ಆನೆ ದಾಳಿಗೆ ತುತ್ತಾಗಿರುವ ಡಾ.ವಿನಯ, ಜೀರೋ ಟ್ರಾಫಿಕ್​ನಲ್ಲಿ ಬೆಂಗಳೂರಿಗೆ ಶಿಫ್ಟ್; ವೈದ್ಯರ ಸ್ಥಿತಿ ಗಂಭೀರ

|

Updated on: Apr 14, 2023 | 1:11 PM

ಶಿವಮೊಗ್ಗ ಸಕ್ರೆಬೈಲು ಆನೆ ಬಿಡಾರ ಅಂದ್ರೆ ಪ್ರವಾಸಿಗರಿಗೆ ಅಚ್ಚು ಮೆಚ್ಚು. ಈ ಆನೆಗಳ ಆರೋಗ್ಯ ಮತ್ತು ಕಾಡಾನೆಗಳ ಆಪರೇಶನ್​ಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಡಾ. ವಿನಯ್​. ಇದೇ ಆನೆಯ ದಾಳಿಗೆ ತುತ್ತಾಗಿ ಸದ್ಯ ಅವರ ಸ್ಥಿತಿ ಗಂಭೀರವಾಗಿದೆ. ಡಾ. ವಿನಯಗೆ ಶಿವಮೊಗ್ಗ ದಿಂದ ಬೆಂಗಳೂರು ವರೆಗೆ ಜೀರೋ ಟ್ರಾಫಿಕ್ ಮೂಲಕ ಶಿಪ್ಟ್​ ಮಾಡಲಾಗಿದೆ.

ಆನೆ ದಾಳಿಗೆ ತುತ್ತಾಗಿರುವ ಡಾ.ವಿನಯ, ಜೀರೋ ಟ್ರಾಫಿಕ್​ನಲ್ಲಿ ಬೆಂಗಳೂರಿಗೆ ಶಿಫ್ಟ್; ವೈದ್ಯರ ಸ್ಥಿತಿ ಗಂಭೀರ
ಸಾವು ಬದುಕಿನ ನಡುವೆ ಹೋರಾಡುತ್ತಿರುವ ವೈದ್ಯ ವಿನಯ
Follow us on

ಶಿವಮೊಗ್ಗ: ಕಳೆದ ಮೂರು ದಿನಗಳ ಹಿಂದೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಕಾಡಾನೆ ಸೆರೆಯ ಆಪರೇಶನ್ ವೇಳೆ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಪಶು ವೈದ್ಯ ಡಾ. ವಿನಯ ಅವರ ಮೇಲೆ ಆನೆ ದಾಳಿ ಮಾಡಿತ್ತು. ಈ ದಾಳಿಯಲ್ಲಿ ವೈದ್ಯರ ಬೆನ್ನು ಮೂಳೆಗೆ ಬಲವಾಗಿ ಪೆಟ್ಟು ಬಿದ್ದಿತ್ತು. ಬಳಿಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಪಶವೈದ್ಯ ಡಾ. ವಿನಯ ಸ್ಥಿತಿ ಗಂಭೀರವಾದ ಹಿನ್ನೆಯಲ್ಲಿ ಶಿವಮೊಗ್ಗ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತವು ವೈದ್ಯ ವಿನಯ ಅವರನ್ನು ಬೆಂಗಳೂರಿನ ಮಣಿಪಾಲ್​​ಗೆ ಶೀಫ್ಟ್ ಮಾಡಲು ಮುಂದಾಗಿದ್ದರು.

ಅದರಂತೆ ರಾತ್ರಿಯೇ ಮಣಿಪಾಲ್​ ವೈದ್ಯರ ಮತ್ತು ಮೆಡಿಕಲ್ ಟೀಮ್​ನ್ನು ಶಿವಮೊಗ್ಗ ವೈದ್ಯರು ದಾಖಲಾದ ಖಾಸಗಿ ಆಸ್ಪತ್ರೆಗೆ ಕರೆಯಿಸಿ. ಬಳಿಕ ವೈದ್ಯರನ್ನು ಬೆಂಗಳೂರಿಗೆ ಅಂಬ್ಯುಲೇನ್ಸ್​ ಮೂಲಕ ಕರೆದಕೊಂಡು ಹೋಗಲು ವ್ಯವಸ್ಥೆ ಮಾಡಿಕೊಂಡಿತ್ತು. ಈ ವೇಳೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು ಡಾ. ವಿನಯ ಅವರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದು, ವೈದ್ಯರನ್ನು ಶಿವಮೊಗ್ಗದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವಿಶೇಷ ಆ್ಯಂಬುಲೆನ್ಸ್​ನ ಜೊತೆಗೆ ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ರೆಸ್ಕ್ಯೂ ಟೀಂ ಅವರನ್ನ ಬೆಳಗ್ಗೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಿಂದ ಕರೆದೊಯ್ದಿದ್ದು, ಅಂದುಕೊಂಡಂತೆ ಆದರೆ 5-6 ಗಂಟೆಯ ಅವಧಿಯೊಳಗೆ ಡಾ.ವಿನಯ್​ರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ:ಯುವತಿ ಕೊಂದ ಕಾಡಾನೆ ಸೆರೆಗೆ ಕಾರ್ಯಚರಣೆ ವೇಳೆ ಬಿಡಾರದ ವೈದ್ಯನ ಮೇಲೆ ಆನೆ ದಾಳಿ

ಎಕ್ಮೋ ಸಪೋರ್ಟ್​ನೊಂದಿಗೆ ಶಿಫ್ಟ್

ನಿನ್ನೆ ರಾತ್ರಿಯೇ ಡಾ.ವಿನಯ್​ರನ್ನು ಬೆಂಗಳೂರಿಗೆ ಶಿಫ್ಟ್ ಮಾಡಬೇಕಿತ್ತು. ಆದರೆ ಅವರಿಗೆ ಎಕ್ಮೋ ಸಪೋರ್ಟ್ ನೀಡಬೇಕಿತ್ತು (ECMO) ಸಪೋರ್ಟ್​ ನೀಡಲೆಂದು ನಿನ್ನೆ(ಏ.12) ರಾತ್ರಿ ಹತ್ತು ಗಂಟೆ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಹತ್ತು ಜನರ ತಂಡ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಬಂದಿಳಿದಿತ್ತು. ಹಾರ್ಟ್ ಹಾಗೂ ಲಂಗ್ಸ್​ನ ಸಪೋರ್ಟ್​ಗಾಗಿ ಈ ಎಕ್ಮೋ ಸಪೋರ್ಟ್ ನೀಡಲಾಗುತ್ತದೆ. ಇದರಿಂದ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ ಎಂದು ಡಾ.ವಿನಯ್​ರ ಸ್ನೇಹಿತ ಡಾ.ಗೌತಮ್​ ತಿಳಿಸಿದ್ದಾರೆ.

ಇನ್ನೂ ಎಕ್ಮೋ ಸಪೋರ್ಟ್​ನ್ನ ಅಳವಡಿಸಿದ ಬಳಿಕ ನಾಲ್ಕು ಗಂಟೆಗಳ ಕಾಲ ಅಬ್ಸರ್​ವೇಷನ್​ ಮಾಡಲಾಯ್ತು. ಆ ನಂತರ ಡಾ.ವಿನಯ್​ರ ಶಿಫ್ಟಿಂಗ್​ಗೆ ಸಿದ್ಧತೆ ಮಾಡಿಕೊಳ್ಳಲಾಯ್ತು. ಎರಡು ವಿಶೇಷ ಆ್ಯಂಬುಲೆನ್ಸ್​ನಗಳು ಆಗಮಿಸಿದ್ದು, ಈ ಪೈಕಿ ಒಂದರಲ್ಲಿ ಡಾ.ವಿನಯ್​ರನ್ನು ಕರದೊಯ್ಯಲಾಗಿದೆ. ಕಳೆದ 10 ವರ್ಷಗಳಿಂದ ಡಾ. ವಿನಯ ಸಕ್ರೆಬೈಲಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಶಿವಮೊಗ್ಗ,,. ದಾವಣಗೆರೆ.. ಉತ್ತರ ಕನ್ನಡ, ಬೆಳಗಾವಿ, ಹಾಸನ ಮುಂತಾದ ಜಿಲ್ಲೆಯಲ್ಲಿ ಡಾ. ವಿನಯ ನೇತೃತ್ವದಲ್ಲಿ ಕಾಡಾಣೆಗಳ ಸೆರೆ ಹಿಡಿಯುವ ಆಪರೇಶನ್ ಗಳು ನಡೆದಿದ್ದವು.

ಇದನ್ನೂ ಓದಿ:ಆನೇಕಲ್: ಹಸು ಮೇಯಿಸಲು ಹೋಗಿದ್ದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ

ಹತ್ತಾರು ಕಾಡಾನೆ ಸೆರೆ ಹಿಡಿಯುವ ಆಪರೇಶನ್ ನಲ್ಲಿ ಡಾ. ವಿನಯ ಮೂಂಚೂಣಿಯಲ್ಲಿರುತ್ತಿದ್ದರು. ಕಾಡಾನೆಗಳು ಹತ್ತಿರದಿಂದ ಕಂಡು ಬಂದ ತಕ್ಷಣ ಅದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಲಾಗುತ್ತದೆ. ಬಳಿಕ ಅವುಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ. ಇಂತಹ ಅನೇಕ ಕಾಡಾನೆಗಳ ಆಪರೇಶನ್ ಸಕ್ಸಸ್ ಆಗಿದ್ದವು. ಆದ್ರೆ ಮೊನ್ನೆ ಏಕಾಏಕಿ ಮೊದಲು ಕಾಡಾನೆಯು ವಿನಯ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದು ಮಾತ್ರ ನೋವಿನ ಸಂಗತಿಯಾಗಿತ್ತು. ಮಗನ ಈ ಸ್ಥಿತಿಯಲ್ಲಿ ಕಂಡ ತಾಯಿಯು ಕಣ್ಣೀರು ಹಾಕುತ್ತಿದ್ದರು. ಮಗ ಮತ್ತೆ ಜೀವಂತವಾಗಿ ಬದುಕಿ ಬಂದ್ರೆ ಅಷ್ಟೇ ಸಾಕು ಎಂದು ತಮ್ಮ ನೋವು ತೋಡಿಕೊಂಡರು. ಮಲೆನಾಡಿನಲ್ಲಿ ನೂರಾರು ಆನೆಗಳ ಅರೋಗ್ಯ ಕಾಪಾಡಿದ ಪಶು ವೈದ್ಯ ಡಾ.ವಿನಯ ಸ್ಥಿತಿ ಗಂಭೀರವಾಗಿದೆ. ಜೀರೋ ಟ್ರಾಫಿಕ್ ಮೂಲಕ ವೈದ್ಯರು ಸೇಫ್ ಆಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ತಲುಪಿದ್ದಾರೆ. ಮಣಿಪಾಲ್ ನಲ್ಲಿ ಉತ್ತಮ ಚಿಕಿತ್ಸೆ ಸಿಕ್ಕು, ಮತ್ತೆ ಅವರು ಗುಣಮುಖವಾಗಲಿ ಎನ್ನುವುದು ಮಲೆನಾಡಿಗರ ಹಾರೈಕೆಯಾಗಿದೆ..

ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ