ಸ್ಯಾಂಟ್ರೋ ರವಿಗೆ ನೆರವು, H.S.ದೇವರಾಜ್ ತೆರವು: ಹೊಸ ಕುಮಾರಕೃಪಾ ಅತಿಥಿಗೃಹದ ವ್ಯವಸ್ಥಾಪಕರಾಗಿ ಕಿರಣ್ ಕುಮಾರ್ ನೇಮಕ
ಹೊಸ ಕುಮಾರಕೃಪಾ ಅತಿಥಿಗೃಹದ ವ್ಯವಸ್ಥಾಪಕರಾಗಿ ಕಿರಣ್ ಕುಮಾರ್ ಅವರನ್ನು ನಿಯೋಜಿಸಿ ಕೆಎಸ್ಟಿಡಿಸಿ ಆದೇಶ ಹೊರಡಿಸಿದೆ.
ಬೆಂಗಳೂರು: ಹೊಸ ಕುಮಾರಕೃಪಾ ಅತಿಥಿಗೃಹದ (Kumara Krupa Guest House) ವ್ಯವಸ್ಥಾಪಕರಾಗಿ ಹೋಟೆಲ್ ಮಯೂರ ವ್ಯಾಲಿ ವ್ಯೂನಲ್ಲಿ ಕರ್ತವ್ಯದಲ್ಲಿದ್ದ ಕಿರಣ್ ಕುಮಾರ್ ಅವರನ್ನು ನಿಯೋಜಿಸಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಆದೇಶ ಹೊರಡಿಸಿದೆ. ಈ ಹಿಂದೆ ಇದ್ದ ಹೆಚ್. ಎಸ್ದೇವರಾಜ್ ಸ್ಯಾಂಟ್ರೋ ರವಿಯ ಅಪರಾಧಗಳಿಗೆ ನೆರವು ನೀಡಿದ ಹಿನ್ನೆಲೆ ಎತ್ತಂಗಡಿ ಮಾಡಲಾಗಿದೆ. ಹೀಗಾಗಿ ತೆರವಾದ ಸ್ಥಾನಕ್ಕೆ ಕಿರಣ್ ಕುಮಾರ್ನನ್ನು ನಿಯೋಜನೆ ಮಾಡಲಾಗಿದೆ.
ಯಾರು ಈ ಸ್ಯಾಂಟ್ರೋ ರವಿ, ಈತನ ದೃಷ್ಕೃತ್ಯಗಳ ಕರ್ಮಕಾಂಡ
ಸ್ಯಾಂಟ್ರೋ ರವಿ ಯುವತಿಯರನ್ನು ನಂಬಿಸಿ ಮೋಸ ಮಾಡುವುದು, ವೇಶ್ಯಾವಾಟಿಕೆ ದಂಧೆಗೆ ಇಳಿಸೋದೆ ಅವನ ಕಾಯಕವಾಗಿದೆ. ಆರೋಪಿ ಸ್ಯಾಂಟ್ರೋ ರವಿ (Santro Ravi) ಮೂಲತಃ ಮಂಡ್ಯದವನು. ವಯಸ್ಸು 52. ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ವಾಸವಾಗಿದ್ದನು. ಪಿಯುಸಿ ಡ್ರಾಪ್ ಔಟ್ ಆಗಿದ್ದ ಮಂಜುನಾಥ್ನ ತಂದೆ ಅಬಕಾರಿ ಇಲಾಖೆಯಲ್ಲಿ ಡಿವೈಎಸ್‌ಪಿ ಆಗಿದ್ದರು. ಈತನಿಗೆ ಮದುವೆಯಾಗಿ ಒಂದು ಹೆಣ್ಣು, ಒಂದು ಗಂಡು ಮಗು ಇದೆ.
ಇದನ್ನೂ ಓದಿ: ಸ್ಯಾಂಟ್ರೋ ರವಿಗೆ ಆ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಮಂಡ್ಯ ಡಿವೈಎಸ್‌ಪಿ ಪುತ್ರನ ಸಂಪೂರ್ಣ ಜಾತಕ
ಈತ 1995ರಿಂದ ಹಲವಾರು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಮೈಸೂರು ಬೆಂಗಳೂರು ಸೇರಿ ಹಲವು ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ ಪ್ರಕರಣ ದಾಖಲಾಗಿವೆ. ದ್ವಿಚಕ್ರ ವಾಹನ ಕಳ್ಳತನ, ಕಾರು ಕಳ್ಳತನ, ಅಪಹಣರಣ, ವೇಶ್ಯಾವಾಟಿಕೆ ದಂಧೆ ಪ್ರಕರಣದಲ್ಲಿ ಈತ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. 1995ರಲ್ಲಿ ಮೊದಲ ಬಾರಿಗೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಮಂಜುನಾಥ್ ಆ ಸ್ಯಾಂಟ್ರೋ ಕಾರಿನಲ್ಲಿ ವೇಶ್ಯಾವಾಟಿಕೆ ಹಿನ್ನೆಲೆ ಈತನಿಗೆ ಸ್ಯಾಂಟ್ರೋ ರವಿ ಅಂತಾ ಹೆಸರು ಬಂದಿತ್ತು. ಈತ ಸ್ಯಾಂಟ್ರೋ ಕಾರು ಸಮೇತ ಯುವತಿಯರನ್ನು ಸರಬರಾಜು ಮಾಡುತ್ತಿದ್ದ. ಅದರಲ್ಲೂ ರಷ್ಯಾ ಇರಾನ್ ದೆಹಲಿ ಮುಂಬೈ ಕೊಲ್ಕಾತ್ತಾದಿಂದ ದಂಧೆಗೆ ಯುವತಿಯರನ್ನು ಕಳುಹಿಸುತ್ತಿದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ