ಹರ್ಷ ಹತ್ಯೆಗೆ ಅಂತರಾಷ್ಟ್ರೀಯ ಪಿತೂರಿ, ಪ್ರಕರಣ ಎನ್ಐಎಗೆ ಕೊಡಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಹರ್ಷ ಹತ್ಯೆಗೆ ಅಂತರಾಷ್ಟ್ರೀಯ ಪಿತೂರಿ, ಪ್ರಕರಣ ಎನ್ಐಎಗೆ ಕೊಡಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಹರ್ಷನ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಹತ್ಯೆಯಾದ ಹರ್ಷನ ಕುಟುಂಬ ಸದಸ್ಯರಿಗೆ ಶೋಭಾ ಸಾಂತ್ವನ ಹೇಳಿದ್ದಾರೆ. ಜತೆಗೆ ವೈಯಕ್ತಿಕವಾಗಿ ಒಂದು ಲಕ್ಷ ಆರ್ಥಿಕ ನೆರವು ನೀಡಿದ್ದಾರೆ.

TV9kannada Web Team

| Edited By: preethi shettigar

Mar 05, 2022 | 5:34 PM

ಶಿವಮೊಗ್ಗ: ಹತ್ಯೆಯಾದ ಹರ್ಷ ಹಿಂದೂ ಯುವಕರಿಗೆ ಪ್ರೇರಣೆಯಾಗಿದ್ದ. ಇದು ಕೇವಲ ಹರ್ಷ ಕೊಲೆಗೆ ಸೀಮಿತ ಆಗಿಲ್ಲ. ಈ ಕೊಲೆ(Murder) ಹಿಂದೆ ಅಂತಾರಾಷ್ಟ್ರೀಯಮಟ್ಟದ ಪಿತೂರಿ ಇದೆ. ಇದರ ಹಿಂದೆ ಪಿಎಫ್​​ಐ(PFI) ಸಂಘಟನೆಗಳ ಕೈವಾಡವೂ ಇದೆ. ನಾನು ಆರಂಭದಲ್ಲೇ ಸರಕಾರಕ್ಕೆ  ಆಗ್ರಹ ಮಾಡಿದ್ದೆ. ಹರ್ಷ ಕೊಲೆ ಪ್ರಕರಣದ ತನಿಖೆ ಎನ್ಐಎಗೆ ವಹಿಸಬೇಕು ಎಂದು ಶಿವಮೊಗ್ಗದಲ್ಲಿ ಮೃತ ಬಜರಂಗದಳದ ಕಾರ್ಯಕರ್ತ ಹರ್ಷನ ಮನೆಗೆ ಭೇಟಿ ನೀಡಿದ ಬಳಿಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಹೇಳಿಕೆ ನೀಡಿದ್ದಾರೆ.

ಹರ್ಷನ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಹತ್ಯೆಯಾದ ಹರ್ಷನ ಕುಟುಂಬ ಸದಸ್ಯರಿಗೆ ಶೋಭಾ ಸಾಂತ್ವನ ಹೇಳಿದ್ದಾರೆ. ಜತೆಗೆ ವೈಯಕ್ತಿಕವಾಗಿ ಒಂದು ಲಕ್ಷ ಆರ್ಥಿಕ ನೆರವು ನೀಡಿದ್ದಾರೆ.

ಹರ್ಷನ ಹತ್ಯೆ ಪ್ರಕರಣ ನಂತರ ಶಿವಮೊಗ್ಗ ಜಿಲ್ಲೆ ಶಾಂತವಾಗಿದೆ: ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಹರ್ಷನ ಹತ್ಯೆ ಪ್ರಕರಣ ನಂತರ ಶಿವಮೊಗ್ಗ ಜಿಲ್ಲೆ ಶಾಂತವಾಗಿದೆ. ಬಜರಂಗದಳ ಕಾರ್ಯಕರ್ತನ ಕೊಲೆ ವ್ಯರ್ಥವಾಗಲು ಬಿಡಲ್ಲ. ಕೊಲೆ ಮಾಡುವ ಮನಸ್ಥಿತಿ ಇರುವ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಹರ್ಷನ ಕೊಲೆ ಕೇಸ್​​ನ ತನಿಖೆ ಸರಿಯಾಗಿ ನಡೆಯುತ್ತಿದೆ. ಎನ್ಐಎ ತನಿಖೆ ಸದ್ಯ ಅಗತ್ಯವಿಲ್ಲ. ಪೊಲೀಸರ​ ತನಿಖೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಮೊನ್ನೆ ರಾತ್ರಿ ಬಿಜೆಪಿ ಕಾರ್ಯಕರ್ತರ ಸಹೋದರ ವೆಂಕಟೇಶ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣದಲ್ಲಿ ಇಬ್ಬರ  ಆರೋಪಿಗಳ ಬಂಧನ ಆಗಿದೆ. ಹೊಸನಗರ ಪಿಎಸ್ಐ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇಲಾಧಿಕಾರಿಗಳಿಂದ ವರದಿ ಕೇಳಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹರ್ಷ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ, ಸಂಚಿನ ತನಿಖೆ ನಡೆಯುತ್ತಿದೆ: ಈಶ್ವರಪ್ಪ

ಬಜರಂಗದಳ ಕಾರ್ಯಕರ್ತ ಹರ್ಷನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಮಠಾಧೀಶರು

Follow us on

Related Stories

Most Read Stories

Click on your DTH Provider to Add TV9 Kannada