AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಫ್ಐಆರ್ ದಾಖಲಿಸಿದ ಬಗ್ಗೆ ನ್ಯಾಯಾಲಯದಲ್ಲಿ ಉತ್ತರ ನೀಡುತ್ತೇನೆ ಎಂದ ಚಕ್ರವರ್ತಿ ಸೂಲಿಬೆಲೆ

ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷೆ ವಿರುದ್ಧ ಫೇಸ್​ಬುಕ್​ನಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್​​ ಮಾಡಿದ ಆರೋಪದಡಿ ಪ್ರಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸೋಮವಾರ ಶಿವಮೊಗ್ಗದ ವಿನೋಬನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಚಕ್ರವರ್ತಿ ಸೂಲಿಬೆಲೆ, ಈ ಬಗ್ಗೆ ನ್ಯಾಯಾಲಯದಲ್ಲಿ ಉತ್ತರ ನೀಡುತ್ತೇನೆ ಎಂದಿದ್ದಾರೆ.

ಎಫ್ಐಆರ್ ದಾಖಲಿಸಿದ ಬಗ್ಗೆ ನ್ಯಾಯಾಲಯದಲ್ಲಿ ಉತ್ತರ ನೀಡುತ್ತೇನೆ ಎಂದ ಚಕ್ರವರ್ತಿ ಸೂಲಿಬೆಲೆ
ಪ್ರಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ
Basavaraj Yaraganavi
| Edited By: |

Updated on:Aug 28, 2023 | 9:58 PM

Share

ಶಿವಮೊಗ್ಗ, ಆಗಸ್ಟ್ 28: ನನ್ನ ಫೇಸ್​ಬುಕ್ ಅಕೌಂಟ್​ನಿಂದ ಸಂದೇಶ ಹೋಗಿದೆ ಎಂದು ಎಫ್ಐಆರ್ ಹಾಕಿದ್ದಾರೆ. ನನ್ನ ಸೋಶಿಯಲ್ ಮೀಡಿಯಾ ಅಕೌಂಟ್​ ಅನ್ನು ನಮ್ಮ ಹುಡುಗರು ನೋಡಿಕೊಳ್ಳುತ್ತಾರೆ. ಈ ವಿಷಯದ ಬಗ್ಗೆ ನ್ಯಾಯಾಲಯದಲ್ಲಿ ಉತ್ತರ ನೀಡುತ್ತೇನೆ. ಇಂತಹ ಸಣ್ಣ ವಿಷಯಗಳಿಗೂ ಪೊಲೀಸರು ಹೇಗೆ ಎಫ್​ಐಆರ್​ ದಾಖಲಿಸಿದರು ಎಂಬುದನ್ನು ನ್ಯಾಯಾಲಯದಲ್ಲೇ ಪ್ರಶ್ನಿಸುತ್ತೇನೆ ಎಂದು ಪ್ರಖ್ಯಾತ ವಾಗ್ಮಿ  ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಅನೇಕ ಸಂಗತಿಗಳು ಈ ಹಿಂದೆ ಕೂಡ ನಡೆದಿದ್ದು, ಆದರೆ ಆಗ ಎಫ್ಐಆರ್ ದಾಖಲಾಗಿರಲಿಲ್ಲ ಎಂದಿದ್ದಾರೆ.

ಈ ಸಂಗತಿಯನ್ನು ಡೆಫಿನೆಟ್ಲಿ ಕೋರ್ಟ್​ನಲ್ಲಿ ಪ್ರಶ್ನೆ ಮಾಡುತ್ತೇನೆ. ಈ ಕಾರ್ಯಕ್ರಮಕ್ಕೆ ಪ್ರತಿಭಟನೆಯ ಸಾಧ್ಯತೆ ಹಿನ್ನೆಲೆ ಪೊಲೀಸರು ಹೆಚ್ಚಿನ ಭದ್ರತೆ ನೀಡಿದ್ದಾರೆ. ಇದಕ್ಕಾಗಿ ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸುತ್ತೇನೆ.

ಇದನ್ನೂ ಓದಿ: ಶಿವಮೊಗ್ಗ: ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್​​; ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್​ಐಆರ್​ ದಾಖಲು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬ್ರಿಗೇಡ್ ಹೆಚ್ಚಿನ ಕೆಲಸ ಮಾಡಲಿದೆ. ಜಿಲ್ಲಾ ಮಟ್ಟದ ಸಭೆಯನ್ನು ಖುದ್ದಾಗಿ ನಾನೇ ನಡೆಸಿದ್ದೇನೆ. ತಾಲೂಕು ಮಟ್ಟದಲ್ಲೂ ಕೂಡ ನಿಮ್ಮ ಬ್ರಿಗೇಡ್​ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಲೋಕಸಭಾ ಚುನಾವಣೆಗೆ 5 ತಿಂಗಳ ಮುನ್ನ ನಮ್ಮ ಕಾರ್ಯ ಶುರು ಆಗಲಿದೆ. ಚುನಾವಣೆಯ ಕೊನೆಯ ಎರಡು ತಿಂಗಳಲ್ಲಿ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ನಮ್ಮ ಬ್ರಿಗೇಡ್ 2.0 ಪ್ರಚಾರ ನಡೆಸಲಿದೆ ಎಂದರು.

ಇದನ್ನೂ ಓದಿ: ಕೆಪಿಸಿಸಿ ಐಟಿ ಸೆಲ್ ಉಪಾಧ್ಯಕ್ಷೆ ಸೌಗಂಧಿಕಾ ಕುರಿತು ಚಕ್ರವರ್ತಿ ಸೂಲಿಬೆಲೆ ಅವಹೇಳಕಾರಿ ಪೋಸ್ಟ್, ಚಿಂತಕನ ವಿರುದ್ಧ ಎಫ್​​ಐಅರ್!

ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕಡಿಮೆಯಾಗಿಲ್ಲ. ಮೋದಿಯವರ ಕಾರ್ಯ ಸಾಧನೆಗಳನ್ನು ಜನತೆಯ ಮುಂದಿಡುತ್ತೇವೆ. ಜನರಿಗೆ ಪ್ರಧಾನಿ ಮೋದಿ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಹಾಗೂ ದೇಶಕ್ಕೆ ಬರುವ ಆತಂಕದ ವಿಷಯಗಳ ಬಗ್ಗೆ ಮಾಹಿತಿ ನೀಡಲು ಈ ಉಪನ್ಯಾಸ ಕಾರ್ಯಕ್ರಮ ಮಾಡಲಾಗಿತ್ತಿದೆ. ದೇಶದ ಹಿತದೃಷ್ಟಿಯಿಂದ ಇಂತಹ ಉಪನ್ಯಾಸ ಕಾರ್ಯಕ್ರಮಗಳು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:56 pm, Mon, 28 August 23

Follow Us
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ