ಕೋಡೂರು ಸರಕಾರಿ ಪ್ರೌಢಶಾಲೆಗೆ ಬಿಇಓ ಭೇಟಿ, ವಿದ್ಯಾರ್ಥಿಗಳನ್ನು ಹೊಸ ಕೊಠಡಿಗೆ ಶಿಫ್ಟ್ ಮಾಡಲು ಸೂಚನೆ
ಸುಮಾರು 40 ವರ್ಷಗಳ ಹಳೆಯ ಸರ್ಕಾರಿ ಶಾಲೆಯ ಕೊಠಡಿ ಆಗಿದ್ದರಿಂದ ಮಳೆಗಾಲ ಮುಗಿಯುವವರೆಗೆ ಈ ಮೂರು ಕೊಠಡಿಯ ವಿದ್ಯಾರ್ಥಿಗಳನ್ನು ಆರ್ಸಿಸಿ ಇರುವ ಕೊಠಡಿಗೆ ಶಿಫ್ಟ್ ಮಾಡಲು ಮುಖ್ಯೋಪಾದರಿಗೆ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.
ಶಿವಮೊಗ್ಗ: ಹೊಸನಗರ ತಾಲೂಕಿನ ಕೋಡೂರು ಸರಕಾರಿ ಪ್ರೌಢಶಾಲೆಯ ಮಕ್ಕಳು ಕೊಠಡಿಯಲ್ಲಿ ಕೊಡೆ ಹಿಡಿದುಕೊಂಡು ಕುಳಿತಿರುವ ಫೋಟೋಗಳು ವೈರಲ್ ಆಗಿದ್ದವು. ಕೋಡೂರು ಸರಕಾರಿ ಪ್ರೌಢಶಾಲೆಯಲ್ಲಿ ಟಿವಿ9 ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಿದಾಗ ವೈರಲ್ ಆದ ಫೋಟೋ ಘಟನೆಗೂ ಅಲ್ಲಿರುವ ವಾಸ್ತವ ಸಂಗತಿ ಮತ್ತೊಂದು ಆಗಿತ್ತು. ಕೊಡೆ ಹಿಡಿದು ಕುಳಿತುಕೊಂಡ ಕೊಠಡಿಯಲ್ಲಿ ಟಿವಿ9 ರಿಯಾಲಿಟಿ ಚೆಕ್ ಮಾಡಿದಾಗ ಅಲ್ಲಿ ವಿದ್ಯಾರ್ಥಿಗಳು ಕೊಠಡಿ ಸೋರುವುದಿಲ್ಲ ಎಂದು ಸತ್ಯವನ್ನು ಹೊರಹಾಕಿದರು.
ಆ ದಿನ ಕೇವಲ ಶಾಲೆಯ ಕಾರಿಡಾರ್ ನಲ್ಲಿ ಮಾತ್ರ ಮಳೆ ನೀರು ಸೋರಿಕೆ ಆಗಿತ್ತು. ಸರಕಾರಿ ಪ್ರೌಢಶಾಲೆಯ ಕೊಠಡಿಯಲ್ಲಿ ಫೋಟೋ ವೈರಲ್ ಆದ ರೀತಿಯಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಈ ನಡುವೆ ಸರಕಾರಿ ಶಾಲೆಗೆ ಹೊಸನಗರ ಬಿಇಓ ಕೃಷ್ಣಮೂರ್ತಿ ಹಾಗೂ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್ ಭೇಟಿ ನೀಡಿದ್ದರು. ಅಧಿಕಾರಿಗಳು ಮತ್ತು ಶಾಲೆಯ ಮುಖ್ಯೋಪಾಧ್ಯಾಯ ಚೇತನ ಅವರು ಕೊಠಡಿಯಲ್ಲಿ ವೈರಲ್ ಆದ ಫೋಟೋ ಕುರಿತು ಟಿವಿ9ಗೆ ಮಾಹಿತಿ ನೀಡಿದರು. ಸ್ಥಳೀಯವಾಗಿ ಯಾರೋ ಒಬ್ಬ ವ್ಯಕ್ತಿ ಬಂದು ಮಕ್ಕಳಿಗೆ ಕೊಠಡಿಯಲ್ಲಿ ಕೊಡೆ ಹಿಡಿದು ಕುಳಿತುಕೊಳ್ಳಲು ಹೇಳಿದ್ದಾರೆ. ಬಳಿಕ ಕೋಡೆ ಹಿಡಿದು ಕುಳಿತುಕೊಂಡಿರುವ ವಿದ್ಯಾರ್ಥಿಗಳ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ. ಕಾರಿಡಾರ ಮಳೆ ನೀರು ಸೋರುವ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಸುಮಾರು 40 ವರ್ಷಗಳ ಹಳೆಯ ಸರ್ಕಾರಿ ಶಾಲೆಯ ಕೊಠಡಿ ಆಗಿದ್ದರಿಂದ ಮಳೆಗಾಲ ಮುಗಿಯುವವರೆಗೆ ಈ ಮೂರು ಕೊಠಡಿಯ ವಿದ್ಯಾರ್ಥಿಗಳನ್ನು ಆರ್ಸಿಸಿ ಇರುವ ಕೊಠಡಿಗೆ ಶಿಫ್ಟ್ ಮಾಡಲು ಮುಖ್ಯೋಪಾದರಿಗೆ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಶಿಕ್ಷಣ ಸಚಿವರ ತವರು ಜಿಲ್ಲೆಯೇ ಅವ್ಯವಸ್ಥೆಯ ಆಗರ: ಶಾಲಾ ಕೊಠಡಿಯಲ್ಲಿ ಛತ್ರಿ ಹಿಡಿದು ಪಾಠ ಕೇಳುವ ಸ್ಥಿತಿ
ಇನ್ನು ಮತ್ತೊಂದೆಡೆ 8,9,10 ಮೂರು ತರಗತಿಯಲ್ಲಿ ಕೋಡೂರು ಸುತ್ತಮುತ್ತಲಿನ 10ಕ್ಕೂ ಹೆಚ್ಚು ಹಳ್ಳಿಯಿಂದ ಸುಮಾರು 125ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ಟಿವಿ9 ರಿಯಾಲಿಟಿ ಚೆಕ್ ನಡೆಸಿದಾಗ ಹಂಚಿನ ಶಾಲಾ ಕೊಠಡಿಗಳ ಮೇಲ್ಛಾವಣಿಯು ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಮರದ ರಿಪ್ ಗಳಿಗೆ ಗೆದ್ದಲು ಹಿಡಿದೆ. ಇದರಿಂದ ಕೊಠಡಿಯಲ್ಲಿ ಸಣ್ಣ ಪ್ರಮಾಣದ ಸೋರಿಕೆ ಮತ್ತು ಕಾರಿಡಾರ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಸೋರಿಯಾಗಿದೆ. ಈ ಘಟನೆ ಕುರಿತು ಟಿವಿ9 ರಿಯಾಲಿಟಿ ಚೆಕ್ ಮಾಡಿದ ಸಂದರ್ಭದಲ್ಲಿ ಶಾಲೆಯ ಸಮಸ್ಯೆಗಳು ಹೊರಬಿದ್ದಿವೆ.
ಟಿವಿ9 ವರದಿ ವಿಷಯ ತಿಳಿಯುತ್ತಿದ್ದಂತೆ ಹೊಸನಗರ ಬಿಇಓ ಕೃಷ್ಣಮೂರ್ತಿ ಮತ್ತು ಹೊಸನಗರ ತಾಲೂಕಿನ ಕಾರ್ಯನಿರ್ವಹಣಾ ಅಧಿಕಾರಿ ನರೇಂದ್ರ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೂ ಕೊಡೆ ಹಿಡಿದು ಕುಳಿತಿದ್ದ ಕೊಠಡಿಗೂ ಅಧಿಕಾರಿಗಳು ಭೇಟಿ ನೀಡಿದರು. ಈಗಾಗಲೇ ಪೋಷಕರು ಕೊಠಡಿ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಹಿನ್ನಲೆಯಲ್ಲಿ ತಾ.ಪಂ. ಇಓ ನರೇಂದ್ರ ಕುಮಾರ್ ಕೂಡಲೇ ಸೋರುತ್ತಿರುವ ಮತ್ತು ಮೇಲ್ಚಾವಣಿ ಸಮಸ್ಯೆ ಇರುವ ಮೂರು ಕೊಠಡಿಗಳ ಮಕ್ಕಳನ್ನು ಆರ್ಸಿಸಿ ಹೊಂದಿರುವ ಮೂರು ಹೊಸ ಕೊಠಡಿಗೆ ಶಿಫ್ಟ್ ಮಾಡಲು ಬಿಇಓ ಮತ್ತು ಕೋಡೂರು ಶಾಲೆಯ ಮುಖ್ಯೋಪಾದ್ಯಯೆ ಚೇತನಾ ಅವರಿಗೆ ಸೂಚನೆ ಕೊಟ್ಟಿದ್ದಾರೆ.
ಇನ್ನೂ ಮಳೆಗಾಲ ಮುಗಿಯುವ ವರೆಗೆ ವಿದ್ಯಾರ್ಥಿಗಳಿಗೆ ಹೆಂಚಿನ ಅಪಾಯ ಇರುವ ಕೊಠಡಿಯಿಂದ ಮುಕ್ತಿ ಕೊಟ್ಟಿದ್ದಾರೆ. ಮೇಲ್ಚಾವಣೆ ದುರಸ್ತಿಗೆ ಈಗಾಗಲೇ ಜಿ.ಪಂ ಗೆ ಐದು ಲಕ್ಷ ಅನುದಾನ ಕೇಳಿದ್ದಾರೆ. ಮಳೆ ನಿಂತ ಬಳಿಕ ಕೋಡೂರು ಮೇಲ್ಚಾವಣೆ ದುರಿಸ್ತಿ ಮಾಡುವುದಾಗಿ ಇಓ ಮತ್ತು ಬಿಇಓ ಟಿವಿ9 ಮೂಲಕ ಮಕ್ಕಳು ಮತ್ತು ಪೊಷಕರಿಗೆ ಭರವಸೆ ಕೊಟ್ಟಿದ್ದಾರೆ. ಇನ್ನೂ ಮಕ್ಕಳು ಮತ್ತು ಪೋಷಕರು ಆತಂಕ ಪಡುವ ಅಗತ್ಯವಿಲ್ಲವೆಂದು ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ.
ಶಿವಮೊಗ್ಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ