ಶಿವಮೊಗ್ಗ: ಸಾಗರ ತಾಲೂಕು ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಿದೆ. ಸಂಜೆಯ ಸಮಯದಲ್ಲಿ ಮಕ್ಕಳ ಚಿಕಿತ್ಸೆಗೆಂದು ನೀಡಿದ ಇಂಜೆಕ್ಷನಿಂದ ಮಕ್ಕಳ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದೆ. ಇದರಿಂದ ಮಕ್ಕಳ ಪೋಷಕರು ಆತಂತಕ್ಕೆ ಒಳಗಾಗಿದ್ದಾರೆ.
ಸಾಗರ ತಾಲೂಕು ಆಸ್ಪತ್ರೆಯಲ್ಲಿ 10 ತಿಂಗಳನಿಂದ 12 ವರ್ಷದ 14 ಮಕ್ಕಳು ಚಿಕಿತ್ಸೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಸಂಜೆಯ ಡೋಸ್ ಜೋನ್ ಎನ್ನುವ ಇಂಜಿಕ್ಷನ್ ನೀಡಿದ್ದಾರೆ. ಈ ಡೋಸ್ ಕೊಟ್ಟ ಕೆಲವೇ ನಿಮಿಷಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಿದೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದ ಮಕ್ಕಳಿಗೆ ಇಂಜೆಕ್ಷನಿಂದ ಅಡ್ಡ ಪರಿಣಾಮದಿಂದ ಆರೋಗ್ಯ ಹದಿಗೆಟ್ಟು ಹೋಗಿದೆ. ನಾಲ್ಕು ಮಕ್ಕಳಲ್ಲಿ ತೀವ್ರ ಚಳಿ ಜ್ವರ ಬಂದಿದೆ. ಇದರ ಪರಿಣಾಮ ನಾಲ್ಕು ಮಕ್ಕಳಿಗೆ ಪೀಡ್ಸ್ ಬಂದಿದೆ. ಕೂಡಲೇ ಮೂರು ಮಕ್ಕಳಾದ ವಿನೋದ(11), ಐರಾಫ್ (10 ತಿಂಗಳು), ಆರ್ಯಗೌಡ 2 ವರ್ಷ 9 ತಿಂಗಳು ಇವರಿಗೆ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ನಿಶ್ಚಿತಾ ಎನ್ನುವ 8 ವರ್ಷದ ಮಗುವನ್ನು ಸರ್ಜಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 10 ಮಕ್ಕಳಿಗೆ ಸಾಗರ ತಾಲೂಕು ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶಿವಮೊಗ್ಗಕ್ಕೆ ಶೀಫ್ಟ್ ಮಾಡಿದ ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾವನ್ನು ಮಕ್ಕಳ ವೈದ್ಯರು ವಹಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಶಿವಮೊಗ್ಗ ಡಿಹೆಚ್‌ಒ ರಾಜೇಶ್ ಸುರಗಿಹಳ್ಳಿ, ಮಕ್ಕಳ ವಾರ್ಡ್ ನಲ್ಲಿ 14 ಮಕ್ಕಳಿಗೆ ಸಂಜೆ ಡೋಸ್ ನೀಡಲಾಯಿತು. ಇಂಜೆಕ್ಷನ್ ನೀಡಿದ ಬಳಿಕ 14 ಮಕ್ಕಳ ಆರೋಗ್ಯದಲ್ಲಿ ಏರು ಪೇರು ಕಂಡು ಬಂದಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ನಾಲ್ಕು ಮಕ್ಕಳಲ್ಲಿ ಒಂದು ಮಗುವಿಗೆ ಪೀಡ್ಸ್ ಬಂದಿದೆ. ಮೂರು ಮಕ್ಕಳಿಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್ ಗೆ ದಾಖಲಿಸಲಾಗಿದೆ. ಒಂದು ಮಗುವನ್ನು ಪೋಷಕರ ಬೇಡಿಕೆಯಂತೆ ಖಾಸಗಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾಲ್ಕು ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಮಕ್ಕಳ ವೈದ್ಯರು 24 ಘಂಟಿ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇನ್ನೂ ಓದಿ: ದುಲ್ಖರ್ ಸಲ್ಮಾನ್-ರಶ್ಮಿಕಾ ಮಂದಣ್ಣ ಅಭಿನಯದ ಸೀತಾ ರಾಮಂ ಚಿತ್ರದ ಟೀಸರ್ ಬಿಡುಗಡೆ
ಸಾಗರ ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳ ವಾರ್ಡ್ ನಲ್ಲಿ ಯಡವಟ್ಟು ಆಗಿದೆ. ಸಂಜೆ ಇಂಜೆಕ್ಷನ್ ನೀಡುವ ಸಮಯದಲ್ಲಿ ಇಂಜೆಕ್ಷನಗೆ ಡಿಸ್ಟಲರಿ ಮೀಕ್ಸ್ ಮಾಡುವ ಏರುಪೇರು ಆಗಿದೆ. ಇದರ ಪರಿಣಾಮ ಇಂಜೆಕ್ಷನ್ ಬಳಿಕ ಮಕ್ಕಳ ಆರೋಗ್ಯ ಹದಿಗೆಟ್ಟಿದೆ. ವಿನೋದ ಎನ್ನುವ 11 ವರ್ಷದ ಬಾಲಕನು ಕಳೆದ ಮೂರು ದಿನಗಳಿಂದ ಸಾಗರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಇನ್ನೇನು ನಾಳೆ ವೈದ್ಯರು ಡಿಸ್ಚಾರ್ಜ್ ಮಾಡುವುದಾಗಿ ತಿಳಿಸಿದ್ದರು. ಇಂದು ಸಂಜೆ ಹಠಾತ್ ಆಗಿ ಇಂಜಿಕ್ಷನ್ ಮಾಡಿದ ಬಳಿಕ ಮಗುವಿನ ಆರೋಗ್ಯ ಏರುಪೇರು ಆಗಿದೆ. ಜಳಿ ಜ್ವರದಿಂದ ಬಳಲುತ್ತಿದ್ದ ಮಗನನ್ನು ಸಾಗರದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಮಗ ಸಂಜೆಯ ವಿಡಿಯೋ ಕಾಲ್ ಮಾಡಿದ್ದನು. ಆದ್ರೆ ವೈದ್ಯರು ಇಂಜೆಕ್ಷನ್ ಕೊಟ್ಟ ಬಳಿಕ ಮಕ್ಕಳ ಆರೋಗ್ಯದ ಅಡ್ಡ ಪರಿಣಾಮ ಬೀರಿದೆ. ಇದು ವೈದ್ಯರ ನಿರ್ಲಕ್ಷ್ಯದಿಂದಲೇ ಸಮಸ್ಯೆಯಾಗಿದೆ ಎಂದು ಪೋಷಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ ವ್ಯವಸ್ಥೆಗಳು ಬದಲಾಗುತ್ತಿಲ್ಲ. ಬಡವರು ಉಚಿತ ಚಿಕಿತ್ಸೆ ಸಿಗುತ್ತದೆಂದು ಸರಕಾರಿ ಆಸ್ಪತ್ರೆಗೆ ದಾಖಳು ಮಾಡಿದ್ರೆ, ಇಲ್ಲಿ ಮಾತ್ರ ವೈದ್ಯರು ಮತ್ತು ಸಿಬ್ಬಂದಿಗಳು ಉತ್ತಮ ಚಿಕಿತ್ಸೆ ಮತ್ತು ಆರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಯಡವಟ್ಟಿಗೆ ಕಾರಣವಾಗಿರುವ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮಕ್ಕೆ ಮಂದಾಗಬೇಕಿದೆ.
ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ
Published On - 9:00 pm, Sun, 26 June 22