AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka MLA Salary Hike: ಕರ್ನಾಟಕ ಶಾಸಕರ ಸಂಬಳ ಏರಿಕೆ -ಸಿಎಂ, ಶಾಸಕರ ಸಂಬಳ ಎಷ್ಟು ಹೆಚ್ಚಳವಾಯ್ತು?

ವಿಧಾನಸಭೆ, ವಿಧಾನ ಪರಿಷತ್ ಎರಡೂ ಶಾಸಕರ ಸಂಬಳ ಭತ್ಯೆ ಹೆಚ್ಚಳ ಮಾಡಲಾಗಿದೆ. ಇಂದು ಸಚಿವರ ವೇತನ, ಭತ್ಯೆ ಹೆಚ್ಚಳದ ವಿಧೇಯಕ ಅಂಗೀಕಾರ ಮಾಡಲಾಗಿದೆ. ಜತೆಹೆ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ.

Karnataka MLA Salary Hike: ಕರ್ನಾಟಕ ಶಾಸಕರ ಸಂಬಳ ಏರಿಕೆ -ಸಿಎಂ, ಶಾಸಕರ ಸಂಬಳ ಎಷ್ಟು ಹೆಚ್ಚಳವಾಯ್ತು?
ವಿಧಾನಸಭಾ ಕಲಾಪ
TV9 Web
| Updated By: preethi shettigar|

Updated on:Feb 22, 2022 | 3:16 PM

Share

ಬೆಂಗಳೂರು: ಕಳೆದ ಐದು ದಿನಗಳಿಂದ ಗದ್ದಲದಲ್ಲೇ ಕಳೆಯುತ್ತಿರುವ ಸದನದಲ್ಲಿ ಇಂದು (ಫೆಬ್ರವರಿ 22) ಶಾಸಕರ(MLA) ಸಂಬಳ ಭತ್ಯೆ ಹೆಚ್ಚಳ ಮಾಡಲಾಗಿದೆ. ವಿಧಾನಸಭೆ, ವಿಧಾನ ಪರಿಷತ್ ಎರಡೂ ಶಾಸಕರ ಸಂಬಳ(Salary) ಭತ್ಯೆ ಹೆಚ್ಚಳ ಮಾಡಲಾಗಿದೆ. ಇಂದು ಸಚಿವರ (Ministers) ವೇತನ, ಭತ್ಯೆ ಹೆಚ್ಚಳದ ವಿಧೇಯಕ ಅಂಗೀಕಾರ ಮಾಡಲಾಗಿದೆ. ಜತೆಹೆ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ.

ವಿಧೇಯಕಕ್ಕೆ ಶಾಸಕ ಬಂಡೆಪ್ಪ ಕಾಶಂಪೂರ್ ವಿರೋಧ ವ್ಯಕ್ತಪಡಿಸಿದ್ದಾರೆ. ಗದ್ದಲದ ನಡುವೆಯೇ ಸದನದಲ್ಲಿ ವಿಧೇಯಕ ಅಂಗೀಕಾರ ಮಾಡಲಾಗಿದೆ. ಇನ್ನು ಮುಂದೆ ಪ್ರತಿ 5 ವರ್ಷಕ್ಕೆ ಸಂಬಳ, ಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಯಾವುದೇ ಬಿಲ್ ಮಂಡನೆ ಅವಶ್ಯಕತೆ ಇಲ್ಲದೆ ನೇರವಾಗಿ ವಿಧಾನಸಭೆ, ವಿಧಾನ ಪರಿಷತ್ ಎರಡೂ ಶಾಸಕರ ಸಂಬಳ ಹೆಚ್ಚಳ ಮಾಡಲಾಗುತ್ತದೆ.

ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ‌

  •  ಮುಖ್ಯಮಂತ್ರಿ, ಮಂತ್ರಿಗಳ ಸಂಬಳ ಶೇಕಡಾ 50 ರಷ್ಟು ಹೆಚ್ಚಳ.
  • ಸಿಎಂಗೆ ಪ್ರತಿ ತಿಂಗಳು  ಇದ್ದ 50 ಸಾವಿರ ಸಂಬಳ ಶೇಕಡಾ 75 ಸಾವಿರಕ್ಕೆ ಹೆಚ್ಚಳ.
  • ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ಪ್ರತಿ ತಿಂಗಳಿಗೆ ಶೇಕಡಾ 40 ಸಾವಿರ ಇದ್ದ ಸಂಬಳ 60 ಸಾವಿರ ರೂಪಾಯಿಗಳಿಗೆ ಹೆಚ್ಚಳ.
  • ಕ್ಯಾಬಿನೆಟ್ ದರ್ಜೆ ಪ್ರತಿ ವರ್ಷಕ್ಕೆ ಅತಿಥ್ಯ ಭತ್ಯೆ ಶೇಕಡಾ 3 ಲಕ್ಷದಿಂದ ನಾಲ್ಕೂವರೆ ಲಕ್ಷಕ್ಕೆ ಹೆಚ್ಚಳ.
  • ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ಬಾಡಿಗೆ ಶೇಕಡಾ 80 ಸಾವಿರದಿಂದ 1ಲಕ್ಷದ 20  ಸಾವಿರ ರೂಪಾಯಿಗೆ ಹೆಚ್ಚಳ.
  • ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ನಿರ್ವಹಣೆ ವೆಚ್ಚ ಶೇಕಡಾ 20 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಳ.
  • ಕ್ಯಾಬಿನೆಟ್ ದರ್ಜೆ ಮಂತ್ರಿಗಳ ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳಿಗೆ ಒಂದು ಸಾವಿರ ಪೆಟ್ರೋಲ್​ನಿಂದ 2 ಸಾವಿರ ಪೆಟ್ರೋಲ್​ಗೆ ಹೆಚ್ಚಳ

ವಿಧಾನಪರಿಷತ್: ಕಾಂಗ್ರೆಸ್ ಗದ್ದಲದ ನಡುವೆ 2022ನೇ ಸಿವಿಲ್ ಸರ್ವೀಸ್ ವಿಧೇಯಕ ಅಂಗೀಕಾರ

2011ನೇ ಸಾಲಿನ ಗೆಜೆಟ್ ಪ್ರೊಬೆಷನರಿ ಆಯ್ಕೆ ಮತ್ತು ನೇಮಕಾತಿ ಸಿಂದುಗೊಳಿಸುವ ವಿಧೇಯಕವನ್ನು ಅಂಗೀಕಾರ ಮಾಡಲಾಗಿದೆ. ಕಾಂಗ್ರೆಸ್ ಗದ್ದಲದ ನಡುವೆ 2022ನೇ ಸಿವಿಲ್ ಸರ್ವೀಸ್ ವಿಧೇಯಕವನ್ನು ಸಿಎಂ ಪರವಾಗಿ ಕಾನೂನು ಸಚಿವ ಮಾಧುಸ್ವಾಮಿ ಮಂಡನೆ ಮಾಡಿದ್ದಾರೆ. ಈ ವಿಧೇಯಕವನ್ನು ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಹನುಮಂತ ನಿರಾಣಿ, ರವಿಕುಮಾರ್, ಎಸ್. ವಿ ಸಂಕನೂರು, ತಿಪ್ಪೇಸ್ವಾಮಿ ಹಾಗೂ ರುದ್ರೇಗೌಡ ಸ್ವಾಗತಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅತ್ಯಂತ ಬೇಜವಾವ್ದಾರಿಯ ಪಕ್ಷ: ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ

ಕಾಂಗ್ರೆಸ್​ಗೆ ಜನರ, ಸದನದ ಘನತೆಯೂ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಅತ್ಯಂತ ಬೇಜವಾವ್ದಾರಿಯ ಪಕ್ಷ. ಈಶ್ವರಪ್ಪ ಹೇಳದ್ದನ್ನು ಕಾಂಗ್ರೆಸ್ ದೊಡ್ಡದು ಮಾಡುತ್ತಿದೆ. ಕಾಂಗ್ರೆಸ್ ಮಾಡುತ್ತಿರುವುದು ಜನತೆಯ ಹಿತಾಸಕ್ತಿ ವಿರುದ್ಧ. ರಾಜ್ಯದ ಜನರಿಗೆ ಕಾಂಗ್ರೆಸ್ ದ್ರೋಹ ಮಾಡುತ್ತಿದೆ. ನಮ್ಮ ಕೆಲಸದ ಮೇಲೆ ಜನರ ಬಳಿ ಹೋಗುತ್ತೇವೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆ ಕಲಾಪ ಮಾರ್ಚ್ 4ಕ್ಕೆ ಮುಂದೂಡಿಕೆ

ಕಾಂಗ್ರೆಸ್ ಪ್ರತಿಭಟನೆ ಹಿಂಪಡೆಯದ ಹಿನ್ನೆಲೆ ವಿಧಾನಸಭೆ ಕಲಾಪವನ್ನು ಸ್ಪೀಕರ್ ಕಾಗೇರಿ ಮಾರ್ಚ್ 4ಕ್ಕೆ ಮುಂದೂಡಿದ್ದಾರೆ. ಕಳೆದ ಒಂದು ವಾರ ದಿಂದ ನಿಮ್ಮ ಮನವಿಗೆ ಬೆಲೆ ಕೊಡ್ತಿಲ್ಲ. ವಿರೋಧ ಪಕ್ಷದ ಸ್ಥಾನವನ್ನೂ ಕೂಡ ಕಾಂಗ್ರೆಸ್ ಕಳೆದುಕೊಳ್ತಾರೆ. ಅವರು ರಾಜಕೀಯ ಲಾಭಕ್ಕಾಗಿ ಧರಣಿ ಮಾಡ್ತಿದ್ದಾರೆ. ಆದರೆ ರಾಜಕೀಯ ಲಾಭವೂ ಕೂಡ ಆಗುವುದಿಲ್ಲ. ಹೀಗಾಗಿ ವಿಧಾನಸಭಾ ಕಲಾಪ ಮಾರ್ಚ್ 4 ನೇ ತಾರೀಖಿಗೆ ಮುಂದೂಡಿಕೆ ಮಾಟಲಾಗಿದೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ 2022ನೇ ಸಾಲಿನ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ ಅಂಗೀಕಾರ

ಸಚಿವ ಈಶ್ವರಪ್ಪ ವಜಾಗೆ ಕಾಂಗ್ರೆಸ್ ಬಿಗಿ ಪಟ್ಟು, ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿದ ಸ್ಪೀಕರ್

Published On - 12:08 pm, Tue, 22 February 22