನ ಆಧಾರದ ಮೇಲೆ ಪೊಲೀಸರು ಯುವಕನನ್ನ ಬಂಧಿಸಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಪ ತಟ್ಟುವ ಭೀತಿ: ಬಡವರ ಕಾರು ಕದಿಯುವುದಿಲ್ಲವಂತೆ ಈ ಡಿಫ್ರೆಂಟ್ ಕಳ್ಳ! ಬ್ಯಾಟರಾಯನಪುರ: ಬಡವರ ಕಾರ್ ಎಗರಿಸಿದರೇ ಶಾಪ ತಟ್ಟುತ್ತೇ ಅನ್ನೊ ಮನೋಸ್ಥಿತಿಯಲ್ಲಿದ್ದಾನೆ ಇಲ್ಲೊಬ್ಬ ಡಿಫ್ರೆಂಟ್ ಕಳ್ಳ! ಹಾಗಾಗಿ ಅವನು ಶೂರೂಂ ಮುಂಭಾಗದ ಕಾರ್ ಗಳನ್ನೇ ಎಗರಿಸುತಿದ್ದ. ಆದರೀಗ ಆ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ ಅನ್ನೀ. ಬಂಧಿತ ಆರೋಪಿಯ ಹೆಸರು ಪಿಳಕಲ್ ನಜೀರ್ ಅಂತಾ. ಮೂಲತಃ ಕೇರಳದವ. ಕೆಲ ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸವಿದ್ದಾನೆ.

ಬ್ಯಾಟರಾಯನಪುರದ ಶೋರೂಂ ಬಳಿ ಕಾರ್ ಎಗರಿಸಿದ್ದ ಕಳ್ಳ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 21 ಲಕ್ಷ ರೂಪಾಯಿ ಮೌಲ್ಯದ ಒಂದು ಕಾರ್, ಎರಡು ಬೈಕ್ ವಶಕ್ಕೆ ಪಡೆದಿದ್ದಾರೆ. ಇದೇ ಮಾದರಿ 15ಕ್ಕೂ ಹೆಚ್ಚು ಕೃತ್ಯಗಳನ್ನು ಎಸಗಿದ್ದಾನೆ ಇದೇ ಆರೋಪಿ.

ಕಾರ್ ಶೋರೂಂಗಳ ಬಳಿ ಎಂಟ್ರಿ ಕೊಡುತಿದ್ದ ಕಳ್ಳ. ಆ ವೇಳೆ ಆವರಣದಲ್ಲಿ ನಿಲ್ಲಿಸಿರೋ ಕಾರ್ ಗಳ ಬಳಿ ತೆರಳುತಿದ್ದ. ಕಾರ್ ನಲ್ಲೇ ಕೀ ಬಿಟ್ಟ ಗಾಡಿಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಯಾರೂ ಇಲ್ಲದ ವೇಳೆ ಮೆಲ್ಲನೇ ಒಳಗೆ ಎಂಟ್ರಿ ಕೊಡ್ತಿದ್ದ. ಬಳಿಕ ಸೈಲೆಂಟ್ ಆಗಿ ಎಸ್ಕೇಪ್ ಆಗುತಿದ್ದ ಕಳ್ಳ. ಕಳ್ಳನ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಸೆರೆಯಾದ ದೃಶ್ಯ ಆಧರಿಸಿ ಆರೋಪಿಯನ್ನು ಕೊನೆಗೂ ಬಂಧಿಸಲಾಗಿದೆ.

ನಕಲಿ ಸರ್ಫ್ ಎಕ್ಸೆಲ್ ಹಾಗೂ ಗುಡ್ ನೈಟ್ ಲಿಕ್ವಿಡ್ ! ಬೆಂಗಳೂರು: ನಕಲಿ ಬ್ರ್ಯಾಂಡ್​ ಕಂಪನಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. 5 ಲಕ್ಷ ರೂಪಾಯಿ ಮೌಲ್ಯದ ನಕಲಿ ಬ್ರ್ಯಾಂಡ್​ ಉತ್ಪನ್ನಗಳನ್ನು ಸೀಜ್ ಮಾಡಿದ್ದಾರೆ. ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನಕಲಿ ಸರ್ಫ್ ಎಕ್ಸೆಲ್ ಹಾಗೂ ಗುಡ್ ನೈಟ್ ಲಿಕ್ವಿಡ್ ಗೋಡೊನ್ ಮೇಲೆ ದಾಳಿ ನಡೆಸಿ, ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬ್ರಾಂಡ್ ಕಂಪನಿಗಳ ಪ್ರಾಡಕ್ಟ್ ಗಳನ್ನ ನಕಲಿ ಮಾಡುತ್ತಿದ್ದರು. ಆರೋಪಿಗಳು ನಕಲಿ ಸರ್ಫ್ ಎಕ್ಸೆಲ್ ತಯಾರು ಮಾಡಲು ಸಣ್ಣ ಫ್ಯಾಕ್ಟರಿಯನ್ನೇ ನಡೆಸುತ್ತಿದ್ದರು.

Published On - 11:28 am, Tue, 22 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ