ಕೋತಿ ಮರಿಗೆ 6ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ; ಮಾರುತಿ ಬರ್ತ್​ ಡೇ ಸಡಗರದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಭಾಗಿ

| Updated By: preethi shettigar

Updated on: Dec 06, 2021 | 8:38 AM

ಪಾರ್ವತಮ್ಮ ಅವರಿಗೆ ನಾಲ್ಕು ಮಕ್ಕಳ ಜೊತೆ ಮಾರುತಿ ಕೂಡ ಒಬ್ಬ ಮಗುವಾಗಿದೆ. ಮಾರುತಿ ಕೂಡಾ ಇವರ ಕುಟುಂಬದ ಸದಸ್ಯನಾಗಿಬಿಟ್ಟಿದ್ದಾನೆ. ಪ್ರತಿ ವರ್ಷ ಡಿಸೆಂಬರ್ 5 ರಂದು ಮಾರುತಿ ಜನ್ಮದಿನದ ಸಂಭ್ರಮವನ್ನು ತುಂಬಾ ಅದ್ಧೂರಿಯಾಗಿ ಮಾಡುತ್ತಾರೆ. ಅದರಂತೆ ನಿನ್ನೆ ಆರನೇ ವರ್ಷದ ಮಾರುತಿ ಹುಟ್ಟಿದ ಹಬ್ಬವು ಸಂಭ್ರಮ ಸಡಗರಿಂದ ಕುಟುಂಬದ ಸದಸ್ಯರೆಲ್ಲರೂ ಸೇರಿ ಆಚರಿಸಿದರು.

ಕೋತಿ ಮರಿಗೆ 6ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ; ಮಾರುತಿ ಬರ್ತ್​ ಡೇ ಸಡಗರದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಭಾಗಿ
ಮಾರುತಿ
Follow us on

ಶಿವಮೊಗ್ಗ: ಆರು ವರ್ಷಗಳ ಹಿಂದೆ ಶಿವಮೊಗ್ಗ ನಗರದ ಎನ್ ರಸ್ತೆಯಲ್ಲಿರುವ ಪಾರ್ವತಮ್ಮ ಕುಟುಂಬಕ್ಕೆ ಹೊಸ ಅತಿಥಿಯೊಬ್ಬರ ಆಗಮನವಾಗಿತ್ತು. ಈ ಅತಿಥಿ ಬಂದ ಮೇಲೆ ಮನೆಯಲ್ಲಿ ಸಂಭ್ರಮ, ಸಡಗರ, ಸಂತಸ ಹೆಚ್ಚಾಗಿತ್ತು. ಹೀಗೆ ಕುಟುಂಬದ ಅತಿಥಿಯಾಗಿ ಬಂದವನು ಈಗ ಸದಸ್ಯನಾಗಿದ್ದಾನೆ. ಅಷ್ಟಕ್ಕೂ ಈ ಅತಿಥಿ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಪಾರ್ವತಮ್ಮ ಅವರ ಮನೆಗೆ ಕೋತಿ (Monkey) ಅತಿಥಿಯಾಗಿ ಬಂದಿದ್ದು, ಈಗ ಮನೆಯಲ್ಲಿ ಒಬ್ಬ ಎನ್ನುವಂತೆ ಇಲ್ಲಿಯೇ ವಾಸವಾಗಿದೆ.

ಪಾರ್ವತಮ್ಮ ಅವರ ಪತಿ ಪ್ರಭಾಕರ್ ಕೆಲವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಮನೆಯಲ್ಲಿ ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ. ಒಟ್ಟು ಐವರು ಸದಸ್ಯರಿಂದ ಕೂಡಿದ ಕುಟುಂಬ ಇವರದ್ದು, ಈ ಕುಟುಂಬಕ್ಕೆ ಕಳೆದ ಆರು ವರ್ಷಗಳ ಹಿಂದೆ ಕೋತಿ ಮರಿಯನ್ನು ಯಾರೋ ಸಾಕಲು ಆಗದೇ ಕೊಟ್ಟು ಹೋಗಿದ್ದರು. ನಾಲ್ಕು ತಿಂಗಳ ಪುಟ್ಟ ಕೋತಿ ಮರಿಯನ್ನು ನೋಡಿದ ಪಾರ್ವತಮ್ಮ ಮತ್ತು ಅವರ ಕುಟುಂಬಸ್ಥರು ಸಾಕುವ ನಿರ್ಧಾರ ಮಾಡಿದ್ದರು.

ಸಹಜವಾಗಿ ಕೋತಿ ಅಂದರೆ ಎಲ್ಲರಿಗೂ ಭಯ. ಈ ನಡುವೆ ಕೋತಿ ಮರಿಯನ್ನು ಸಾಕುವುದಕ್ಕೆ ಪಾರ್ವತಮ್ಮ ಕುಟುಂಬಸ್ಥರು ಮುಂದಾಗಿದ್ದರು. ಪುಟ್ಟ ಮಕ್ಕಳನ್ನು ಹೇಗೆಲ್ಲಾ ಆರೈಕೆ ಮಾಡುತ್ತಾರೆ. ಅದೇ ರೀತಿ ಎಲ್ಲ ರೀತಿಯಲ್ಲೂ ಕೋತಿ ಮರಿಯನ್ನು ಕಳೆದ ಆರು ವರ್ಷದಿಂದ ಕುಟುಂಬಸ್ಥರು ಆರೈಕೆ ಮಾಡುತ್ತಿದ್ದಾರೆ. ಪ್ರೀತಿ, ವಾತ್ಸಲ್ಯ, ಮಮಕಾರದಿಂದ ಕೋತಿ ಮರಿಯನ್ನು ತುಂಬಾ ಮುದ್ದಾಗಿ ಸಾಕಿದ್ದಾರೆ. ಈ ಮರಿಗೆ ಮಾರುತಿ ಎಂದು ನಾಮಕರಣ ಮಾಡಿದ್ದಾರೆ.

ಪಾರ್ವತಮ್ಮ ಅವರಿಗೆ ನಾಲ್ಕು ಮಕ್ಕಳ ಜೊತೆ ಮಾರುತಿ ಕೂಡ ಒಬ್ಬ ಮಗುವಾಗಿದೆ. ಮಾರುತಿ ಕೂಡಾ ಇವರ ಕುಟುಂಬದ ಸದಸ್ಯನಾಗಿಬಿಟ್ಟಿದ್ದಾನೆ. ಪ್ರತಿ ವರ್ಷ ಡಿಸೆಂಬರ್ 5 ರಂದು ಮಾರುತಿ ಜನ್ಮದಿನದ ಸಂಭ್ರಮವನ್ನು ತುಂಬಾ ಅದ್ಧೂರಿಯಾಗಿ ಮಾಡುತ್ತಾರೆ. ಅದರಂತೆ ನಿನ್ನೆ ಆರನೇ ವರ್ಷದ ಮಾರುತಿ ಹುಟ್ಟಿದ ಹಬ್ಬವು ಸಂಭ್ರಮ ಸಡಗರಿಂದ ಕುಟುಂಬದ ಸದಸ್ಯರೆಲ್ಲರೂ ಸೇರಿ ಆಚರಿಸಿದರು.

ಮಾರುತಿ ಹುಟ್ಟುಹಬ್ಬಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಚಿಕ್ಕಮಗಳೂರಿನ ಜಿಲ್ಲೆಯ ತಾವರೆಕೆರೆಯ ಶಿಲಾ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಕಿರಿಯ ಶ್ರೀಗಳು ಸೇರಿದಂತೆ ಅಕ್ಕಪಕ್ಕದವರು ಭಾಗವಹಿಸಿದ್ದರು. ಕುಟುಂಬಸ್ಥರ ಕೋತಿ ಪ್ರೀತಿ ಕಂಡು ಸಚಿವರು ಮತ್ತು ಸ್ವಾಮೀಜಿಗಳು ಅಚ್ಚರಿ ಮತ್ತು ಸಂತಸಪಟ್ಟರು.

ನಾಯಿ, ಬೆಕ್ಕುಗಳನ್ನು ಮನೆಗಳಲ್ಲಿ ಸಾಕುವುದು ಸಾಮಾನ್ಯ. ಆದರೆ ಕೋತಿಯನ್ನು ಸಾಕುವುದು ಅಪರೂಪ. ಅದು ದೊಡ್ಡ ನಗರದಲ್ಲಿ ಕೋತಿಯನ್ನು ಮನೆಯಲ್ಲಿಟ್ಟು ಸಾಕುವುದು ಇನ್ನೂ ಕಷ್ಟಕರ ಕೆಲಸ. ಈ ನಡುವೆ ಕೂಡ ಪಾರ್ವತಮ್ಮ ಮತ್ತು ಅವರ ಕುಟುಂಬಸ್ಥರು ಕೋತಿ ಮರಿಯನ್ನು ಸಾಕುತ್ತಿರುವುದು ವಿಶೇಷವಾಗಿದೆ. ಮಾರುತಿಗೆ ನಿತ್ಯ ಸ್ನಾನ, ಕಲರ್ ಫುಲ್ ಬಟ್ಟೆಗಳು, ಮನೆಯವರು ಸಿದ್ಧಪಡಿಸಿದ ತಿಂಡಿ ಊಟವನ್ನು ಮಾಡುತ್ತದೆ. ಅದರಲ್ಲೂ ತರಕಾರಿ ಮತ್ತು ಹಣ್ಣು ಕೋತಿಗೆ ಹೆಚ್ಚು ಪ್ರೀತಿ.

ಇನ್ನೂ ಕುಟುಂಬದ ಸದಸ್ಯರು ಎಲ್ಲೇ ಹೊರಗಡೆ ಹೊರಟರು ಮಾರುತಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಹೊಟೇಲ್​ನಲ್ಲಿ ಮಾರುತಿ ಜ್ಯೂಸ್​ಗಳನ್ನು ಮಾತ್ರ ಸೇವಿಸುತ್ತಾನೆ. ಐಸ್​ ಕ್ರಿಂ ಅಂದರೆ ಮಾರುತಿಗೆ ಇಷ್ಟ. ಹೀಗೆ ಕುಟುಂಬಸ್ಥರು ಕೋತಿ ಮರಿಗೆ ಎಲ್ಲಿಲ್ಲದ ಪ್ರೀತಿ ಅಕ್ಕರೆಯನ್ನು ತೋರಿಸುತ್ತಾರೆ. ಕುಟುಂಬದ ಸದಸ್ಯನಂತೆ ಮಾರುತಿ ಒಡನಾಟ ಇಟ್ಟುಕೊಂಡಿದ್ದಾನೆ. ಕೇವಲ ಕುಟುಂಬಸ್ಥರಿಗೆ ಮಾತ್ರವಲ್ಲದೆ ಅಕ್ಕಪಕ್ಕದ ಮನೆಯನವರಿಗೂ ಮಾರುತಿ ಕಂಡರೆ ಇಷ್ಟ. ಇನ್ನೂ ಕೋತಿಯು ಮನೆಯಲ್ಲಿರುವ ಬೆಕ್ಕಿನ ಜೊತೆ ಆಟವಾಡುತ್ತಿದೆ. ಇತರೆ ಪ್ರಾಣಿಗಳ ಜೊತೆ ಕೂಡಾ ಕೋತಿ ಮರಿಯು ಅನ್ಯೋನ್ಯವಾಗಿರುವುದು ವಿಶೇಷ.

ವರದಿ: ಬಸವರಾಜ್ ಯರಗಣವಿ

ಚಿಕ್ಕಬಳ್ಳಾಪುರ: ಬೀದಿ ನಾಯಿಗೆ ಅದ್ದೂರಿ ಹುಟ್ಟುಹಬ್ಬ ಆಚರಣೆ; ಕೇಕ್ ಕತ್ತರಿಸಿ ಸನ್ಮಾನ ಮಾಡಿದ ಸ್ಥಳೀಯರು

ಆರತಿ ಬೆಳಗಿ ಕೇಕ್ ಕತ್ತರಿಸಿ ಬರ್ತಡೆ ಆಚರಿಸಿದ ನಾಯಿ, ಗಿಫ್ಟ್ ಆಗಿ 50 ಗ್ರಾಂ ಚಿನ್ನದ ಸರ