ಹೆಂಡತಿ ಊರಿಗೆ ಬಂದ ಗಂಡ ನಿಗೂಢವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ! 8 ವರ್ಷದಿಂದ ಗಂಡ-ಹೆಂಡತಿ ದೂರವಿದ್ದರು
ಎರಡು ಮಕ್ಕಳಾದ ಮೇಲೆ ಸಂಸಾರದಲ್ಲಿ ಮನಸ್ತಾಪಗಳು ಭುಗಿಲೆದ್ದಿದ್ದವು. ಕೆಲ ವರ್ಷಗಳಿಂದ ಪತಿ ಪತ್ನಿ ದೂರವಾಗಿದ್ದರು. ಇಬ್ಬರ ಸಂಬಂಧ ಹಳಿಸಿತ್ತು. ಆದ್ರೆ ಹೆತ್ತ ತಂದೆಗೆ ಮಕ್ಕಳ ಮೇಲೆ ಪ್ರೀತಿ. ತನ್ನ ಮಕ್ಕಳನ್ನು ನೋಡಲು ಅವಾಗವಾಗೇ ಬರುತ್ತಿದ್ದ ತಂದೆ ಸದ್ಯ ಮೃತಪಟ್ಟಿದ್ದಾನೆ.
ತನ್ನ ಊರಿನಿಂದ ಹೆಂಡತಿ ಮಕ್ಕಳನ್ನು ನೋಡಲು (Estranged) ಶಿವಮೊಗ್ಗಕ್ಕೆ ಬಂದ ಪತಿ (Husband)… ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೀಗೆ ವ್ಯಕ್ತಿಯ ಸಾವು ಸದ್ಯ ನೂರೆಂಟು ಅನುಮಾನವನ್ನು ಹುಟ್ಟಿಹಾಕಿದೆ.. ಪತ್ನಿ ಮಕ್ಕಳನ್ನು ನೋಡಲು ಬಂದವನು ಹೆಣವಾಗಿದ್ದು ಯಾಕೆ, ಹೇಗೆ..? ಪತಿಯ ಸಾವಿನ ರಹಸ್ಯ ಏನು? ಇದುವೇ ವಾರೆಂಟ್ ಸ್ಟೋರಿ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಿಲ್ಲಳ್ಳಿ ಗ್ರಾಮದ ಮಲ್ಲಿಕಾ (42) ಎಂಬ ವ್ಯಕ್ತಿಯ ಶವ ಏಪ್ರಿಲ್ 10 ರಂದು ಬೆಳಗ್ಗೆ ಪತ್ತೆಯಾಗಿತ್ತು. ಶಿವಮೊಗ್ಗ (Shivamogga) ತಾಲೂಕಿನ ಪುರಲೆ ಗ್ರಾಮದ ತೋಟದ ಬಳಿ ಇರುವ ನೇರಲೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ (Suicide) ಶವ ಪತ್ತೆಯಾಗಿತ್ತು. ಆದ್ರೆ ಆತ ನೇಣಿಗೆ ಬಳಕೆ ಮಾಡಿದ ಹಗ್ಗ ಸಾಮಾನ್ಯದ್ದಾಗಿತ್ತು. ಇಷ್ಟೊಂದು ತೆಳ್ಳಗೆ ಇರುವ ಹಗ್ಗದಿಂದ ವ್ಯಕ್ತಿಯೊಬ್ಬ ನೇಣು ಹಾಕಿಕೊಳ್ಳುವುದರ ಬಗ್ಗೆ ತುಂಬಾ ಅನುಮಾನ ಕಾಡುತ್ತಿದೆ.
ಸ್ಥಳೀಯರು ಆ ದಿನ ಬೆಳಗ್ಗೆ ಮಲ್ಲಿಕಾನ ಶವ ನೋಡಿದ ಬಳಿಕ ಅವರ ಅನುಮಾನ ಮತ್ತಷ್ಟು ಜಾಸ್ತಿಯಾಗಿದೆ. ನೇಣು ಹಾಕಿಕೊಂಡು ಮೃತಪಟ್ಟಿರುವ ಮಲ್ಲಿಕಾ ಕಾಲು ರಕ್ತಸಿಕ್ತವಾಗಿದೆ. ಹೀಗೆ ತನ್ನ ಹಂಡತಿ ಮತ್ತು ಮಕ್ಕಳನ್ನು ನೋಡಲು ಬಂದ ಮಲ್ಲಿಕಾ ನಿನ್ನೆ ಪೂರ್ಣ ಊರೆಲ್ಲ ಸುತ್ತಾಡಿದ್ದಾನೆ. ಎಣ್ಣೆ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾನೆ. ಆದ್ರೆ ಏಪ್ರಿಲ್ 9 ರಂದು ಸಂಜೆ ಹೊತ್ತಿಗೆ ಪತ್ನಿ ನೋಡಲು ಬಂದ ಪತಿ ಮಲ್ಲಿಕಾ ಮಿಸ್ಸಿಂಗ್ ಆಗಿದ್ದನು. ಆತ ಎಲ್ಲಿ ಹೋದ ಏನಾಯಿತು ಅಂತಾ ಯಾರಿಗೂ ಗೊತ್ತಾಗಲೇ ಇಲ್ಲ. ಈ ನಡುವೆ ನಿನ್ನೆ ಶುಕ್ರವಾರ ಬೆಳಗ್ಗೆ ನೇರಲೆ ಮರದಲ್ಲಿ ಆತನ ಶವ ಸಿಕ್ಕಿರುವುದು ನೂರೆಂಟು ಅನುಮಾನಕ್ಕೆ ಕಾರಣವಾಗಿವೆ. ನೇಣು ಬಿಗಿದ ಸ್ಥಳದಲ್ಲಿ ಮದ್ಯ ಬಾಟಲ್ ಗಳೂ ಪತ್ತೆಯಾಗಿವೆ. ಸ್ಥಳೀಯರು ಸಾವು ನಡೆದ ಸ್ಥಳ ನೋಡಿದಾಗ ಬೆಚ್ಚಿ ಬಿದಿದ್ದಾರೆ. ಇದೊಂದು ಕೊಲೆ ಕೇಸ್ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.
ಮಲ್ಲಿಕಾಗೆ ಮದುವೆಯಾಗಿ 15 ವರ್ಷ ಆಗಿದೆ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ನಡುವೆ ಪತ್ನಿಯ ಜೊತೆ ಗಲಾಟೆ ಮಾಡಿಕೊಂಡ ಪತಿಯು ಕೆಲ ತಿಂಗಳನಿಂದ ಪತ್ನಿಯಿಂದ ದೂರವಿದ್ದನು. ಕಳೆದ 8 ವರ್ಷದಿಂದ ಇಬ್ಬರ ನಡುವೆ ನೆಟ್ಟಿಗೆ ಸಂಸಾರವಾಗಿಲ್ಲ. ಮಲ್ಲಿಕಾಗೆ ಕುಡಿತದ ಚಟ. ಕುಡಿದು ಪದೇ ಪದೇ ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದನು. ಹೀಗೆ ಪತಿಯು ಈ ಎಲ್ಲ ನಡವಳಿಕೆ ನೋಡಿದ ಪತ್ನಿ ನಾಗರತ್ನ ತವರು ಮನೆ ಸೇರಿದ್ದಳು. ಎರಡು ಮತ್ತು ಮೂರು ತಿಂಗಳಗೊಮ್ಮೆ ಮಕ್ಕಳು ನೋಡಲು ಮಲ್ಲಿಕಾ ಬಿರುತ್ತಿದ್ದನು.
ಅದರಂತೆ ನಿನ್ನೆ ಕೂಡಾ ಮಲ್ಲಿಕಾ ಬಂದಿದ್ದಾನೆ. ಕೈಯಲ್ಲಿ ದುಡ್ಡು ಇತ್ತು. ಪರಿಚಯಸ್ಥರ ಜೊತೆ ಸೇರಿ ಮೋಜು ಮಸ್ತಿ ಪಾರ್ಟಿ ಮಾಡಿದ್ದಾರೆ. ಈ ನಡುವೆ ಪುರಲೆಯ ತೋಟದ ಬಳಿ ಮಲ್ಲಿಕಾ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪುರಲೆಯ ಸುತ್ತಮುತ್ತ ಗಾಂಜಾ ದಂಧೆ ಜೋರಾಗಿ ನಡೆಯುತ್ತಿದೆ. ಸ್ಥಳೀಯರು ಈ ಗಾಂಜಾ ದಂಧೆಗೆ ಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಮಲ್ಲಿಕಾ ಮತ್ತು ಆತನ ಜೊತೆಗಿದ್ದವರ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಳಿಕ ಏನಾಯ್ತೋ ಗೊತ್ತಿಲ್ಲ. ಹೀಗಾಗಿ ಮಲ್ಲಿಕಾಗೆ ಯಾರೋ ಹಲ್ಲೆ ಮಾಡಿ, ಕೊಲೆ ಮಾಡಿದ ಬಳಿಕ ನೇಣು ಹಾಕುವ ಮೂಲಕ ಇದೊಂದು ಆತ್ಮಹತ್ಯೆ ಪ್ರಕರಣ ಅಂತಾ ಬಿಂಬಿಸಲು ಯತ್ನಿಸಿದ್ದಾರೆ ಅನ್ನಿಸುತ್ತಿದೆ.
ಈ ಘಟನೆ ನೋಡಿದ ಗ್ರಾಮಾಂತರ ಪೊಲೀಸರು ಗಾಂಜಾ ದಂಧೆ ಈ ಭಾಗದಲ್ಲಿ ಜೋರಾಗಿದೆ. ಗಾಂಜಾ ಅಮಲಿನಲ್ಲಿ ಈ ರೀತಿ ಕೊಲೆ ಆಗಿರುವ ಸಾಧ್ಯತೆಯಿದೆ. ಹೀಗೆ ಪತಿ ಪತ್ನಿ ಇಬ್ಬರು ಅನೇಕ ವರ್ಷಗಳಿಂದ ನೆಟ್ಟಗೆ ಸಂಸಾರ ಮಾಡಿಲ್ಲ. ಇದರ ಲಾಭ ಪಡೆಯಲು ಹೋದ ಪತಿಯು ಸದ್ಯ ಹೆಣವಾಗಿದ್ದಾನೆ. ಹೀಗೆ ಪತ್ನಿ ನೋಡಲು ಬಂದ ವ್ಯಕ್ತಿಯು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮಾತ್ರ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಸಮಸ್ಯೆ ಮತ್ತು ಒತ್ತಡಗಳು ಪತಿಗೆ ಇರಲಿಲ್ಲ. ಈ ನಡುವೆ ಪತ್ನಿ ಮತ್ತು ಮಕ್ಕಳನ್ನು ನೋಡಲು ಹೋಗಿದ್ದವನು ಮೃತಪಟ್ಟಿದ್ದಾನೆ. ಯಾವ ದ್ವೇಷದ ಹಿನ್ನೆಲೆಯಲ್ಲಿ ಈ ವ್ಯಕ್ತಿಯ ಸಾವು ಆಗಿದೆ. ಹೀಗಾಗಿ ಇದೊಂದು ಆತ್ಮಹತ್ಯೆ ಅಲ್ಲ. ಉದ್ದೇಶ ಪೂರ್ವಕವಾಗಿ ಹೊಡೆದು ಬಳಿಕ ಆತನನ್ನು ನೇಣಿಗೆ ಹಾಕಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಪತಿಯು ನೆಟ್ಟಿಗೆ ಸಂಸಾರ ಮಾಡಿದ್ದರೆ ಕುಟುಂಬವು ಸಂತೋಷದಿಂದ ಇರುತ್ತಿತ್ತು. ಆದ್ರೆ ಪತ್ನಿ ನೋಡಲು ಬಂದವನು ನೇರವಾಗಿ ಮನೆಗೆ ಹೋಗಿಲ್ಲ. ಪರಿಚಯಸ್ಥರ ಜೊತೆ ಸೇರಿ ಎಣ್ಣೆ ಹೊಡೆದಿದ್ದಾನೆ. ಇನ್ನೇನು ಸೂರ್ಯ ಮುಳುಗಿದ ಬಳಿಕ ಹೆಂಡತಿ ಮನೆಗೆ ಹೋಗಬೇಕೆಂದ ವ್ಯಕ್ತಿಯು ಸೇರಿದ್ದು ಸಾವಿನ ಮನೆ.. ಈ ಸಾವಿನ ಹಿಂದೆ ನೂರೆಂಟು ಅನುಮಾನ ಹುಟ್ಟಿಕೊಂಡಿವೆ..
ಪಕ್ಕದ ಜಿಲ್ಲೆಯ ದಾವಣಗೆರೆಯಿಂದ ಬಂದು ವ್ಯಕ್ತಿಯು ಹೆಂಡತಿ ಊರಿನಲ್ಲಿ ಮೃಪಟ್ಟಿದ್ದಾನೆ. ಸದ್ಯಕ್ಕೆ ಸಾವಿನ ಹಿನ್ನೆಲೆ ಕುರಿತು ಗ್ರಾಮಾಂತರ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ನೇಣು ಬೀಗಿದ ಸ್ಥಳದಲ್ಲಿ ಮೃತನ ದೇಹದಿಂದ ರಕ್ತ ಸುರಿದಿದ್ದು ಮತ್ತು ಗಾಯಗಳ ಕಲೆಗಳಿವೆ. ಈ ನಡುವೆ ಪತಿ ಬಿಟ್ಟು ಪ್ರತ್ಯೇಕವಾಗಿ ಪತ್ನಿಯು ತವರು ಮನೆಯಲ್ಲಿ ಎರಡು ಮಕ್ಕಳ ಜೊತೆ ವಾಸವಾಗಿದ್ದಳು.
ಈ ಸಂಸಾರದಲ್ಲಿರುವ ಸಮಸ್ಯೆ, ಅಸಮಾಧಾನಗಳೇ ಪತಿಯ ಸಾವಿಗೆ ಕಾರಣವಾಯ್ತಾ ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.. ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರೆ…ಆತ್ಮಹತ್ಯೆಗೆ ಕಾರಣವೇನು….? ಇದಕ್ಕೂ ಸಂಬಂಧಿಕರು ಮತ್ತು ಪತ್ನಿಯ ಬಳಿ ಉತ್ತರವಿಲ್ಲದಂತಾಗಿದೆ. ಹೀಗಾಗಿ ಮಲ್ಲಿಕಾ ಸಾವಿನ ತನಿಖೆಯಾಗಬೇಕಿದೆ. ಈಗಾಗಲೇ ಮರಣೋತ್ತರ ಪರೀಕ್ಷೆ ನಡೆದಿದೆ. ಅದರ ವರದಿ ಮತ್ತು ಪೊಲೀಸ್ ತನಿಖೆಯಿಂದ ಸಾವಿನ ರಹಸ್ಯವು ಹೊರಗೆ ಬರಬೇಕಿದೆ.
ಎರಡು ಮಕ್ಕಳಾದ ಮೇಲೆ ಸಂಸಾರದಲ್ಲಿ ಮನಸ್ತಾಪಗಳು ಭುಗಿಲೆದ್ದಿದ್ದವು. ಕೆಲ ವರ್ಷಗಳಿಂದ ಪತಿ ಪತ್ನಿ ದೂರವಾಗಿದ್ದರು. ಇಬ್ಬರ ಸಂಬಂಧ ಹಳಿಸಿ ಹೋಗಿತ್ತು. ಆದ್ರೆ ಹೆತ್ತ ತಂದೆಗೆ ಮಕ್ಕಳ ಮೇಲೆ ಪ್ರೀತಿ. ತನ್ನ ಮಕ್ಕಳನ್ನು ನೋಡಲು ಅವಾಗವಾಗೇ ಬರುತ್ತಿದ್ದ ತಂದೆ ಸದ್ಯ ಮೃತಪಟ್ಟಿದ್ದಾನೆ.. ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತಿಯು ಶವ ಪತ್ತೆಯಾಗಿದೆ.. ಪತಿಯು ಸಾವು ನಿಗೂಢವಾಗಿದೆ. ಸಮಗ್ರ ತನಿಖೆ ಬಳಿಕಷ್ಟೇ ಈ ಸಾವಿನ ರಹಸ್ಯ ಬಯಲಾಗಲಿದೆ.
ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Sat, 15 April 23