AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟೀಂ ಇಂಡಿಯಾ ಕೆಟ್ಟ ಕ್ರಿಕೆಟ್ ಆಡಿದೆ’; ರೋಹಿತ್ ಪಡೆಗೆ ಚೋಕರ್ಸ್​ ಪಟ್ಟಕಟ್ಟಿದ 1983ರ ವಿಶ್ವಕಪ್ ಹೀರೋ..!

T20 World Cup 2022: ನಾನು ತಂಡವನ್ನು ತುಂಬಾ ಕಟುವಾಗಿ ಟೀಕಿಸುವುದಿಲ್ಲ. ಏಕೆಂದರೆ ಇದೇ ಆಟಗಾರರು ಈ ಹಿಂದೆ ನಮಗೆ ಹಲವು ಗೆಲುವುಗಳ ಮೂಲಕ ಸಂಭ್ರಮಾಚರಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

‘ಟೀಂ ಇಂಡಿಯಾ ಕೆಟ್ಟ ಕ್ರಿಕೆಟ್ ಆಡಿದೆ’; ರೋಹಿತ್ ಪಡೆಗೆ ಚೋಕರ್ಸ್​ ಪಟ್ಟಕಟ್ಟಿದ 1983ರ ವಿಶ್ವಕಪ್ ಹೀರೋ..!
ರೋಹಿತ್ ಶರ್ಮಾ
TV9 Web
| Updated By: ಪೃಥ್ವಿಶಂಕರ|

Updated on:Nov 12, 2022 | 12:13 PM

Share

ಕಳೆದ 9 ವರ್ಷಗಳಿಂದ ಐಸಿಸಿ ಟೂರ್ನಿಯನ್ನು ಗೆಲ್ಲುವಲ್ಲಿ ವಿಫಲವಾಗಿರುವ ಟೀಂ ಇಂಡಿಯಾ (Team India) ಈ ಬಾರಿಯ ಟಿ20 ವಿಶ್ವಕಪ್​ನಲ್ಲೂ (T20 World Cup 2022) ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿದೆ. 2013 ರಿಂದ ಪ್ರಶಸ್ತಿ ಗೆಲ್ಲಲು ಕಾಯುತ್ತಿರುವ ಟೀಂ ಇಂಡಿಯಾಕ್ಕೆ ನಾಕೌಟ್ ಸುತ್ತಿನ ಅಡಚಣೆಯನ್ನು ದಾಟಲು ಮತ್ತೊಮ್ಮೆ ಸಾಧ್ಯವಾಗಲಿಲ್ಲ. ಅದರಲ್ಲೂ ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ ಪಂದ್ಯದಲ್ಲಿ 10 ವಿಕೆಟ್​ಗಳ ಹೀನಾಯ ಸೋಲನುಭವಿಸಿರುವ ರೋಹಿತ್ ಪಡೆಯ ಮೇಲೆ ಟೀಕೆಗಳ ಸುರಿಮಳೆಯಾಗುತ್ತಿದೆ. ಅದರಲ್ಲೂ 1983ರ ವಿಶ್ವಕಪ್ ಹೀರೋ ಕಪಿಲ್ ದೇವ್ (Kapil Dev) ಟೀಂ ಇಂಡಿಯಾವನ್ನು ಕ್ರಿಕೆಟ್ ದುನಿಯಾದ ಹೊಸ ಚೋಕರ್ಸ್’ಎಂದು ಕರೆದಿದ್ದಾರೆ.

ಕ್ರಿಕೆಟ್ ಲೋಕದಲ್ಲಿ ಚೋಕರ್‌ಗಳ ಬಗ್ಗೆ ಚರ್ಚೆ ಬಂದಾಗಲೆಲ್ಲಾ, ಮೊದಲು ಬರುವ ಹೆಸರೇ ದಕ್ಷಿಣ ಆಫ್ರಿಕಾ ತಂಡ. ಈ ತಂಡ 1992 ರಿಂದ ಪ್ರತಿ ವಿಶ್ವಕಪ್‌ನಲ್ಲೂ ಪ್ರಶಸ್ತಿಯ ಪ್ರಮುಖ ಸ್ಪರ್ಧಿಯಾಗಿ ಕಣಕ್ಕಿಳಿಯುತ್ತದೆ. ಆದರೆ ಸೆಮಿಫೈನಲ್‌ನಿಂದ ಮುಂದಕ್ಕೆ ಹೋಗಲು ಈ ತಂಡಕ್ಕೆ ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ ಹರಿಣಗಳನ್ನು ‘ಚೋಕರ್ಸ್’ ಎಂದು ಕರೆಯಲಾಗುತ್ತದೆ. ಕ್ರೀಡೆಗಳಲ್ಲಿ ಪ್ರಮುಖ ಪಂದ್ಯಗಳನ್ನು ಗೆಲ್ಲಲು ವಿಫಲವಾದ ತಂಡಗಳನ್ನು , ಚೋಕರ್‌ಗಳು ಎಂದು ಕರೆಯಲಾಗುತ್ತದೆ. ಹೀಗಾಗಿ ಸತತ ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳಲ್ಲಿ ಸೋತ ತಂಡಕ್ಕೆ ಈ ಚೋಕರ್ಸ್​ ಪದಕ ನೀಡಲಾಗುತ್ತದೆ.

ಟೀಂ ಇಂಡಿಯಾಕ್ಕೀಗ ಚೋಕರ್ಸ್ ಪಟ್ಟ

​ ಟಿ20 ವಿಶ್ವಕಪ್‌ನಿಂದ ಹಿಡಿದು ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಇತ್ತೀಚೆಗೆ ಏಷ್ಯಾಕಪ್‌ನಂತಹ ಟೂರ್ನಿಗಳಲ್ಲಿ ಭಾರತ ತಂಡ ನಾಕೌಟ್ ಸುತ್ತಿನಲ್ಲಿಯೇ ಸೋತು ಹೊರಬಿದ್ದಿದೆ. ಕಳೆದ 9 ವರ್ಷಗಳಲ್ಲಿ, 8 ಐಸಿಸಿ ಟೂರ್ನಿಗಳಲ್ಲಿ, ಟೀಂ ಇಂಡಿಯಾ 7 ಸೆಮಿಫೈನಲ್ ಅಥವಾ ಫೈನಲ್‌ಗಳಲ್ಲಿ ಸೋತಿದೆ. ಈಗ ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿನ ನಂತರ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ 1983 ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಟೀಂ ಇಂಡಿಯಾವನ್ನು ಚೋಕರ್ಸ್​ ಎಂದು ಕರೆದಿದ್ದಾರೆ.

ಇದನ್ನೂ ಓದಿ: PAK vs ENG: 1992 ವಿಶ್ವಕಪ್‌ ಇತಿಹಾಸ ರಿಪೀಟ್ ಅಥವಾ ರೀವೆಂಜ್? ಅಬ್ಬಬ್ಬಾ.. ಎಷ್ಟೊಂದು ಕಾಕತಾಳೀಯ..!

ತಂಡದ ಬಗ್ಗೆ ಮಾತನಾಡಿದ ಕಪಿಲ್, ನಾನು ತಂಡವನ್ನು ತುಂಬಾ ಕಟುವಾಗಿ ಟೀಕಿಸುವುದಿಲ್ಲ. ಏಕೆಂದರೆ ಇದೇ ಆಟಗಾರರು ಈ ಹಿಂದೆ ನಮಗೆ ಹಲವು ಗೆಲುವುಗಳ ಮೂಲಕ ಸಂಭ್ರಮಾಚರಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಹೌದು, ನಾವು ಅವರನ್ನು ‘ಚೋಕರ್ಸ್’ ಎಂದು ಕರೆಯಬಹುದು. ಏಕೆಂದರೆ ಪ್ರತಿ ಐಸಿಸಿ ಟೂರ್ನಿಯಲ್ಲಿ ಇಷ್ಟು ಹತ್ತಿರ ಬಂದ ಮೇಲೆ ಸೋಲನ್ನು ಎದುರಿಸುತ್ತಿದ್ದೇವೆ ಎಂದ ಮೇಲೆ ಅವರನ್ನು ಚೋಕರ್ಸ್​ ಎನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ.

ಆದರೆ, ತಂಡವು ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದೆ. ಆದ್ದರಿಂದ ಮತ್ತಷ್ಟು ಟೀಕೆಗಳು ಸರಿಯಲ್ಲ. ನಾನು ಒಪ್ಪುತ್ತೇನೆ, ಭಾರತ ಕೆಟ್ಟ ಕ್ರಿಕೆಟ್ ಆಡಿದೆ. ಆದರೆ ಕೇವಲ ಒಂದು ಪಂದ್ಯದ ಆಧಾರದ ಮೇಲೆ ನಾವು ಅತಿಯಾಗಿ ಟೀಕಿಸಲು ಸಾಧ್ಯವಿಲ್ಲ” ಎಂದು 1983 ರಲ್ಲಿ ಮೊದಲ ಬಾರಿಗೆ ಭಾರತವನ್ನು ವಿಶ್ವ ಚಾಂಪಿಯನ್ ಮಾಡಿದ ಕಪಿಲ್ ದೇವ್ ಹೇಳಿದ್ದಾರೆ.

9 ವರ್ಷಗಳಿಂದ ಇದೇ ಸ್ಥಿತಿ

ಕಳೆದ 9 ವರ್ಷಗಳಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, 2014 ರ ಟಿ20 ವಿಶ್ವಕಪ್ (ಫೈನಲ್), 2015 ರ ಏಕದಿನ ವಿಶ್ವಕಪ್ (ಸೆಮಿಫೈನಲ್), 2016 ಟಿ20 ವಿಶ್ವಕಪ್ (ಸೆಮಿಫೈನಲ್), 2017 ಚಾಂಪಿಯನ್ಸ್ ಟ್ರೋಫಿ (ಫೈನಲ್), 2019 ಏಕದಿನ ವಿಶ್ವಕಪ್ (ಸೆಮಿ-ಫೈನಲ್) 2021 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲನುಭವಿಸಿದೆ. 2021ರ ಟಿ20 ವಿಶ್ವಕಪ್‌ನಲ್ಲಿ, ತಂಡಕ್ಕೆ ಸೆಮಿಫೈನಲ್ ತಲುಪಲು ಸಾಧ್ಯವಾಗಿರಲಿಲ್ಲ. ಈಗ ಒಂದು ವರ್ಷದ ನಂತರ ಸೆಮಿಫೈನಲ್‌ನಲ್ಲಿ 10 ವಿಕೆಟ್‌ಗಳ ಆಘಾತಕಾರಿ ಸೋಲಿನೊಂದಿಗೆ ಟೀಂ ಇಂಡಿಯಾ ವಿಶ್ವಕಪ್​ ಎತ್ತಿಹಿಡಿಯುವಲ್ಲಿ ವಿಫಲವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Sat, 12 November 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್