ಬಿಸಿಸಿಐ ಅಭಯ ಹಸ್ತ; ಎರಡನೇ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಗ್ರೆಗ್ ಬಾರ್ಕ್ಲೇ
ICC chairman: ಐಸಿಸಿ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಎರಡನೇ ಅವಧಿಗೆ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಬಾರ್ಕ್ಲೇ ಅವರು ಮುಂದಿನ ಎರಡು ವರ್ಷಗಳ ಕಾಲ ಐಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಐಸಿಸಿ ಅಧ್ಯಕ್ಷರಾಗಿ (ICC chairman) ಗ್ರೆಗ್ ಬಾರ್ಕ್ಲೇ (Greg Barclay) ಎರಡನೇ ಅವಧಿಗೆ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಬಾರ್ಕ್ಲೇ ಅವರು ಮುಂದಿನ ಎರಡು ವರ್ಷಗಳ ಕಾಲ ಐಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ವಾಸ್ತವವಾಗಿ, ಐಸಿಸಿ ಅಧ್ಯಕ್ಷ ಹುದ್ದೆಗಾಗಿ ಬಾರ್ಕ್ಲೇ ಜೊತೆಗೆ ಜಿಂಬಾಬ್ವೆಯ ತವೆಂಗ್ವಾ ಮುಕುಹಲಾನಿ ಕೂಡ ಸ್ಪರ್ಧಿಸಲಿದ್ದಾರೆ ಎಂಬ ಮಾತು ಆರಂಭದಲ್ಲಿ ಕೇಳಿಬಂದಿತ್ತು. ಆದರೆ ತವೆಂಗ್ವಾ ಮುಕುಹಲಾನಿ ತಮ್ಮ ನಿರ್ಧಾರದಿಂದ ಹಿಂದೆ ಸರಿದ ಕಾರಣ ಬಾರ್ಕ್ಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಬಾರ್ಕ್ಲೇ, ಐಸಿಸಿಯ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾಗಿರುವುದು ನನಗೆ ಗೌರವವಾಗಿದೆ. ತನ್ನನ್ನು ಬೆಂಬಲಿಸಿದ ಐಸಿಸಿಯ ಸಹ ನಿರ್ದೇಶಕರಿಗೆ ಧನ್ಯವಾದಗಳು ಎಂದಿದ್ದಾರೆ.
ಮೊದಲ ಬಾರಿಗೆ, ಬಾರ್ಕ್ಲೇ ನವೆಂಬರ್ 2020 ರಲ್ಲಿ ಐಸಿಸಿ ಅಧ್ಯಕ್ಷ ಕುರ್ಚಿ ಏರಿದ್ದರು. ನ್ಯೂಜಿಲೆಂಡ್ ಕ್ರಿಕೆಟ್‌ನ ಅಧ್ಯಕ್ಷರಾಗಿದ್ದ ಬಾರ್ಕ್ಲೇ ಆಗಿನ ಐಸಿಸಿ ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್ ಸ್ಥಾನಕ್ಕೆ ಎಂಟ್ರಿಕೊಟ್ಟಿದ್ದರು. ಅದಕ್ಕೂ ಮುನ್ನ 2015 ರಲ್ಲಿ ಬಾರ್ಕ್ಲೇ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನ ನಿರ್ದೇಶಕರಾಗಿದ್ದರು. ಬಾರ್ಕ್ಲಿ ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ 17 ಸದಸ್ಯರ ಮಂಡಳಿಯಲ್ಲಿ ಬಿಸಿಸಿಐ ಕೂಡ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡಿದೆ.
ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್ ಇತಿಹಾಸದಲ್ಲಿ 10 ವಿಕೆಟ್ಗಳ ಜಯ ಸಾಧಿಸಿದ ತಂಡಗಳಿವು
ಬಾರ್ಕ್ಲೇಗೆ ಬಿಸಿಸಿಐ ಅಭಯ ಹಸ್ತ
ಬಿಸಿಸಿಐ ಆಗಲೇ ಗ್ರೆಗ್ ಬಾರ್ಕ್ಲಿಯ ಬೆಂಬಲಕ್ಕೆ ನಿಂತಿತ್ತು. ಈ ಹಿಂದೆ ನಡೆದ ಬಿಸಿಸಿಐ ಎಜಿಎಂನಲ್ಲೂ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿದ್ದರು. ಮತ್ತೊಂದೆಡೆ, ಈ ಬಾರಿಯ ಚುನಾವಣೆಯ ಬಗ್ಗೆ ಹೇಳಬೇಕೆಂದರೆ, ಹೊಸ ನಿಯಮದ ಆಧಾರದ ಮೇಲೆ ಈ ಬಾರಿಯ ಐಸಿಸಿ ಅಧ್ಯಕ್ಷ ಚುನಾವಣೆಯನ್ನು ನಡೆಸಲಾಯಿತು. ವಾಸ್ತವವಾಗಿ, ಕಳೆದ ವರ್ಷ ಅಧ್ಯಕ್ಷರನ್ನು ಮೂರನೇ ಎರಡರಷ್ಟು ಬಹುಮತದ ಆಧಾರದ ಮೇಲೆ ಆಯ್ಕೆ ಮಾಡಲಾಗಿತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಈ ಬಾರಿ ಐಸಿಸಿಯ ಅಧ್ಯಕ್ಷರನ್ನು ಸರಳ ಬಹುಮತದಿಂದ ಆಯ್ಕೆ ಮಾಡಲಾಗಿದೆ.
ಗಂಗೂಲಿ ಹೆಸರೂ ಕೇಳಿಬಂದಿತ್ತು
ಅದೇ ಸಮಯದಲ್ಲಿ, ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಸುದ್ದಿಯೂ ಇತ್ತು. ಆದರೆ ಗಂಗೂಲಿಗೆ ಬಿಸಿಸಿಐ ಬೆಂಬಲ ಸಿಗಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಗಂಗೂಲಿಗೆ ಐಪಿಎಲ್ ಅಧ್ಯಕ್ಷ ಸ್ಥಾನವನ್ನು ನೀಡಲು ಬಿಸಿಸಿಐ ಮುಂದಾಗಿತ್ತು. ಆದರೆ ಗಂಗೂಲಿಗೆ ಐಸಿಸಿ ಅಧ್ಯಕ್ಷ ಹುದ್ದೆ ಅಥವಾ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರೆಯುವ ಬಯಕೆ ಇತ್ತು. ಹೀಗಾಗಿ ಬಿಸಿಸಿಐ ನೀಡಿದ್ದ ಆಫರನ್ನು ದಾದಾ ನಿರಾಕರಿಸಿದ್ದರು. ಇದಾದ ನಂತರ ಗಂಗೂಲಿ ಐಸಿಸಿ ಅಧ್ಯಕ್ಷ ಸ್ಥಾನದ ರೇಸ್‌ಗೆ ಎಂಟ್ರಿಕೊಟ್ಟಿದ್ದರು. ಆದರೆ ಭಾರತೀಯ ಕ್ರಿಕೆಟ್ ಮಂಡಳಿ ದಾದಾರನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ ಗಂಗೂಲಿ ಈ ರೇಸ್ನಿಂದ ಹೊರಬಿದ್ದಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:31 pm, Sat, 12 November 22