Shivamogga murder: ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ಕೇಸ್ -ಪಕ್ಕದ ಜಿಲ್ಲೆಯಲ್ಲಿ ಒಬ್ಬ ಆರೋಪಿ ಅರೆಸ್ಟ್​

ಶಿವಮೊಗ್ಗ: ಹಿಜಾಬ್‌ಗೂ ಹರ್ಷ ಕೊಲೆಗೂ ಲಿಂಕ್ ಇಲ್ಲ ಅನಿಸುತ್ತಿದೆ, ಸಮಾಧಾನಕರ ಸಂಗತಿಯೆಂದರೆ ಆರೋಪಿಗಳು ಯಾರು ಅಂತಾ ಗೊತ್ತಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಬೆಳಗ್ಗೆ ಹೇಳಿದ್ದರ ಬೆನ್ನಿಗೇ ಇದೀಗ ಶಿವಮೊಗ್ಗ ಪೊಲೀಸರು ಹರ್ಷ ಕೊಲೆ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಹರ್ಷ ಹತ್ಯೆಯಾಗಿತ್ತು. ಇನ್ನೂ ನಾಲ್ವರು ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ನಡೆದಿದೆ ಎಂದು ತಿಳಿದುಬಂದಿದೆ. ಬಜರಂಗದಳ ಕಾರ್ಯಕರ್ತನ ಕೊಲೆ ಕೇಸ್- ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬ […]

Shivamogga murder: ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ಕೇಸ್ -ಪಕ್ಕದ ಜಿಲ್ಲೆಯಲ್ಲಿ ಒಬ್ಬ ಆರೋಪಿ ಅರೆಸ್ಟ್​
ಹರ್ಷ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 21, 2022 | 11:29 AM

ಶಿವಮೊಗ್ಗ: ಹಿಜಾಬ್‌ಗೂ ಹರ್ಷ ಕೊಲೆಗೂ ಲಿಂಕ್ ಇಲ್ಲ ಅನಿಸುತ್ತಿದೆ, ಸಮಾಧಾನಕರ ಸಂಗತಿಯೆಂದರೆ ಆರೋಪಿಗಳು ಯಾರು ಅಂತಾ ಗೊತ್ತಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಬೆಳಗ್ಗೆ ಹೇಳಿದ್ದರ ಬೆನ್ನಿಗೇ ಇದೀಗ ಶಿವಮೊಗ್ಗ ಪೊಲೀಸರು ಹರ್ಷ ಕೊಲೆ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಹರ್ಷ ಹತ್ಯೆಯಾಗಿತ್ತು. ಇನ್ನೂ ನಾಲ್ವರು ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ನಡೆದಿದೆ ಎಂದು ತಿಳಿದುಬಂದಿದೆ.

ಬಜರಂಗದಳ ಕಾರ್ಯಕರ್ತನ ಕೊಲೆ ಕೇಸ್- ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಬ್ಬ ಪೊಲೀಸರ ವಶಕ್ಕೆ? ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಬಳ್ಳಾರಿ ಕ್ಯಾಂಪ್‌ನಲ್ಲಿ ಒಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಶಿವಮೊಗ್ಗದಿಂದ 60 ಕಿಮೀ ದೂರದ ಕಾಫಿನಾಡು ಬೀರೂರಿನ ಬಳ್ಳಾರಿ ಕ್ಯಾಂಪ್ ಗೆ ಬೆಳ್ಳಂಬೆಳಗ್ಗೆ ಬಂದಿದ್ದ ಪೊಲೀಸರು ಒಬ್ಬನನ್ನು ಬಂಧಿಸಿ, ಕರೆದೊಯ್ದಿದ್ದಾರೆ. ಶಿವಮೊಗ್ಗ ಪೊಲೀಸರಿಗೆ ಕಾಫಿನಾಡಿನ‌ ಪೊಲೀಸರು ಸಾಥ್ ನೀಡಿದ್ದಾರೆ.

ನಮ್ಮ ಸಂಘಟನೆಯ ಕಾರ್ಯಕರ್ತನ ಹತ್ಯೆಯಾಗಿದೆ, ಆರೋಪಿಗಳ ಸುಳಿವು ಸಿಕ್ಕಿದೆ -ಸಿಎಂ ಬೊಮ್ಮಾಯಿ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸಂಘಟನೆಯ ಒಬ್ಬ ಕಾರ್ಯಕರ್ತನ ಹತ್ಯೆಯಾಗಿದೆ. ಕೊಲೆ ಆರೋಪಿಗಳ ಸುಳಿವು ಸಿಕ್ಕಿದೆ ಎಂಬ ಮಾಹಿತಿ ಇದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತಾರೆಂಬ ವಿಶ್ವಾಸವಿದೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಸರ್ಕಾರ ಕ್ರಮಕೈಗೊಳ್ಳುತ್ತದೆ. ಶಿವಮೊಗ್ಗ ಜನತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆ, ಮನೆಯಲ್ಲಿ ಪೂಜೆ ಬಳಿಕ ಶವಯಾತ್ರೆ: ನಿನ್ನೆ ರಾತ್ರಿ ಹತ್ಯೆಗೀಡಾದ ಬಜರಂಗ ದಳ ಕಾರ್ಯಕರ್ತ ಹರ್ಷ ಮರಣೋತ್ತರ ಪರೀಕ್ಷೆ ನಡೆದಿದೆ. ಶಿವಮೊಗ್ಗ ನಗರದ ಮೃತ ಹರ್ಷ ನಿವಾಸ ರವಿವರ್ಮ ಬೀದಿಯಲ್ಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಮನೆಗೆ ರವಾನೆ ತೆಗೆದುಕೊಂಡು ಹೋಗಲಾಗುವುದು. ಮನೆಯಲ್ಲಿ ಪೂಜೆ ಬಳಿಕ ಶವ ಯಾತ್ರೆ ಆರಂಭವಾಗಲಿದೆ. ಸಿದ್ದಯ್ಯ ರಸ್ತೆ, ಗಾಂಧಿ ಬಜಾರ್, ಶಿವಪ್ಫ ನಾಯಕ ವೃತ್ತ, ಬಿ ಎಚ್ ರಸ್ತೆ ಮಾರ್ಗ ಮೂಲಕ ಶವಯಾತ್ರೆ ನಡೆಯಲಿದೆ. ಶಿವಮೊಗ್ಗದ ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಮರಾಠಾ ಬಾವಸಾರದ ವಿಧಿ ವಿಧಾನದಂತೆ ಅಂತಿಮ ಕ್ರಿಯೆ ನೆರವೇರಲಿದೆ.

ನಿನ್ನೆ ಬಜರಂಗ ದಳ ಕಾರ್ಯಕರ್ತ ಹರ್ಷ ಕಗ್ಗೊಲೆ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ: ಕಾರ್ ನಂ ಸಿಓ 1396. ಆದರೆ ಇದು ನಕಲಿ ಪ್ಲೇಟ್ ನಂಬರ್ ಎನ್ನಲಾಗಿದೆ. ಕಾರ್ ನಲ್ಲಿ ನಾಲ್ಕು ಜನರು ಇದ್ದರು. ಆಟೋದಲ್ಲಿ ಒಬ್ಬ ಬಂದು ಮಾರಕಾಸ್ತ್ರ ಕೊಟ್ಟಿದ್ದಾನೆ. ಮಥುರಾ ಟಿಂಬರ್ ಬಳಿ ಕಾರ್ ನಿಂತಿತ್ತು. ಐದು ನಿಮಿಷ ಕಾರ್ ನಲ್ಲಿ ಬಂದಿತ್ತು. ಕನ್ಸರವೆನ್ಸಿ ರಸ್ತೆಯಿಂದ ಬರ್ಚಿ, ಮಾರಕಾಸ್ತ್ರ ತೆಗೆದುಕೊಂಡು ಹೋಗಿದ್ದಾರೆ. 8.45 ರಿಂದ 8.50 ನಡುವೆ ಹತ್ಯೆ ಘಟನೆ ನಡೆದಿದೆ. ಹರ್ಷ ಒಬ್ಬನೇ ಮಗ. ಆತನಿಗೆ ಇಬ್ಬರು ಅಕ್ಕಂದಿರು ಇದ್ದಾರೆ.

ಕೇರಳದಲ್ಲಿ ತರಬೇತಿ ಪಡೆದು ಕೃತ್ಯವೆಸಗುತ್ತಿದ್ದಾರೆ -ಪ್ರಮೋದ್​ ಮುತಾಲಿಕ್: ಮುಸಲ್ಮಾನ್ ಗೂಂಡಾಗಳು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಮಾಡಿದ್ದಾರೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್ ಸಹ ಆರೋಪಿಸಿದ್ದಾರೆ. ಕೇರಳದಲ್ಲಿ ತರಬೇತಿ ಪಡೆದು ಬಂದು ಕೃತ್ಯವೆಸಗುತ್ತಿದ್ದಾರೆ. ಹತ್ಯೆ ಹಿಂದೆ PFI, CFI, SDFI ಅವರ ಕೈವಾಡ ಇದೆ. ಬಜರಂಗ ದಳ ಕಾರ್ಯಕರ್ತನ ಹತ್ಯೆಯನ್ನ ವಿರೋಧಿಸುತ್ತೇನೆ. ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ. ಮುಸ್ಲಿಂ ಸಮುದಾಯಕ್ಕೆ ನಾನು ಎಚ್ಚರಿಕೆ ಕೊಡುತ್ತೇನೆ. ಇದು ತಾಲಿಬಾನ್, ಆಫ್ಘಾನಿಸ್ತಾನ ಅಲ್ಲ ಎಂದು ವಾರ್ನಿಂಗ್ ಕೊಟ್ಟ ಪ್ರಮೋದ ಮುತಾಲಿಕ್ ಇಲ್ಲಿ ಕಾನೂನು ಸಂವಿಧಾನ ಇದೆ. ತಲ್ವಾರ್​​ ಹಿಡಿದುಕೊಂಡು ಬಂದರೆ ನಾವು ಕೇಳುವುದಿಲ್ಲ ಎಂದು ಹೇಳಿದ್ದು, ಹರ್ಷನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Also Read: ‘ಮುಸಲ್ಮಾನ ಗೂಂಡಾಗಳು ಹಿಂದೂ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ’ – ಸಚಿವ ಕೆ ಎಸ್​ ಈಶ್ವರಪ್ಪ ಗಂಭೀರ ಆರೋಪ

Also Read: Shivamogga: ಮಲೆನಾಡು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ! ಬೆಚ್ಚಿಬಿದ್ದ ಮಲೆನಾಡು ಜನ

Bajrang Dal Activist Harsha Murder Case: ಇಂದು ಸಂಜೆ ಅಥವಾ ನಾಳೆ ಒಳಗೆ ಆರೋಪಿಗಳ ಬಂಧನ

Published On - 10:12 am, Mon, 21 February 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ