ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ: ಬಲಭಾಗಕ್ಕೆ ಬಿದ್ದ ಹೂ, 150 ಸ್ಥಾನ ಗೆಲ್ತೇವೆ ಎಂದ ಬಿಎಸ್ ಯಡಿಯೂರಪ್ಪ

| Updated By: ಆಯೇಷಾ ಬಾನು

Updated on: Jan 07, 2023 | 2:07 PM

ಬಿಎಸ್​ ಯಡಿಯೂರಪ್ಪನವರು ಇಂದು ಶಿಕಾರಿಪುರದಲ್ಲಿ‌ ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮ ಹಿನ್ನೆಲೆ ಶಿಕಾರಿಪುರಕ್ಕೆ ಆಗಮಿಸಿದ್ದು ಈ ವೇಳೆ ದೇವರ ದರ್ಶನಕ್ಕೆ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ.

ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ: ಬಲಭಾಗಕ್ಕೆ ಬಿದ್ದ ಹೂ, 150 ಸ್ಥಾನ ಗೆಲ್ತೇವೆ ಎಂದ ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
Follow us on

ಶಿವಮೊಗ್ಗ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ದೇವರಿಗೆ ಪೂಜೆ ಸಲ್ಲಿಸುವ ವೇಳೆ ಬಲಭಾಗಕ್ಕೆ ಹೂವು ಬಿದ್ದಿದೆ. ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿದ್ದ ಯಡಿಯೂರಪ್ಪನವರು ದೇವರಿಗೆ ಕೈ ಮುಗಿದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ವೇಳೆ ದೇವರ ಬಲಭಾಗಕ್ಕೆ ಹೂವು ಬಿದ್ದಿದೆ.

ಬಿಎಸ್​ ಯಡಿಯೂರಪ್ಪನವರು ಇಂದು ಶಿಕಾರಿಪುರದಲ್ಲಿ‌ ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮ ಹಿನ್ನೆಲೆ ಶಿಕಾರಿಪುರಕ್ಕೆ ಆಗಮಿಸಿದ್ದು ಈ ವೇಳೆ ದೇವರ ದರ್ಶನಕ್ಕೆ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಬಿಜೆಪಿ 140ರಿಂದ 150 ಸ್ಥಾನ ಗೆಲ್ಲಲಿದೆ. 140-150 ಸ್ಥಾನ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಆಗಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದರು.

ಇದನ್ನೂ ಓದಿ: ಮುಂಬರುವ ಆಸೆಂಬ್ಲಿ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಸ್​ಡಿಪಿಐ!

ಸಿದ್ದರಾಮಯ್ಯಗೆ ತಾವು ನಿಂತಿರುವ ನೆಲವೇ ಕುಸಿಯುತ್ತಿದೆ

ಯಾರೋ ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಅಂತ ಬಡಿದಾಡುತ್ತಿದ್ದಾರೋ ಕಾಂಗ್ರೆಸ್ ನಲ್ಲಿ ಅದು ಕೇವಲ ತಿರುಕನ ಕನಸಾಗುತ್ತೆ ಹೊರತು ಅದು ಯಾವುದೇ ಕಾರಣಕ್ಕೂ ಸಾಧ್ಯ ಇಲ್ಲ ಅನ್ನೋದು ಅವರಿಗೂ ಸಹ ಮನವರಿಕೆ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರಂತ ನಾಯಕತ್ವ ನಮಗಿರಬೇಕಾದರೇ ಈ ಚುನಾವಣೆಯಲ್ಲಿ ಜಯಭೇರಿ ಪಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಎಲ್ಲಾ ಕಾರ್ಯಕರ್ತರು ಬೂತ್ ಬಲ ಪಡಿಸಿ ಮತದಾರರನ್ನು ಮನವಲಿಸಿ ಮತಗಟ್ಟೆಗೆ ಕರೆದುಕೊಂಡು ಬಂದು ಮತದಾನ ಮಾಡಿಸಬೇಕಿದೆ. ನಾವು ಈ ಬಾರಿ ಜಯಭೇರಿ ಬಾರಿಸಲಿದ್ದೇವೆ ಅನ್ನೋದು ಕಾಂಗ್ರೆಸ್ ನವರಿಗೂ ಸಹ ಮನವರಿಕೆ ಆಗಿದೆ. ಎರಡ್ಮೂರು ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತೆ.

ಎರಡ್ಮೂರು ದಿನದಲ್ಲಿ ಕೇಂದ್ರದಲ್ಲಿ ತೀರ್ಮಾನ ತೆಗೆದುಕೊಳ್ಳುವರಿದ್ದಾರೆ ಯಾರನ್ನು ತೆಗೆದುಕೊಳ್ಳಬೇಕು ಎನ್ನುವುದು ಪ್ರಧಾನಿ, ಕೇಂದ್ರದ ನಾಯಕರಿಗೆ ಬಿಟ್ಟಿದ್ದು. ಸಿದ್ದರಾಮಯ್ಯ ನವರು ತಾವು ನಿಂತಿರುವ ನೆಲವೇ ಕುಸಿಯುತ್ತಿದೆ ಅನ್ನುವ ಅರಿವಿಲ್ಲದೇ ಬಹಳ ಹಗುರವಾಗಿ ಮುಖ್ಯಮಂತ್ರಿಗಳ ಬಗ್ಗೆ ಆರ್​ಎಸ್​ಎಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ತಕ್ಕಪಾಠವನ್ನು ರಾಜ್ಯದ ಜನ ಕಲಿಸುತ್ತಾರೆ ಎಂದು ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ