Rohit Sharma: ಧೋನಿಯ ಗುಣಗಳು ಮೈದಾನದಲ್ಲಿ ಕಾಣಲಿಲ್ಲ; ಈ ವಿಶ್ವಕಪ್​ನಲ್ಲಿ ರೋಹಿತ್ ಮಾಡಿದ ತಪ್ಪುಗಳಿವು..!

T20 World Cup 2022: ರೋಹಿತ್ ಐಪಿಎಲ್‌ನಲ್ಲಿ ನಾಯಕರಾಗಿದ್ದಾಗ, ಮಹೇಂದ್ರ ಸಿಂಗ್ ಧೋನಿ ಅವರ ಗ್ಲಿಂಪ್ಸಸ್ ಇದೆ ಎಂದು ಅನೇಕ ಬಾರಿ ಹೇಳಲಾಗಿತ್ತು. ಅಂದರೆ ಧೋನಿಯಂತೆ ರೋಹಿತ್ ಒತ್ತಡ-ಸಹಿಷ್ಣು ಮತ್ತು ಶಾಂತ ನಾಯಕ ಎಂದು ಹೇಳಲಾಗುತ್ತಿತ್ತು.

Rohit Sharma: ಧೋನಿಯ ಗುಣಗಳು ಮೈದಾನದಲ್ಲಿ ಕಾಣಲಿಲ್ಲ; ಈ ವಿಶ್ವಕಪ್​ನಲ್ಲಿ ರೋಹಿತ್ ಮಾಡಿದ ತಪ್ಪುಗಳಿವು..!
ರೋಹಿತ್ ಶರ್ಮಾ
Follow us
TV9 Web
| Updated By: ಪೃಥ್ವಿಶಂಕರ

Updated on:Nov 11, 2022 | 12:09 PM

ಈ ಬಾರಿಯ ವಿಶ್ವಕಪ್​ (T20 World Cup 2022) ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಟೀಂ ಇಂಡಿಯಾ ಕೂಡ ಒಂದಾಗಿತ್ತು. ಇದಕ್ಕೆ ಹಲವು ಕಾರಣಗಳಿದ್ದರೂ ರೋಹಿತ್ ಶರ್ಮಾ (Rohit Sharma) ಟೀಂ ಇಂಡಿಯಾ ನಾಯಕತ್ವ ವಹಿಸಿರುವುದು ಒಂದು ಕಾರಣವಾಗಿತ್ತು. ರೋಹಿತ್ ಶರ್ಮಾ.. ತನ್ನ ಅದ್ಭುತ ನಾಯಕತ್ವದ ಮೂಲಕ ಮುಂಬೈ ಇಂಡಿಯನ್ಸ್‌ ತಂಡವನ್ನು ಐಪಿಎಲ್​ನಲ್ಲಿ ಐದೈದು ಬಾರಿ ಚಾಂಪಿಯನ್ ಮಾಡಿದ್ದ ನಾಯಕ. ಈ ಹಿಂದೆ ವಿರಾಟ್ ಕೊಹ್ಲಿ (Virat Kohli) ಟೀಂ ಇಂಡಿಯಾದ ನಾಯಕರಾಗಿದ್ದಾಗ, ರೋಹಿತ್ ಉಪನಾಯಕರಾಗಿದ್ದರು. ಕೊಹ್ಲಿ ವಿಶ್ರಾಂತಿ ಪಡೆದಾಗಲೆಲ್ಲ ರೋಹಿತ್ ತಂಡದ ನಾಯಕತ್ವವನ್ನು ನಿರ್ವಹಿಸುತ್ತಿದ್ದರು. ಅಲ್ಲದೆ ನಾಯಕತ್ವವಹಿಸುತ್ತಿದ್ದ ಪಂದ್ಯಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ರೋಹಿತ್ ಉತ್ತಮ ದಾಖಲೆಯನ್ನು ಮಾಡಿದ್ದರು. ಹೀಗಾಗಿ ಕೊಹ್ಲಿಗಿಂತ ರೋಹಿತ್ ಉತ್ತಮ ನಾಯಕ ಎಂದು ಹೇಳಲಾಗುತ್ತಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ನಾಯಕತ್ವವು ಕಪ್ ಗೆಲ್ಲುವಲ್ಲಿ ಯಾವುದೇ ಕೆಲಸ ಮಾಡಲಿಲ್ಲ.

ವಿರಾಟ್ ಕೊಹ್ಲಿ ತಂಡದ ನಾಯಕರಾಗಿದ್ದಾಗ, ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ ಎಂದು ಹಲವರು ಟೀಕಿಸಿದ್ದರು. ದೊಡ್ಡ ಟೂರ್ನಿಗಳಲ್ಲಿ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಕೊಹ್ಲಿ ನಾಯಕತ್ವಕ್ಕೆ ಇಲ್ಲ ಎಂದು ಹಲವು ದಿಗ್ಗಜರು ಹೇಳಿದ್ದರು. ಅವರ ನಾಯಕತ್ವದಲ್ಲಿ ಭಾರತ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಸೋತಿತ್ತು. ಬಳಿಕ 2019 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲುಂಡಿತ್ತು. ಹಾಗೆಯೇ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲೂ ಸೂಪರ್-12 ಹಂತವನ್ನು ಮೀರಿ ತಂಡಕ್ಕೆ ಸೆಮಿಫೈನಲ್​ಗೆ ಹೋಗಲು ಸಾಧ್ಯವಾಗಲಿಲ್ಲ.

ನಾಯಕತ್ವದಲ್ಲೂ ಫೇಲ್?

ಹೀಗಾಗಿ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಹಿಟ್​ಮ್ಯಾನ್​ಗೆ ತಂಡದ ಕಮಾಂಡ್ ನೀಡಲಾಗಿತ್ತು. ಅಲ್ಲದೆ ದ್ವಿಪಕ್ಷೀಯ ಸರಣಿಗಳಲ್ಲಿ ಗೆಲುವಿನ ನಾಗಾಲೋಟದಲ್ಲಿ ಪಯಣಿಸುತ್ತಿದ್ದ ತಂಡ ರೋಹಿತ್ ನಾಯಕತ್ವದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಆಡಿತ್ತು. ಈ ಬಾರಿಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಬಲಿಷ್ಠ ಆಟ ಪ್ರದರ್ಶಿಸಿ ಸೆಮಿಫೈನಲ್‌ಗೂ ಎಂಟ್ರಿಕೊಟ್ಟಿತ್ತು. ಆದರೆ ಮತ್ತೊಮ್ಮೆ ಟೀಂ ಇಂಡಿಯಾ ಬಿಗ್ ಮ್ಯಾಚ್​ನಲ್ಲಿ ಸೋತು ಹೊರಬಿದ್ದಿದೆ. ಇದು ಸೋಲಿನ ವಿಷಯವಲ್ಲ. ಗೆಲುವು ಮತ್ತು ಸೋಲು ಆಟದ ಭಾಗವಾಗಿರುವುದು ಸಹಜ. ಆದರಿಲ್ಲಿ ಎಲ್ಲರಿಗೂ ಕಾಡುತ್ತಿರುವುದು ರೋಹಿತ್ ನಾಯಕತ್ವ ಹೇಗಿತ್ತು ಎಂಬುದು. ಈ ವಿಶ್ವಕಪ್‌ನಲ್ಲಿ ಅವರ ನಾಯಕತ್ವವನ್ನು ನೋಡಿದರೆ, ಅವರ ಅನೇಕ ನಿರ್ಧಾರಗಳನ್ನು ಪ್ರಶ್ನಿಸಲಾಗುತ್ತಿದ್ದು, ತಂಡದ ಆಯ್ಕೆ ಅಥವಾ ಮೈದಾನದಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಎಲ್ಲರೂ ರೋಹಿತ್​ರನ್ನು ದೂರುತ್ತಿದ್ದಾರೆ.

ಚಹಾಲ್ ಮೇಲೆ ನಂಬಿಕೆ ಇಡದ ರೋಹಿತ್

ತಂಡದ ಆಯ್ಕೆಯಲ್ಲಿ ರೋಹಿತ್‌ ಅವರನ್ನು ಹೆಚ್ಚು ಟೀಕಿಸಲಾಗುತ್ತಿದೆ. ಪ್ಲೇಯಿಂಗ್-11 ರಲ್ಲಿ ಅವರು ಮಾಡಿದ ಆಯ್ಕೆಗಳು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಮೊದಲ ಪ್ರಶ್ನೆಯೆಂದರೆ, ಯುಜ್ವೇಂದ್ರ ಚಹಾಲ್‌ನಂತಹ ವಿಕೆಟ್‌ ಟೇಕರ್‌ಗೆ ರೋಹಿತ್ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ನೀಡಲಿಲ್ಲ. ನಿಸ್ಸಂಶಯವಾಗಿ ರವಿಚಂದ್ರನ್ ಅಶ್ವಿನ್ ಅನುಭವಿ ಆಟಗಾರ. ಆದರೆ ಅವರ ಇತ್ತೀಚಿನ ಪ್ರದರ್ಶನವು ಅವರು ಟಿ20 ಕ್ರಿಕೆಟ್​ನಲ್ಲಿ ವಿಕೆಟ್ ಟೇಕರ್ ಅಲ್ಲ ಎಂದು ತೋರಿಸುತ್ತದೆ. ಆದರೆ ಈ ಹಿಂದೆ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಚಹಾಲ್ ಮಧ್ಯಮ ಓವರ್‌ಗಳಲ್ಲಿ ತಂಡಕ್ಕೆ ಯಶಸ್ಸನ್ನು ನೀಡುತ್ತಿದ್ದಿದ್ದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಅವರನ್ನು ತಂಡಗಳಲ್ಲಿ ಆಯ್ಕೆ ಮಾಡಬೇಕಾಯಿತು. ಅಡಿಲೇಡ್‌ನಲ್ಲಿ ಸೆಮಿಫೈನಲ್ ನಡೆದಿದ್ದರಿಂದ ಇಲ್ಲಿ ಚಹಾಲ್ ಪರಿಣಾಮಕಾರಿಯಾಗುತ್ತಿದ್ದರು. ಆದರೆ ರೋಹಿತ್ ಅವರಿಗೆ ಅವಕಾಶ ನೀಡಲಿಲ್ಲ.

ಇದನ್ನೂ ಓದಿ: ‘ಅಯ್ಯಯ್ಯೋ ಇದು ನನ್ನ ಟ್ವೀಟ್’; ಭಾರತವನ್ನು ತೆಗಳುವ ಬರದಲ್ಲಿ ಮತ್ತೊಬ್ಬರ ಟ್ವೀಟ್ ಕದ್ದ ಪಾಕ್ ಪ್ರಧಾನಿ

ಪಂತ್ ಮತ್ತು ಕಾರ್ತಿಕ್ ಆಯ್ಕೆಯಲ್ಲಿ ಗೊಂದಲ

ದಿನೇಶ್ ಕಾರ್ತಿಕ್ ಅವರನ್ನು ಫಿನಿಶರ್ ಆಗಿ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಕಾರ್ತಿಕ್ ವಿಶ್ವಕಪ್‌ನ ನಾಲ್ಕು ಪಂದ್ಯಗಳಲ್ಲಿ ಆಡಿದ್ದರೂ, ಒಂದೇ ಪಂದ್ಯದಲ್ಲಿ ಅದ್ಭುತಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಪಂತ್ ಜಿಂಬಾಬ್ವೆ ವಿರುದ್ಧ ಅವಕಾಶ ಪಡೆದಿದ್ದರಾದರೂ ಅವರೂ ಕೂಡ ಯಶಸ್ವಿಯಾಗಲಿಲ್ಲ. ಸೆಮಿಫೈನಲ್‌ನಲ್ಲೂ ಪಂತ್​ಗೆ ಅವಕಾಶ ನೀಡಲಾಯಿತು. ಈ ಇಬ್ಬರ ನಡುವಿನ ಆಯ್ಕೆಯಲ್ಲಿ ರೋಹಿತ್ ಗೊಂದಲಕ್ಕೊಳಗಾದರು. ಕಾರ್ತಿಕ್ ಮೊದಲ ನಾಲ್ಕು ಪಂದ್ಯಗಳಲ್ಲಿ ಹೆಚ್ಚು ಬ್ಯಾಟಿಂಗ್ ಮಾಡಲು ಅವಕಾಶವನ್ನು ಪಡೆಯಲಿಲ್ಲ. ಆದ್ದರಿಂದ ಜಿಂಬಾಬ್ವೆ ವಿರುದ್ಧ ರೋಹಿತ್ ಅವರನ್ನು ತಂಡದಿಂದ ಕೈಬಿಟ್ಟಾಗ ಅವರ ನಿರ್ಧಾರದ ಮೇಲೆ ಪ್ರಶ್ನೆಗಳು ಎದ್ದವು.

ಬ್ಯಾಟ್ಸ್‌ಮನ್ ಆಗಿ ವಿಫಲ

ನಾಯಕನ ಬಗ್ಗೆ ಹೇಳುವುದಾದರೆ, ಅವರು ತಮ್ಮ ಪ್ರದರ್ಶನದಿಂದ ಮಾದರಿ ಮತ್ತು ತಂಡವನ್ನು ಪ್ರೇರೇಪಿಸುವ ವ್ಯಕ್ತಿಯಾಗಬೇಕು. ಆದರೆ ಇಲ್ಲಿಯೂ ರೋಹಿತ್ ವಿಫಲರಾದರು. ಈ ಬಾರಿಯ ವಿಶ್ವಕಪ್‌ನಲ್ಲಿ ಅವರ ಬ್ಯಾಟ್‌ನಿಂದ ಕೇವಲ ಒಂದು ಅರ್ಧಶತಕ ಮಾತ್ರ ಹೊರಬಂತು. ಅಲ್ಲದೆ ಸೆಮಿಫೈನಲ್‌ನಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ತಂಡದ ಮೇಲೆ ರೋಹಿತ್ ಒತ್ತಡ ಹೇರಿದರು.

ಒತ್ತಡ ನಿಭಾಯಿಸುವಲ್ಲಿ ವಿಫಲ

ರೋಹಿತ್ ಐಪಿಎಲ್‌ನಲ್ಲಿ ನಾಯಕರಾಗಿದ್ದಾಗ, ಮಹೇಂದ್ರ ಸಿಂಗ್ ಧೋನಿ ಅವರ ಗ್ಲಿಂಪ್ಸಸ್ ಇದೆ ಎಂದು ಅನೇಕ ಬಾರಿ ಹೇಳಲಾಗಿತ್ತು. ಅಂದರೆ ಧೋನಿಯಂತೆ ರೋಹಿತ್ ಒತ್ತಡ-ಸಹಿಷ್ಣು ಮತ್ತು ಶಾಂತ ನಾಯಕ ಎಂದು ಹೇಳಲಾಗುತ್ತಿತ್ತು. ಆದರೆ ರೋಹಿತ್ ನಾಯಕತ್ವ ವಹಿಸಿಕೊಂಡಾಗಿನಿಂದ, ಒತ್ತಡ ಬಂದಾಗ ಅವರು ಮೈದಾನದಲ್ಲೇ ಅಸಮಾಧಾನಗೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಸೆಮಿಫೈನಲ್‌ನಲ್ಲಿ ಮತ್ತೊಮ್ಮೆ ರೋಹಿತ್ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂಗ್ಲೆಂಡ್ ಯಾವುದೇ ವಿಕೆಟ್ ಕಳೆದುಕೊಳ್ಳದೆ 169 ರನ್ ಗಳಿಸಿತು.

ಆದಾಗ್ಯೂ, ರೋಹಿತ್ ತಂಡದ ನಾಯಕತ್ವವನ್ನು ವಹಿಸಿಕೊಂಡು ಕೇವಲ ಒಂದು ವರ್ಷವಾಗಿದೆ. ಇದು ನಾಯಕನಾಗಿ ಅವರ ಮೊದಲ ಪ್ರಮುಖ ಪಂದ್ಯಾವಳಿಯಾಗಿದೆ. ಈ ಸೋಲಿನ ನಂತರ ರೋಹಿತ್ ನಾಯಕತ್ವ ತೊರೆಯಬೇಕು ಎಂದು ಹೇಳುವುದು ತರವಲ್ಲ. ಆದರೆ ನಾಯಕನಾಗಿ ರೋಹಿತ್ ಸಾಕಷ್ಟು ಸುಧಾರಿಸಬೇಕಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:04 pm, Fri, 11 November 22

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ