ಮುಂಬರುವ ಆಸೆಂಬ್ಲಿ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಸ್‌ಡಿಪಿಐ!
ಮುಂಬರುವ ವಿಧಾನಸಭಾ ಚುನಾವಣೆಗೆ ಎಸ್‌ಡಿಪಿಐ ಪಕ್ಷ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಎಸ್‌ಡಿಪಿಐ ಪಕ್ಷ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಬಗ್ಗೆ ಮಾತನಾಡಿದ ಎಸ್ಡಿಪಿಐನ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, 2023ರ ಚುನಾವಣೆಗೆ 10 ಮಂದಿಯ ಪ್ರಥಮ ಹಂತದ ಪಟ್ಟಿಯನ್ನ ಬಿಡುಗಡೆ ಮಾಡಿದ್ದೇವೆ. ಒಟ್ಟು 54 ವಿಧಾನಸಭಾ ಕ್ಷೇತ್ರದಲ್ಲಿ ಇವತ್ತು ಪ್ರಥಮ ಹಂತದಲ್ಲಿ ಕ್ಷೇತ್ರ ಅಂತಿಮಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ನಮ್ಮ ಅಧಿಕಾರವನ್ನು ಮೆರೆಯಲು ರಾಜಕಾರಣ ಮಾಡಲ್ಲ. ನಮ್ಮದು ಜನಪರ ರಾಜಕಾರಣ. ದೇಶದ ಹಿತಾಸಕ್ತಿಯೇ ನಮ್ಮ ರಾಜಕಾರಣ. ನಮ್ಮ ಕರ್ನಾಟಕದಲ್ಲಿ ಇದುವರೆಗೂ 300 ಜನಪ್ರತಿನಿಧಿಗಳು ಯಾವುದೇ ಭ್ರಷ್ಟಾಚಾರವಿಲ್ಲದೇ ಅಧಿಕಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲೂ ಜನಪರ ಸೇವೆಯನ್ನ ನಾವೂ ಮಾಡುತ್ತೇವೆ. ಅದಕ್ಕೆ ನೀವೂ ಅನುಕೂಲ ಮಾಡಬೇಕು ಅಂತಾ 7 ಕೋಟಿ ಜನರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
2023ರ ಚುನಾವಣೆಗೆ ಎಸ್‌ಡಿಪಿಐ 10 ಮಂದಿಯ ಪ್ರಥಮ ಹಂತದ ಪಟ್ಟಿ ಹೀಗಿದೆ
- ನರಸಿಂಹ ರಾಜ- ಅಬ್ದುಲ್ ಮಜೀದ್
- ಪುಲಕೇಶಿ ನಗರ- ಭಾಸ್ಕರ್ ಪ್ರಸಾದ್.
- ಸರ್ವಜ್ಞ ನಗರ – ಅಬ್ದುಲ್ ಹನ್ನಾನ್
- ಬಂಟ್ವಾಳ- ಇಲ್ಯಾಸ್ ಮಹಮ್ಮದ್
- ಮೂಡಬಿದರೆ- ಅಲ್ಪಾನ್ಸೋ ಫ್ರಾಂಕೋ
- ಬೆಳ್ತಂಗಡಿ-ಅಕ್ಬರ್ ಬೆಳ್ತಂಗಡಿ.
- ಕಾಪು -ಹನೀಶ್ ಮುಳೂರು
- ದಾವಣಗೆರೆ ದಕ್ಷಿಣ -ಇಸ್ಮಾಯಿಲ್ ಝಬಿಯುಲ್ಲಾ
- ಚಿತ್ರದುರ್ಗ ಶ್ರೀನಿವಾಸ್ ಬಾಳೆಕಾಯಿ
- ವಿಜಯನಗರ- ನಜೀರ್ ಖಾನ್
ಕೆಜಿಎಫ್ ಬಾಬುರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರಾ?
ಕಾಂಗ್ರೆಸ್ನಿಂದ ಕೆಜಿಎಫ್ ಬಾಬು ಉಚ್ಛಾಟನೆಯಾಗಿದ್ದಾರೆ. ನಿಮ್ಮ ಪಕ್ಷಕ್ಕೆ ಬಂದ್ರೆ ಅವಕಾಶ ಕೊಡ್ತೀರಾ ಎಂಬ ಪ್ರಶ್ನೆಗೆ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಪಕ್ಷಕ್ಕೆ ಒಂದು ಸಿದ್ದಾಂತವಿದೆ, ಶಿಸ್ತಿದೆ. ರೀತಿ ನೀತಿಗಳಿವೆ. ನಮ್ಮದು ಭ್ರಷ್ಟಾಚಾರ ಮುಕ್ತ ಪಕ್ಷ. ನಮ್ಮ ಪಕ್ಷದ ಸಿದ್ದಾಂತವನ್ನ ಒಪ್ಪಿ, ಜನಪರ ಕಾಳಜಿಯಿಂದ ಬರುವವರಿಗೆ ನಮ್ಮ ಪಕ್ಷದಲ್ಲಿ ಅವಕಾಶವಿದೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:30 pm, Sat, 7 January 23