ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ನ ಶಬ್ನಮ್ ಆಯ್ಕೆಯಾಗಿದ್ದ, ಉಪಾಧ್ಯಕ್ಷರಾಗಿ ಜೈಪ್ರಕಾಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷ 9, ಬಿಜೆಪಿ 6 ಸದಸ್ಯರ ಬಲ ಹೊಂದಿದೆ. ಅಧ್ಯಕ್ಷರ ಆಯ್ಕೆಯ ನಂತರ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ನಡೆಯಿತು.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ 27 ವರ್ಷಗಳ ನಂತರ ಬಹುಮತ ಗಳಿಸಿತ್ತು. ಸಚಿವ ಕೆ.ಎಸ್.ಈಶ್ವರಪ್ಪ, ಇಂದಿನ ಶಾಸಕ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ವಿಜಯೇಂದ್ರ ಸಹ ಪಟ್ಟಣ ಪಂಚಾಯಿತಿ ಚುನಾವಣೆ ಸಂದರ್ಭ ಸಕ್ರಿಯರಾಗಿ ಪ್ರಚಾರ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ ಮತ್ತು ಆರ್.ಎಂ.ಮಜುನಾಥ ಗೌಡ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುರುಕಿನ ಪ್ರಚಾರ ನಡೆಸಿದ್ದರು. ಒಟ್ಟು 15 ಸ್ಥಾನಗಳ ಪೈಕಿಗೆ ಬಿಜೆಪಿಗೆ 6, ಕಾಂಗ್ರೆಸ್ಗೆ 9 ಸ್ಥಾನಗಳು ಒಲಿದಿದ್ದವು.
ಇದನ್ನೂ ಓದಿ: Araga Jnanendra: ಅಡಿಕೆ ಬೆಳೆಗಾರರ ದನಿ ತೀರ್ಥಹಳ್ಳಿಯ ಆರಗ ಜ್ಞಾನೇಂದ್ರಗೆ ಸಿಕ್ತು ಪ್ರಮುಖ ಗೃಹ ಖಾತೆ
ಇದನ್ನೂ ಓದಿ: ತೀರ್ಥಹಳ್ಳಿ: ಸ್ಥಳೀಯರ ವಿರೋಧದ ನಡುವೆಯೂ ಕಲ್ಲು ಗಣಿಗಾರಿಗೆ; ಗುಡ್ಡ ಕುಸಿತ, ಅನಾಹುತದ ಮುನ್ಸೂಚನೆ