ಹೊನ್ನಾಳಿ ಚಂದ್ರಶೇಖರ್ ಸಾವಿನ ವಿಚಾರ: ವಿನಯ್ ಗುರೂಜಿ ಹೆಸರು ತಳಕು- ಶಿವಮೊಗ್ಗದಲ್ಲಿ ಭಕ್ತರಿಂದ ಸುದ್ದಿಗೋಷ್ಟಿ
Vinay Guruji: ಚಂದ್ರಶೇಖರ್ ಸಾವಿನ ವಿಚಾರದಲ್ಲಿ ಆಧ್ಯಾತ್ಮ ಗುರು ವಿನಯ್ ಗುರೂಜಿ ಹೆಸರು ತಳಕು ಹಾಕಿಕೊಂಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ವಿನಯ್ ಗುರೂಜಿ ಭಕ್ತರು ಸುದ್ದಿಗೋಷ್ಟಿ ನಡೆಸಿದ್ದಾರೆ.
ಶಿವಮೊಗ್ಗ: ಹೊನ್ನಾಳಿ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ (MP Renukacharya) ಸಹೋದರನ ಮಗ ಚಂದ್ರಶೇಖರ್ ಸಾವಿನ ವಿಚಾರದಲ್ಲಿ ಆಧ್ಯಾತ್ಮ ಗುರು ವಿನಯ್ ಗುರೂಜಿ ಹೆಸರು ತಳಕು ಹಾಕಿಕೊಂಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ( Shivamogga) ವಿನಯ್ ಗುರೂಜಿ (Vinay Guruji) ಭಕ್ತರಿಂದ ಸುದ್ದಿಗೋಷ್ಟಿ ನಡೆದಿದೆ. ಸುದ್ದಿಗೋಷ್ಟಿಯಲ್ಲಿ ವಿನಯ್ ಗುರೂಜಿ ಭಕ್ತ ಶಂಕರ್ ಮಾತನಾಡಿದ್ದು, ಆರೇಳು ವರ್ಷದ ಹಳೆಯ ವಿಡಿಯೋಗಳನ್ನು ವೈಭವೀಕರಿಸಲಾಗುತ್ತಿದೆ. ಚಂದ್ರು ಸಾವಿಗೂ, ಗುರೂಜಿ ಹಾಗೂ ಮಠಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅನಗತ್ಯವಾಗಿ ಆಶ್ರಮದ ಮೇಲೆ ಆಪಾದನೆ ಹೊರಿಸೋದು ಸರಿಯಲ್ಲ:
ಘಟನೆ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸತ್ಯಾಸತ್ಯತೆ ಹೊರಗೆ ಬರುತ್ತೆ. ಅನಗತ್ಯವಾಗಿ ಆಶ್ರಮದ ಮೇಲೆ ಆಪಾದನೆ ಹೊರಿಸೋದು ಸರಿಯಲ್ಲ. ಹಳೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡೋದನ್ನ ನಿಲ್ಲಿಸಿ. ಅವಹೇಳನ ಸಂಬಂಧ ಕಾನೂನು ಹೋರಾಟ ಪ್ರಾರಂಭಿಸಿದ್ದೇವೆ. ನವಂಬರ್ 14 ರಂದು ಶಿವಮೊಗ್ಗದ ಭಕ್ತವೃಂದದಿಂದ ಪ್ರತಿಭಟನೆ ಸಹ ಮಾಡುತ್ತಿದ್ದೇವೆ. ನಗರದ ಶಿವಪ್ಪನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿ, ಮನವಿ ಸಲ್ಲಿಸುತ್ತೇವೆ ಎಂದು ಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಸಿಸಿಐ ಅಭಯ ಹಸ್ತ; ಎರಡನೇ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಗ್ರೆಗ್ ಬಾರ್ಕ್ಲೇ
ಇದನ್ನೂ ಓದಿ: ಡಿವೋರ್ಸ್ ಆದ ಒಂದು ವರ್ಷದ ಬಳಿಕ ಸಮಂತಾ ರುತ್ ಪ್ರಭು, ನಾಗ ಚೈತನ್ಯ ತೆರೆಯ ಮೇಲೆ ಒಂದಾಗಲು ನಿರ್ಧರಿಸಿದ್ದಾರಾ?