ಈಶ್ವರಪ್ಪ ಪ್ರತಿಯೊಬ್ಬ ನಾಗರಿಕರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಸೆಕ್ಷನ್ 144 ಜಾರಿ ಮಾಡಿದ ಮೇಲೆ ಒಂದು ನಿಯಮವಿರುತ್ತದೆ. ಆದರೂ ಸಚಿವರು ಮೃತದೇಹ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಸಚಿವ ಈಶ್ವರಪ್ಪ ಮೇಲೆ ಏಕೆ ಕೇಸ್ ಹಾಕಿಲ್ಲ? ಮೆರವಣಿಗೆ ವೇಳೆ ಅಂಗಡಿಗಳ ಮೇಲೆ ಕಲ್ಲು ಹೊಡೆಸಿದ್ದಾರೆ. ಇದಕ್ಕೆ ಏಕೆ ಪ್ರಕರಣ ದಾಖಲಿಸಿಲ್ಲವೆಂದು ಡಿಜಿ ಹೇಳಬೇಕು ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರು: ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಕೇಸ್‌ನಲ್ಲಿ ಹಳೇ ವೈಷಮ್ಯ ಇರುವುದು ಗೊತ್ತಾಗಿದೆ. ಈ ವಿಚಾರ ಗೊತ್ತಾದಾಗ ಪೊಲೀಸರು(Karnataka Police) ಎಚ್ಚರಿಕೆ ವಹಿಸಬೇಕಾಗಿತ್ತು. ಪ್ರಚೋದನೆ ಹೇಳಿಕೆ ನೀಡುವವರನ್ನು ಅವರೇ ಇಟ್ಟುಕೊಳ್ಳಲಿ. ಅಂತಹ ಮುತ್ತುರತ್ನಗಳನ್ನು ಅವರ ಬಳಿಯೇ ಇಟ್ಟುಕೊಳ್ಳಲಿ. ಪ್ರತಿಯೊಬ್ಬ ನಾಗರಿಕನನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ ಸಚಿವ ಈಶ್ವರಪ್ಪ(Eshwarappa). ಇದರಿಂದ ಅವರಿಗೆ ಆರ್ಥಿಕವಾಗಿ ಪೆಟ್ಟು, ಮಲೆನಾಡಿಗೂ ಅವಮಾನವಾಗಲಿದೆ. ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಆರೋಪ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ಸೆಕ್ಷನ್ 144 ಜಾರಿ ಮಾಡಿದ ಮೇಲೆ ಒಂದು ನಿಯಮವಿರುತ್ತದೆ. ಆದರೂ ಸಚಿವರು ಮೃತದೇಹ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಸಚಿವ ಈಶ್ವರಪ್ಪ ಮೇಲೆ ಏಕೆ ಕೇಸ್ ಹಾಕಿಲ್ಲ? ಮೆರವಣಿಗೆ ವೇಳೆ ಅಂಗಡಿಗಳ ಮೇಲೆ ಕಲ್ಲು ಹೊಡೆಸಿದ್ದಾರೆ. ಇದಕ್ಕೆ ಏಕೆ ಪ್ರಕರಣ ದಾಖಲಿಸಿಲ್ಲವೆಂದು ಡಿಜಿ ಹೇಳಬೇಕು. ಇದಕ್ಕೆ ಖಾಕಿ ಬಟ್ಟೆಯನ್ನು ಹಾಕಿಕೊಂಡವರು ಉತ್ತರ ನೀಡಬೇಕು. ಇಲ್ಲವೇ ಖಾಕಿ ತೆಗೆದುಬಿಟ್ಟು ನೀವು ಕೂಡ ಕೇಸರಿ ಬಟ್ಟೆ ಹಾಕಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಈಶ್ವರಪ್ಪ ಡಿಕೆಶಿ ಪ್ರಚೋದನೆಯಿಂದ ಕೊಲೆ ಆಗಿದೆ ಎಂಬ ಹೇಳಿಕೆ ವಿಚಾರ
ಶಿವಮೊಗ್ಗ ಸಂಬಂಧ ಮಂತ್ರಿ ಹಾಗೂ ನಾಯಕರು ಹೇಳಿದ್ದಾರೆ. ತನಿಖೆ ಮಾಡಿ ನೊಂದವರಿಗೆ ನ್ಯಾಯ ಒದಗಿಸಬೇಕು. ರಾಜಕೀಯ ಲಾಭಕ್ಕಾಗಿ ಆಸ್ತಿಪಾಸ್ತಿ ಹಾನಿ ಮಾಡಬಾರದು. ಪ್ರಚೋದನೆಯಿಂದ ಕೊಲೆ ಆಗಿದೆ ಎಂದಾದರೆ, ತನಿಖೆ ಮಾಡಿ ಬಂಧಿಸಲಿ ಎಂದು ಡಿಕೆಶಿ ಹೇಳಿದ್ದಾರೆ.
ಕುಮಾರಸ್ವಾಮಿ ಹೇಳಿಕೆ ವಿಚಾರ
ಕುಮಾರಸ್ವಾಮಿ ಬಹಳ ದೊಡ್ಡವರು ಮಾತನಾಡುತ್ತಾರೆ ಬಿಡಿ. ಅವರ ಅನುಭವದ ಭಂಡಾರದಲ್ಲಿರುವ ಮಾತುಗಳನ್ನು ತೆಗೆದು ಹೊರಗೆ ಬಿಡ್ತಿದ್ದಾರೆ. ಅವರು ಮಾತಾಡಲಿ ಬಿಡಿ, ನಮಗೆ ಯಾಕೆ ಬೇಕು ಗದ್ದಲ. ಅವರೇ ಟ್ರೈಲರ್ ಅಂತೆಲ್ಲ ಹೇಳಿದ್ದಾರೆ ಎಂದು ಡಿಕೆ ಶಿವಕುಮಾರ್ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಹರ್ಷನ ಕಗ್ಗೊಲೆ ಹೇಗಾಯ್ತು? ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದ ಕೊಲೆಯ ಕಂಪ್ಲೀಟ್ ಡಿಟೇಲ್ಸ್
ಶಿವಮೊಗ್ಗ ಗಲಭೆ ಪ್ರಕರಣ: ಇದು ಪೂರ್ವನಿಯೋಜಿತ ಷಡ್ಯಂತ್ರ; ಎನ್ಐಎ ಮೂಲಕ ತನಿಖೆಗೆ ಆಗ್ರಹಿಸಿದ ಕೆಎಸ್ ಈಶ್ವರಪ್ಪ
Published On - 9:09 am, Tue, 22 February 22