PAK vs ENG: 1992 ವಿಶ್ವಕಪ್ ಇತಿಹಾಸ ರಿಪೀಟ್ ಅಥವಾ ರೀವೆಂಜ್? ಅಬ್ಬಬ್ಬಾ.. ಎಷ್ಟೊಂದು ಕಾಕತಾಳೀಯ..!
T20 World Cup 2022: 1992ರ ವಿಶ್ವಕಪ್‌ನಲ್ಲೂ ಇದೇ ರೀತಿಯಲ್ಲಿ ಪಾಕಿಸ್ತಾನ ತಂಡ ಫೈನಲ್ ಪ್ರವೇಶಿಸಿತ್ತು. ಇದಾದ ಬಳಿಕ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದುಕೊಂಡಿತ್ತು.
ಬುಧವಾರ ಸಿಡ್ನಿಯಲ್ಲಿ ನಡೆದ ಟಿ20 ವಿಶ್ವಕಪ್ 2022 (T20 World Cup 2022)ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು (Pakistan defeated New Zealand) ಏಳು ವಿಕೆಟ್‌ಗಳಿಂದ ಸೋಲಿಸುವುದರೊಂದಿಗೆ ಫೈನಲ್‌ಗೆ ತಲುಪಿತ್ತು. ಕೆಲ ದಿನಗಳ ಹಿಂದೆ ವಿಶ್ವಕಪ್‌ನಿಂದ ಬಹುತೇಕ ಹೊರಗುಳಿದಿದ್ದ ಪಾಕಿಸ್ತಾನಕ್ಕೆ ಅದೃಷ್ಟ ಸರಿಯಾದ ಸಮಯದಲ್ಲಿ ಕೈಹಿಡಿಯಿತು. ಸೂಪರ್ 12 ಸುತ್ತಿನಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿದ ದಕ್ಷಿಣ ಆಫ್ರಿಕಾ ನಿರ್ಣಾಯಕ ಪಂದ್ಯದಲ್ಲಿ ಕ್ರಿಕೆಟ್ ಶಿಶುಗಳ ಎದುರು ಮಂಡಿಯೂರಿ ವಿಶ್ವಕಪ್‌ನಿಂದ ಹೊರಬಿತ್ತು. ಹಾಗೆಯೇ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಪಾಕಿಸ್ತಾನ ಮಿಕ್ಕ ಪಂದ್ಯಗಳಲ್ಲಿ ಗೆಲ್ಲುವುದರೊಂದಿಗೆ ಸೆಮಿಫೈನಲ್ಗೆ ಲಗ್ಗೆ ಇಟ್ಟಿತ್ತು. ಇದರೊಂದಿಗೆ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿರುವ ಬಾಬರ್ ಪಡೆ 1992 ರ ಏಕದಿನ ವಿಶ್ವಕಪ್‌ನ ಇತಿಹಾಸವನ್ನು ಪುನರಾವರ್ತಿಸುವ ತವಕದಲ್ಲಿದೆ. ಅಷ್ಟಕ್ಕೂ ಪಾಕಿಸ್ತಾನ ತಂಡದ ಟಿ20 ವಿಶ್ವಕಪ್ ಪ್ರಯಾಣ 1992 ರ ವಿಶ್ವಕಪ್ನಂತೆಯೇ ಸಾಗಿಬಂದಿದೆ. ಹೀಗಾಗಿ ಎಲ್ಲರೂ ಹಿಂದಿನ ಇತಿಹಾಸ ಮರುಕಳಿಸಲಿದೆ ಎಂಬ ಅಭಿಪ್ರಾಯದಲ್ಲಿದ್ದಾರೆ.
1992ರ ವಿಜಯದ ಅದ್ಭುತ ಕಾಕತಾಳೀಯ
ಪಾಕಿಸ್ತಾನ ಕ್ರಿಕೆಟ್ ತಂಡ ಈ ವಿಶ್ವಕಪ್‌ನಲ್ಲಿ ಹಲವು ಏರಿಳಿತಗಳೊಂದಿಗೆ ಫೈನಲ್ ತಲುಪಿದೆ. ಈ ಹಿಂದೆಯೂ ಪಾಕಿಸ್ತಾನದ ವಿಷಯದಲ್ಲಿ ಹೀಗೇ ಆಗಿತ್ತು. 1992ರ ವಿಶ್ವಕಪ್‌ನಲ್ಲೂ ಇದೇ ರೀತಿಯಲ್ಲಿ ಪಾಕಿಸ್ತಾನ ತಂಡ ಫೈನಲ್ ಪ್ರವೇಶಿಸಿತ್ತು. ಇದಾದ ಬಳಿಕ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದುಕೊಂಡಿತ್ತು. ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನದ ಗೆಲುವು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ತಾಜಾವಾಗಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್‌ನಿಂದ ಔಟ್; ದ್ರಾವಿಡ್ ಟೀಂಗೆ ವಿಶ್ರಾಂತಿ, ಲಕ್ಷ್ಮಣ್ಗೆ ಕೋಚಿಂಗ್ ಜವಾಬ್ದಾರಿ
ಇಷ್ಟೊಂದು ಕಾಕತಾಳೀಯ
- ಈ ಬಾರಿಯಂತೆ 1992 ರಲ್ಲೂ ಆಸ್ಟ್ರೇಲಿಯಾವೇ ವಿಶ್ವಕಪ್ ಆತಿಥ್ಯ ವಹಿಸಿತ್ತು.
- 1992 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಮೆಲ್ಬೋರ್ನ್‌ನಲ್ಲಿಯೇ ಸೋತಿತ್ತು. ಈ ಬಾರಿಯೂ ಪಾಕಿಸ್ತಾನ ಭಾರತದೆದುರು ಸೋತಿದೆ.
- ಈ ಸೀಸನ್ನಂತೆಯೇ 1992 ರ ವಿಶ್ವಕಪ್‌ನಲ್ಲಿ ಲೀಗ್ ಸುತ್ತಿನಿಂದಲೇ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿತ್ತು.
- ಈ ಬಾರಿಯಂತೆ 1992 ರ ವಿಶ್ವಕಪ್‌ನಲ್ಲೂ ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು.
- ಇದಲ್ಲದೇ 1992ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಕನಿಷ್ಠ 9 ಅಂಕಗಳೊಂದಿಗೆ ಸೆಮಿಫೈನಲ್ ತಲುಪಿತ್ತು. ಈ ಬಾರಿಯ ಟಿ-20 ವಿಶ್ವಕಪ್‌ನಲ್ಲೂ ಇದೇ ರೀತಿ ಆಗಿದೆ.
- ಸೆಮಿಫೈನಲ್ ಪ್ರವೇಶಿದ ಎಲ್ಲಾ 4 ತಂಡಗಳ ಪೈಕಿ ಪಾಕಿಸ್ತಾನದ್ದೇ ಅಂತ್ಯತ ಕಡಿಮೆ ಅಂಕಗಳಾಗಿದೆ. 1992 ರ ವಿಶ್ವಕಪ್‌ನಲ್ಲೂ ಇದೇ ಪರಿಸ್ಥಿತಿ ಇತ್ತು.
1992 ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ಜಯಗಳಿಸಿತು. ಇದಲ್ಲದೇ ಆಗಿನ ಫೈನಲ್‌ನಲ್ಲಿ ಪಾಕಿಸ್ತಾನ ಇಂಗ್ಲೆಂಡ್ ತಂಡವನ್ನು ಸೋಲಿಸಿ ಟ್ರೋಫಿ ಎತ್ತಿಹಿಡಿದಿತ್ತು. ಈ ಬಾರಿಯೂ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಇದರಲ್ಲಿ ಪಾಕಿಸ್ತಾನ ಗೆದ್ದರೆ 1992 ರ ವಿಶ್ವಕಪ್ ಗೆಲುವಿನ ಎಲ್ಲಾ ಘಟನೆಗಳು ಈ ವಿಶ್ವಕಪ್‌ನಲ್ಲೂ ಪುನರಾವರ್ತನೆಯಾದಂತೆ ಆಗಲಿದೆ.
ಟಿ20 ವಿಶ್ವಕಪ್ ವಿಜೇತರ ಪಟ್ಟಿ
- 2007 ಭಾರತ
- 2009 ಪಾಕಿಸ್ತಾನ
- 2010 ಇಂಗ್ಲೆಂಡ್
- 2012 ವೆಸ್ಟ್ ಇಂಡೀಸ್
- 2014 ಶ್ರೀಲಂಕಾ
- 2016 ವೆಸ್ಟ್ ಇಂಡೀಸ್
- 2021 ಆಸ್ಟ್ರೇಲಿಯಾ
- 2022 -?
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:30 am, Sat, 12 November 22