ಟಿ20 ವಿಶ್ವಕಪ್​ನಿಂದ ಔಟ್; ದ್ರಾವಿಡ್​ ಟೀಂಗೆ ವಿಶ್ರಾಂತಿ, ಲಕ್ಷ್ಮಣ್​ಗೆ ಕೋಚಿಂಗ್ ಜವಾಬ್ದಾರಿ

ತಂಡದ ಕೋಚಿಂಗ್ ಸ್ಟಾಫ್​ನಲ್ಲಿ ಬದಲಾವಣೆ ಆಗಲಿದ್ದು, ರಾಹುಲ್ ದ್ರಾವಿಡ್ ಸ್ಥಾನಕ್ಕೆ ವಿವಿಎಸ್ ಬರಲಿದ್ದಾರೆ ಎಂಬ ಸುದ್ದಿ ಇದೆ. ಆದಾಗ್ಯೂ, ಈ ಬದಲಾವಣೆ ಕೇವಲ ಒಂದು ಸರಣಿಗೆ ಮಾತ್ರ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

ಟಿ20 ವಿಶ್ವಕಪ್​ನಿಂದ ಔಟ್; ದ್ರಾವಿಡ್​ ಟೀಂಗೆ ವಿಶ್ರಾಂತಿ, ಲಕ್ಷ್ಮಣ್​ಗೆ ಕೋಚಿಂಗ್ ಜವಾಬ್ದಾರಿ
ಮುಖ್ಯ ಕೋಚ್ ರಾಹುಲ್ ದ್ರಾವಿಡ್
Follow us
TV9 Web
| Updated By: ಪೃಥ್ವಿಶಂಕರ

Updated on:Nov 11, 2022 | 12:31 PM

ಐಸಿಸಿ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಭಾರತದ ಪಯಣ ಅಂತ್ಯಗೊಂಡಿದೆ. ಗುರುವಾರ ಅಡಿಲೇಡ್‌ ಓವಲ್‌ನಲ್ಲಿ ಇಂಗ್ಲೆಂಡ್‌ ಎದುರು ಟೀಂ ಇಂಡಿಯಾ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ರೋಹಿತ್ ಪಡೆಯ ಕನಸು ಭಗ್ನಗೊಂಡಿದೆ. ಅಂದಿನಿಂದ ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಬದಲಾವಣೆಗಳಾಗಲಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ತಂಡದ ಕೋಚಿಂಗ್ ಸ್ಟಾಫ್​ನಲ್ಲಿ ಬದಲಾವಣೆ ಆಗಲಿದ್ದು, ರಾಹುಲ್ ದ್ರಾವಿಡ್ (Rahul Dravid) ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ (VVS. Laxman) ಬರಲಿದ್ದಾರೆ ಎಂಬ ಸುದ್ದಿ ಇದೆ. ಆದಾಗ್ಯೂ, ಈ ಬದಲಾವಣೆ ಕೇವಲ ಒಂದು ಸರಣಿಗೆ ಮಾತ್ರ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

ಟಿ20 ವಿಶ್ವಕಪ್ ಬಳಿಕ ಭಾರತ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಸರಣಿ ಆಡಬೇಕಿದೆ. ಭಾರತ ತಂಡ ಈ ತಿಂಗಳು ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಮೂರು ಟಿ20 ಮತ್ತು ಅಷ್ಟೂ ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದಕ್ಕಾಗಿ ಬಿಸಿಸಿಐ ಈಗಾಗಲೇ ಟೀಂ ಇಂಡಿಯಾವನ್ನು ಪ್ರಕಟಿಸಿದೆ.

ರಾಹುಲ್ ಮತ್ತು ಕಂಪನಿಗೆ ವಿಶ್ರಾಂತಿ

ಆಂಗ್ಲ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಏಷ್ಯಾಕಪ್‌ನಿಂದ ನಿರಂತರವಾಗಿ ತಂಡದೊಂದಿಗಿರುವ ಕೋಚಿಂಗ್ ಸಿಬ್ಬಂದಿಗೆ ಟಿ20 ವಿಶ್ವಕಪ್ ನಂತರ ವಿರಾಮ ನೀಡಲಾಗುವುದು. ಹೀಗಾಗಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬೌಲಿಂಗ್ ಕೋಚ್ ಪರಸ್ ಮಹಾಂಬ್ರೆ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನವನ್ನು ವಿ.ವಿ.ಎಸ್. ಲಕ್ಷ್ಮಣ್, ಹೃಷಿಕೇಶ್ ಕಾನಿಟ್ಕರ್ (ಬ್ಯಾಟಿಂಗ್ ಕೋಚ್), ಸಾಯಿರಾಜ್ ಬಹುಲೆ (ಬೌಲಿಂಗ್ ಕೋಚ್) ತುಂಬಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Rohit Sharma: ಧೋನಿಯ ಗುಣಗಳು ಮೈದಾನದಲ್ಲಿ ಕಾಣಲಿಲ್ಲ; ಈ ವಿಶ್ವಕಪ್​ನಲ್ಲಿ ರೋಹಿತ್ ಮಾಡಿದ ತಪ್ಪುಗಳಿವು..!

ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ತನ್ನ ವರದಿಯಲ್ಲಿ, “ಸಪೋರ್ಟ್ ಸ್ಟಾಫ್ – ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬೌಲಿಂಗ್ ಕೋಚ್ ಪರಾಸ್, ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿರುವ ಬ್ಯಾಟಿಂಗ್ ಕೋಚ್ ವಿಕ್ರಮ್, ಪಂದ್ಯಾವಳಿಯ ನಂತರ ಮನೆಗೆ ಮರಳಲಿದ್ದು, ಕೆಲವು ದಿನಗಳ ವಿಶ್ರಾಂತಿ ಪಡೆಯಲಿದ್ದಾರೆ. ಆ ಬಳಿಕ ಇವರೆಲ್ಲರು ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಹಾಗೆಯೇ ತೆರವಾದ ಈ ಜಾಗಗಳಿಗೆ ಲಕ್ಷ್ಮಣ್ ಜೊತೆಗೆ ರಿಷಿಕೇಶ್ ಮತ್ತು ಬಹುಲೆ ಸೇರಿಕೊಂಡಿದ್ದಾರೆ ಎಂದು ತಿಳಿಸಿದೆ.

ಲಕ್ಷ್ಮಣ್​ಗೆ ಈಗಾಗಲೇ ಈ ಜವಬ್ದಾರಿ ನೀಡಲಾಗಿತ್ತು

ಆದಾಗ್ಯೂ, ಲಕ್ಷ್ಮಣ್, ರಿಷಿಕೇಶ್ ಮತ್ತು ಬಹುಲೆ ಅವರನ್ನು ಟೀಮ್ ಇಂಡಿಯಾದೊಂದಿಗೆ ಕಳುಹಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಈ ಮೂವರೂ ತಂಡದೊಂದಿಗೆ ಕೆಲಸ ಮಾಡಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿ ಮೊದಲ ಬಾರಿಗೆ ಲಕ್ಷ್ಮಣ್​ ಟೀಂಗೆ ತಂಡದ ಜವಾಬ್ದಾರಿಯನ್ನು ನೀಡಲಾಗಿತ್ತು. ಇದರ ನಂತರ, ಅವರು ಏಷ್ಯಾಕಪ್‌ಗೆ ಮುನ್ನ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದೊಂದಿಗೆ ತೆರಳಿದ್ದರು. ದಕ್ಷಿಣ ಆಫ್ರಿಕಾದೊಂದಿಗೆ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲೂ ಇದೇ ತಂಡ ಟೀಂ ಇಂಡಿಯಾದೊಂದಿಗಿತ್ತು. ಈ ಮೂವರು ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದು, ಲಕ್ಷ್ಮಣ್ ಎನ್‌ಸಿಎ ಮುಖ್ಯಸ್ಥರಾಗಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Fri, 11 November 22

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು