ಕೆ ಜಿ ಹಳ್ಳಿ ಗಲಭೆ ನಡೆದಾಗಲೇ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಘಟನೆ ಬ್ಯಾನ್ ಮಾಡಿದ್ದರೆ ಹರ್ಷನ ಕೊಲೆ ನಡೆಯುತ್ತಿರಲಿಲ್ಲ: ಪ್ರತಾಪ್ ಸಿಂಹ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 21, 2022 | 4:41 PM

ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದರೆ ಮತ್ತು ನಾಲ್ಕು ಜನರನ್ನು ಬಂಧಿಸಿ ಜೈಲಿಗೆ ಹಾಕಿದರೆ ಸಾಲದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು, ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಸ್ಥೆಗಳನ್ನು ನಿಷೇಧಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಸರ್ಕಾರವನ್ನು ಒತ್ತಾಯಿಸಿದರು.

ಕೆ ಜಿ ಹಳ್ಳಿ ಗಲಭೆ ನಡೆದಾಗಲೇ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಘಟನೆ ಬ್ಯಾನ್ ಮಾಡಿದ್ದರೆ ಹರ್ಷನ ಕೊಲೆ ನಡೆಯುತ್ತಿರಲಿಲ್ಲ: ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ
Follow us on

ಶಿವಮೊಗ್ಗನಲ್ಲಿ ರವಿವಾರ ನಡೆದ ಬಜರಂಗದಳ (Bajrandal) ಕಾರ್ಯಕರ್ತನ ಹತ್ಯೆ (murder) ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್  (BL Santosh)ಅವರು ಜಿಹಾದಿ ಮೂಲಭೂತವಾದಿಗಳಿಂದ ಹರ್ಷನ (Harsha) ಹತ್ಯೆಯಾಗಿದೆ, ಹಿಜಾಬ್ ವಿರೋಧಿಸಿ ಸಮವಸ್ತ್ರ ಬೆಂಬಲಿಸಿದ್ದಕ್ಕೆ ಅವರನ್ನು ಕೊಲೆ ಮಾಡಲಾಗಿದೆ, ಎಂದು ತಮ್ಮ ಟ್ವೀಟ್​ನಲ್ಲಿ ಹೇಳಿದ್ದು, ಹಿಂದೂ ವಿರೋಧಿಗಳು ಹರ್ಷನನ್ನು ಕೊಲೆ ಮಾಡಿದ್ದಾರೆ, ಅವರ ಕುಟುಂಬದ ಜೊತೆಗೆ ನಾವಿರೋಣ ಅಂತ ಕರೆ ನೀಡಿದ್ದಾರೆ.

ತಮ್ಮ ಮತ್ತೊಂದು ಟ್ವೀಟ್ ನಲ್ಲಿ ಸಂತೋಷ್ ಅವರು, ‘ರಾಷ್ಟ್ರ ವಿರೋಧಿ ಮತ್ತು ಹಿಂದೂ ಮೂಲಭೂತವಾದಿ ಶಕ್ತಿಗಳಿಂದ ಹರ್ಷ ಅವರ ಹತ್ಯೆಯಾಗಿದೆ. ಮುಖಪುಟಗಳಲ್ಲಿ ಅಂತರರಾಷ್ಟ್ರೀಯ ಲಾಬಿಯಿಂದ ಅವರಿಗೆ ಸಂತಾಪ ವ್ಯಕ್ತವಾಗಿಲ್ಲ. ಅವರೊಬ್ಬ ರಾಷ್ಟ್ರವಾದಿ ಮತ್ತು ಹಿಂದೂ ಆಗಿದ್ದರು. ಅವರ ಕುಟುಂಬದ ಜೊತೆ ನಾವಿರೋಣ, ಕೊನೆಯವರೆಗೆ ಅವರೊಂದಿಗಿರೋಣ,’ ಎಂದು ಹೇಳಿದ್ದಾರೆ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಶಿವಮೊಗ್ಗದಲ್ಲಿ ರವಿವಾರ ಸಂಭವಿಸಿರುವ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಕೊಲೆಯನ್ನು ಖಂಡಿಸಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಅವರು, ‘ಬೀದಿಯಲ್ಲಿ ಹರ್ಷ ಅವರ ಕಗ್ಗೊಲೆಯಾಗಿದ್ದು ಅತೀವ ನೋವಾಗಿದೆ ಮತ್ತು ನಮ್ಮ ಸರ್ಕಾರವೇ ಅಧಿಕಾರದಲ್ಲಿರುವ ಸಮಯದಲ್ಲಿ ಕೊಲೆ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಹಿಂದೆ ಮಂಗಳೂರಿನಲ್ಲಿ ಗೋಲಿಬಾರ್ ಮತ್ತು ಕೆ ಜಿ ಹಳ್ಳಿಯಲ್ಲಿ ಗಲಭೆ ನಡೆದಾಗ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಿದ್ದರೆ ಹರ್ಷ ಅವರ ಕೊಲೆ ನಡೆಯುತ್ತಿರಲಿಲ್ಲ,’ ಅಂತ ಹೇಳಿದ ಸಂಸದರು, ‘ಈಗಲಾದರೂ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲಿ,’ ಎಂದರು.

ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದರೆ ಮತ್ತು ನಾಲ್ಕು ಜನರನ್ನು ಬಂಧಿಸಿ ಜೈಲಿಗೆ ಹಾಕಿದರೆ ಸಾಲದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು, ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಸ್ಥೆಗಳನ್ನು ನಿಷೇಧಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಸರ್ಕಾರವನ್ನು ಒತ್ತಾಯಿಸಿದರು.

‘ಹೈದರಾಬಾದ್‌ನಲ್ಲಿ ಅತ್ಯಾಚಾರಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು, ಇಲ್ಲೂ ಅದೇ ರೀತಿ ಕ್ರಮಗಳನ್ನು ಕೈಗೊಂಡರೆ ಪಾಠ ಕಲಿಯುತ್ತಾರೆ. ಕೆ ಜಿ ಹಳ್ಳಿ ಗಲಭೆ ನಡೆದಾಗ ವೇಳೆ ಬೊಮ್ಮಾಯಿ ಗೃಹ ಸಚಿವರಾಗಿದ್ದರು, ಆ ಸಂದರ್ಭದಲ್ಲೇ ಅವರು ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಸ್ಥೆಗಳ ಮೇಲೆ ನಿಷೇಧ ಹೇರಿದ್ದರೆ, ಹರ್ಷ ಅವರ ಕೊಲೆ ನಡೆಯುತ್ತಿರಲಿಲ್ಲ,’ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು

ಏತನ್ಮಧ್ಯೆ, ಮೃತ ಹರ್ಷ ಅವರ ನಿವಾಸಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಸಂಸದ ಬಿ ವೈ ರಾಘವೇಂದ್ರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿದರು.

ಅವರನ್ನು ಸಂತೈಸಿದ ಬಳಿಕ ಉದ್ರಿಕ್ತರನ್ನು ಮನವೊಲಿಸುವ ಪ್ರಯತ್ನ ಮಾಡಿ ಮಾತಾಡಿದ ಈಶ್ವರಪ್ಪನವರು, ‘ನಿಮಗಿಂತ ಹೆಚ್ಚು ರೋಷ ನನಗಿದೆ. ಎನ್ಕೌಂಟರ್ ಎಂದು ಹೇಳಿದ ತಕ್ಷಣವೇ ಹಾಗೆ ಮಾಡಕ್ಕಾಗಲ್ಲ. ಯಾರೊಬ್ಬರೂ ಒಂದೇ ಒಂದು ಕಲ್ಲನ್ನು ಎತ್ತಬಾರದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿ ಎಸ್ ಯಡಿಯೂರಪ್ಪರ ಅವರು ಹೇಳುತ್ತಿರುವುದನ್ನು ನಾವು ಕೇಳಬೇಕು, ಶಾಂತಿಯುತವಾಗಿ ಹರ್ಷನ ಅಂತ್ಯಸಂಸ್ಕಾರ ನಡೆಯಬೇಕು,’ ಎಂದು ಹೇಳಿದರು.

ಇದನ್ನೂ ಓದಿ:  ಬಜರಂಗದಳ ಕಾರ್ಯಕರ್ತ ಹರ್ಷ ಮೃತದೇಹ ಮೆರವಣಿಗೆ ವೇಳೆ ಉದ್ರಿಕ್ತರಿಂದ ಕಲ್ಲು ತೂರಾಟ; ಮತ್ತೆ ಬಿಗು ವಾತಾವರಣ ನಿರ್ಮಾಣ

Published On - 4:39 pm, Mon, 21 February 22