ಬಿಎಸ್​ವೈರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ: ಸಚಿವ ಕೆ.ಎಸ್.ಈಶ್ವರಪ್ಪ

| Updated By: preethi shettigar

Updated on: Mar 05, 2022 | 3:15 PM

ಬಜೆಟ್​ ಕುರಿತು ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಬಜೆಟ್ ಬೊಂಬಾಟ್​ ಅಗಿತ್ತು. ಸರ್ವ ವ್ಯಾಪ್ತಿ, ಸರ್ವ ಸ್ಪರ್ಶಿ ಬಜೆಟ್ ಸಿಎಂ ಬಸವರಾಜ್​ ಬೊಮ್ಮಾಯಿ ಅವರದ್ದು. ವಿರೋಧ ಪಕ್ಷದವರಿಗೂ ಟೀಕೆ ಅವಕಾಶ ನೀಡದ ಬಜೆಟ್ ಮಂಡನೆ ಬೊಮ್ಮಾಯಿ ಮಾಡಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಬಿಎಸ್​ವೈರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ: ಸಚಿವ ಕೆ.ಎಸ್.ಈಶ್ವರಪ್ಪ
ಸಚಿವ ಕೆಎಸ್​ ಈಶ್ವರಪ್ಪ
Follow us on

ಶಿವಮೊಗ್ಗ: ಶಿಕಾರಿಪುರದ ಬೆಂಕಿಯ ಚೆಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಈ ಮೂಲಕ ಬಿಜೆಪಿ ಸಂಘಟನೆ ರಾಜ್ಯದಲ್ಲಿ ಆಯ್ತು. ಬಿ.ಎಸ್​. ಯಡಿಯೂರಪ್ಪ(B.S. Yediyurappa) ಸಂಘಟನೆ ಶಕ್ತಿಯಿಂದ 2023ರಲ್ಲಿ 150 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿ ಪೂರ್ಣ ಬಹುಮತ ಬಿಎಸ್​ವೈ ಅವರ ಕನಸು ನನಸು ನಾವು ಮಾಡುತ್ತೇವೆ ಎಂದು ಬಿಎಸ್​ವೈ ಅವರನ್ನು ಸಚಿವ ಕೆ.ಎಸ್.ಈಶ್ವರಪ್ಪ( KS Eshwarappa) ಹಾಡಿ ಹೊಗಳಿದ್ದಾರೆ. ಬಳಿಕ ಬಜೆಟ್(​Budget) ಕುರಿತು ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಬಜೆಟ್ ಬೊಂಬಾಟ್​ ಅಗಿತ್ತು. ಸರ್ವ ವ್ಯಾಪ್ತಿ, ಸರ್ವ ಸ್ಪರ್ಶಿ ಬಜೆಟ್ ಸಿಎಂ ಬಸವರಾಜ್​ ಬೊಮ್ಮಾಯಿ ಅವರದ್ದು. ವಿರೋಧ ಪಕ್ಷದವರಿಗೂ ಟೀಕೆ ಅವಕಾಶ ನೀಡದ ಬಜೆಟ್ ಮಂಡನೆ ಬೊಮ್ಮಾಯಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಧಿಕಾರಕ್ಕೆ ಬರುವ ಹಗಲು ಕನಸು ಕಾಂಗ್ರೆಸ್ ಕಾಣುತ್ತಿದೆ: ಬಿ.ಎಸ್​.ಯಡಿಯೂರಪ್ಪ

ಜೀವನದಲ್ಲಿ ನನಗೆ ತೃಪ್ತಿ ಇಂದು ಆಗಿದೆ. ಶಿಕಾರಿಪುರದ ಜನರ ಋಣವನ್ನು ತೀರಿಸಲು ಸಾಧ್ಯವಿಲ್ಲ. ಶಿಕಾರಿಪುರ ತಾಲೂಕಿನ ಏತ ನೀರಾವರಿ ಯೋಜನೆ ಪೂರ್ಣಗೊಂಡಿದೆ. ರೈತರಿಗೆ ಇನ್ನೂ ನೀರಿನ ಬರ ನೀಗಿಸಿರುವೆ. ರಾಜ್ಯದೆಲ್ಲೆಡೆ ನಾನು ಪ್ರವಾಸ ಮಾಡುತ್ತೇನೆ. ಅಧಿಕಾರಕ್ಕೆ ಬರುವ ಹಗಲು ಕನಸು ಕಾಂಗ್ರೆಸ್ ಕಾಣುತ್ತಿದೆ. ಸಾಮೂಹಿಕ ನಾಯಕತ್ವದಲ್ಲಿ ರಾಜ್ಯದ ಪ್ರವಾಸ ಮಾಡಲಿದ್ದೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ  ಅಧಿಕಾರಕ್ಕೆ ತರುತ್ತೇವೆ. ಇನ್ನೂ ಬೊಮ್ಮಾಯಿ ಅತ್ಯುತ್ತಮ ಬಜೆಟ್ ಕೊಟ್ಟಿದ್ದಾರೆ. ಶಿಕಾರಿಪುರ ಮಾದರಿ ತಾಲೂಕು ಮಾಡುವ ಗುರಿ ಇದೆ ಎಂದು ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

ನನಗೆ ಯಡಿಯೂರಪ್ಪ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ: ಸಿಎಂ ಬೊಮ್ಮಾಯಿ

ನನಗೆ ಯಡಿಯೂರಪ್ಪ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ. ರಾಜಕೀಯದಲ್ಲಿ ಯಡಿಯೂರಪ್ಪನವರು ನನ್ನನ್ನು ಬೆಳೆಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ದೂರದೃಷ್ಟಿಯಿರುವಂತಹ ನಾಯಕ. ಬಡವರ ಬಗ್ಗೆ ಅಪಾರ ಕಳಕಳಿ ಇರುವಂತಹ ವ್ಯಕ್ತಿ ಬಿಎಸ್​ವೈ. ಶಿಕಾರಿಪುರದಲ್ಲಿ ಸೂರ್ಯನಿಗೆ ದೀಪ ಹಿಡಿದಂಗೆ. ರಾಜ್ಯದ ಮೂಲೆಮೂಲೆಯಲ್ಲೂ ಬಿಎಸ್​ವೈ ಸೇವೆ ಸಲ್ಲಿಸಿದ್ದಾರೆ. ರಾಜಕೀಯವಾಗಿ ಬೆಳೆಯಲು, ಸಿಎಂ ಆಗಲು ಬಿಎಸ್​ವೈ ಕಾರಣ. ಸಿಎಂ ಸ್ಥಾನ ಬಿಟ್ಟಾಗ ಬಿಎಸ್​ವೈಗೆ ಎಲ್ಲಿಯೂ ಕಹಿ ಇರಲಿಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧನಾಗಿರುವೆ ಎಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಬೆಂಕಿಯಲ್ಲಿ ಅರಳಿದ ನಾಯಕ ಬಿಎಸ್​ವೈ: ಬಿ.ವೈ.ವಿಜಯೇಂದ್ರ

ಬೆಂಕಿಯಲ್ಲಿ ಅರಳಿದ ನಾಯಕ ಬಿಎಸ್​ವೈ ಆಗಿದ್ದಾರೆ. ಪರಿಶ್ರಮ, ಬೆವರು ಸುರಿಸಿ ಬಿಎಸ್​ವೈ ರೈತರ ಪರ ಹೋರಾಟ ಮಾಡಿದ್ದಾರೆ. ಬೊಮ್ಮಾಯಿ ಅತ್ಯುತ್ತಮ ಬಜೆಟ್ ನೀಡಿದ್ದಾರೆ. ನೀರಾವರಿಗೆ ಬೊಮ್ಮಾಯಿ ಹೆಚ್ಚು ಒತ್ತು ನೀಡಿದ್ದಾರೆ ಎಂದು ಶಿಕಾರಿಪುರದ ಪಟ್ಟಣದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ:
ಬಿಎಸ್​ವೈ ಕಣ್ಣೀರಿಗಿಂತ ಖರ್ಗೆ, ಪರಮೇಶ್ವರ್ ಕಣ್ಣೀರು ಹೆಚ್ಚಿದೆ; ಡಿಕೆ ಶಿವಕುಮಾರ್​ಗೆ ನಳಿನ್ ಕುಮಾರ್ ತಿರುಗೇಟು

Shivaratri: ಈಶ್ವರನ ಹತ್ತೊಂಬತ್ತು ಅವತಾರಗಳು -ಇದು ಲೋಕ ಕಲ್ಯಾಣಕ್ಕಾಗಿ ಪರಮೇಶ್ವರನ ಅವತಾರಗಳು, ಅವು ಯಾವುವು?

 

Published On - 2:35 pm, Sat, 5 March 22